ನವವಿವಾಹಿತೆ ಟೆಕ್ಕಿ ಅನುಮಾನಸ್ಪದ ಸಾವು – ವರದಕ್ಷಿಣೆ ಕಿರುಕುಳ ಆರೋಪ

Public TV
1 Min Read
Chikkaballapura 1

ಚಿಕ್ಕಬಳ್ಳಾಪುರ: ನವವಿವಾಹಿತೆ ಟೆಕ್ಕಿ ಅನುಮಾನಸ್ಪದವಾಗಿ ಸಾವನ್ನಪ್ಪಿರುವ ಘಟನೆ ಚಿಕ್ಕಬಳ್ಳಾಪುರ ನಗರದ ಪ್ರಶಾಂತ ನಗರದಲ್ಲಿ ನಡೆದಿದೆ.

ಪ್ರಶಾಂತ ನಗರದ ಮನೆಯ ಮೂರನೇ ಅಂತಸ್ತಿನ ಸ್ಟೋರ್ ರೂಂನಲ್ಲಿ ನವ್ಯ(23) ಫ್ಯಾನಿಗೆ ನೇಣು ಬಿಗಿದುಕೊಂಡು ಸಾವನ್ನಪ್ಪಿರುವ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ. ಘಟನಾ ಸ್ಥಳಕ್ಕೆ ಚಿಕ್ಕಬಳ್ಳಾಪುರ ನಗರ ಪೊಲೀಸರು ಹಾಗೂ ತಾಲೂಕು ದಂಡಾಧಿಕಾರಿ ಗಣಪತಿ ಶಾಸ್ತ್ರೀ ಭೇಟಿ ನೀಡಿ ಪರಿಶೀಲನೆ ನಡೆಸಿ ಮೃತದೇಹವನ್ನ ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಯ ಶವಾಗಾರಕ್ಕೆ ರವಾನಿಸಿದ್ದಾರೆ.

Chikkaballapura

ಇತ್ತ ಮೃತಳ ಸಂಬಂಧಿಕರು ಗಂಡ ಚೇತನ್ ಹಾಗೂ ಅತ್ತೆ ಮಾವನ ವಿರುದ್ಧ ವರದಕ್ಷಿಣೆ ಕಿರುಕುಳದ ಆರೋಪ ಹೊರಿಸಿದ್ದಾರೆ. ತಮ್ಮ ಮಗಳ ಮೇಲೆ ಹಲ್ಲೆ ಮಾಡಿ ಕೊಲೆ ಮಾಡಿ ತದನಂತರ ನೇಣು ಹಾಕಿದ್ದಾರೆ ಅಂತ ಆರೋಪಿಸಿದ್ದಾರೆ. ಮತ್ತೊಂದೆಡೆ ಮಗಳನ್ನು ಕಳೆದುಕೊಂಡ ದುಃಖದ ಮಡುವಿನಲ್ಲಿರುವ ಮೃತಳ ಸಂಬಂಧಿಕರು ಗಂಡ ಚೇತನ್ ಮೇಲೆ ಮುಗಿ ಬಿದ್ದು ಹಲ್ಲೆ ನಡೆಸಿದ್ದಾರೆ.

Police Jeep 1 1

ಗಂಡನ ಕಡೆಯವರು ವರದಕ್ಷಿಣೆ ಕಿರುಕುಳ ಇಲ್ಲ. ಕೆಲಸದ ಒತ್ತಡ, ಮಾನಸಿಕ ಒತ್ತಡಕ್ಕೆ ನವ್ಯ ಗುರಿಯಾಗಿದ್ದಳು, ಗಂಡ ಹೆಂಡತಿ ಮಧ್ಯೆ ಕಳೆದ 6 ತಿಂಗಳಿಂದ ಒಂದಷ್ಟು ಕಲಹಗಳು ಏರ್ಪಟ್ಟಿದ್ದವು ಹೊಂದಾಣಿಕೆ ಇರಲಿಲ್ಲ. ಹೀಗಾಗಿ ನವ್ಯ ಸಾಕಷ್ಟು ಮನನೊಂದಿದ್ದಳು ಅಂತ ಹೇಳುತ್ತಿದ್ದಾರೆ. ಸದ್ಯ ಚಿಕ್ಕಬಳ್ಳಾಪುರ ನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಕೈಗೊಂಡಿದ್ದು ತನಿಖೆಯಿಂದ ಅಸಲಿ ಸತ್ಯ ಬಯಲಾಗಬೇಕಿದೆ. ಇನ್ನೂ ಬಾಗೇಪಲ್ಲಿ ತಾಲೂಕು ಸಡ್ಲವಾರಪಲ್ಲಿ ಗ್ರಾಮದ ನವ್ಯ ಹಾಗೂ ಚೇತನ್ ವಿವಾಹ ಕಳೆದ 1 ವರ್ಷದ ಹಿಂದೆ ನಡೆದಿತ್ತು.

Share This Article
Leave a Comment

Leave a Reply

Your email address will not be published. Required fields are marked *