ಬೆಂಗಳೂರು: ವರದಕ್ಷಿಣೆ (Dowry) ಕಿರುಕುಳಕ್ಕೆ ಬೇಸತ್ತು ವಿಷ ಸೇವಿಸಿ ಟೆಕ್ಕಿ (Techie) ಗೃಹಿಣಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರಿನ ವರ್ತೂರು ಪೊಲೀಸ್ ಠಾಣಾ (Bengaluru Varthur Police Station) ವ್ಯಾಪ್ತಿಯಲ್ಲಿ ನಡೆದಿದೆ.
ಟೆಕ್ಕಿ ಗೃಹಿಣಿ ಮಾಧುರಿ (26) ಮೃತ ಮಹಿಳೆ. ಗುರುಪ್ರಸಾದ್ ಎಂಬಾತನೊಂದಿಗೆ 2016ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದ ಮಾಧುರಿ ಕಳೆದ ಗುರುವಾರ ವಿಷ ಸೇವಿಸಿ ಆತ್ಮಹತ್ಯೆಗೆ (Suicide) ಯತ್ನಿಸಿದ್ದಾಳೆ. ಮಂಗಳವಾರ (ಜ.31) ಚಿಕಿತ್ಸೆ ಫಲಕಾರಿಯಾಗದೇ ಖಾಸಗಿ ಆಸ್ಪತ್ರೆಯಲ್ಲಿ (Private Hospital) ಸಾವನ್ನಪ್ಪಿದ್ದಾಳೆ. ಇದನ್ನೂ ಓದಿ: ಶುದ್ಧ ಹಿಂದೂಗಳು ರಾಮಮಂದಿರಕ್ಕೆ ವಿರೋಧ ಮಾಡಲ್ಲ – ಸಿ.ಟಿ ರವಿ
ಮದುವೆಯಾದ (Marriage) ಆರಂಭದಲ್ಲಿ ಸಂಸಾರ ಚೆನ್ನಾಗಿಯೇ ಇತ್ತು. ಕೆಲ ವರ್ಷಗಳ ನಂತರ ಇಬ್ಬರ ನಡುವೆ ಜಗಳ ಶುರುವಾಗಿದೆ. ಮದುವೆಯಾದ್ರೂ ಮತ್ತೊಬ್ಬಳು ಯುವತಿಯ ಜೊತೆ ಪತಿ ಗುರುಪ್ರಸಾದ್ ಅಕ್ರಮ ಸಂಬಂಧ ಹೊಂದಿದ್ದ ಎನ್ನಲಾಗಿದೆ. ಈ ಬಗ್ಗೆ ಗೊತ್ತಾಗಿದ್ದೇ ತಡ ಮಾಧುರಿ ಆತನನ್ನ ಪ್ರಶ್ನೆ ಮಾಡಲು ಶುರು ಮಾಡಿದ್ದಾಳೆ. ಆಗಾಗ್ಗೆ ಇಬ್ಬರ ನಡುವೆ ಜಗಳ ನಡೆಯುತ್ತಿತ್ತು. ಇದರಿಂದ ಪತಿ ವರದಕ್ಷಿಣೆಗಾಗಿ ಮಾಧುರಿಗೆ ಕಿರುಕುಳ ನೀಡುತ್ತಿದ್ದ ಅಂತಾ ಗುರುಪ್ರಸಾದ್ ಮತ್ತು ಕುಟುಂಬಸ್ಥರ ವಿರುದ್ಧ ವರ್ತೂರು ಠಾಣೆಗೆ ದೂರು ನೀಡಲಾಗಿತ್ತು.
ಇದರ ಹೊರತಾಗಿಯೂ ಕಳೆದ ಗುರುವಾರ ಮನೇಲಿ ಮತ್ತೆ ಜಗಳ ಶುರುವಾಗಿದೆ. ಈ ವೇಳೆ ಮಾಧುರಿ ಮನನೊಂದು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ನಂತರ ಆಕೆಯನ್ನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದ್ರೆ ಚಿಕಿತ್ಸೆ ಫಲಕಾರಿಯಾಗದೆ ಮಂಗಳವಾರ ಸಾವನ್ನಪ್ಪಿದ್ದಾಳೆ. ಮಗಳ ಸಾವಿಗೆ ಪತಿ ಗುರುಪ್ರಸಾದ್ ಹಾಗೂ ಕುಟುಂಬಸ್ಥರೇ ಕಾರಣ ಎಂದು ಮಾಧುರಿ ಕುಟುಂಬಸ್ಥರು ಆರೋಪಿಸಿದ್ದಾರೆ. ಇದನ್ನೂ ಓದಿ: ಸಿದ್ದರಾಮಯ್ಯರನ್ನ ಕೆಣಕಲ್ಲ, ಡಿಕೆಶಿ ಸಿಂಗಲ್ ಟಾರ್ಗೆಟ್- ರಮೇಶ್ ಶಪಥ?
ಸದ್ಯ ಘಟನೆ ನಡೆಯುತ್ತಿದ್ದಂತೆ ಗುರುಪ್ರಸಾದ್ ಮತ್ತು ಕುಟುಂಬಸ್ಥರು ಎಸ್ಕೇಪ್ ಆಗಿದ್ದಾರೆ. ಈ ಸಂಬಂಧ ವರ್ತೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ತನಿಖೆ ಶುರು ಮಾಡಿರೋ ಪೊಲೀಸರು ಗುರುಪ್ರಸಾದ್ ಕುಟುಂಬದ ಓರ್ವ ವ್ಯಕ್ತಿಯನ್ನ ವಶಕ್ಕೆ ಪಡೆದಿದ್ದಾರೆ. ಉಳಿದವರಿಗಾಗಿ ಶೋಧ ಆರಂಭಿಸಿದ್ದಾರೆ.
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k