ಬೀಜಿಂಗ್: ಚೀನಾದಲ್ಲಿ (China) ಕೋವಿಡ್ (Covid) ಪ್ರಕರಣಗಳು ಮತ್ತೆ ಉಲ್ಬಣಿಸುತ್ತಿದ್ದು, ಹಲವೆಡೆ ʼಜೀರೋ ಕೋವಿಡ್ ನಿಯಮʼ ಜಾರಿಗೊಳಿಸಿ ನಿರ್ಬಂಧ ವಿಧಿಸಲಾಗಿದೆ. ಅಲ್ಲಿನ ಸರ್ಕಾರದ ವಿರುದ್ಧ ಜನ ವ್ಯಾಪಕ ಪ್ರತಿಭಟನೆ ನಡೆಸುತ್ತಿದ್ದಾರೆ. ಬಹುಮಹಡಿ ಕಟ್ಟಡಕ್ಕೆ ಬೆಂಕಿ ಬಿದ್ದು 10 ಮಂದಿ ಸಾವಿಗೀಡಾದ ಘಟನೆಗೆ ಚೀನಾದಲ್ಲಿ ಜನಾಕ್ರೋಶ ವ್ಯಕ್ತವಾಗಿದೆ.
ದೇಶದಲ್ಲಿ ಕೋವಿಡ್ ಹೆಚ್ಚಳದಿಂದಾಗಿ ಆರ್ಥಿಕ ಕೇಂದ್ರ ಶಾಂಘೈ ಸೇರಿದಂತೆ ಅನೇಕ ನಗರಗಳಲ್ಲಿ ಲಾಕ್ಡೌನ್ ಘೋಷಿಸಲಾಗಿದೆ. ಇದೇ ವೇಳೆ ಕ್ಸಿನ್ಜಿಯಾಂಗ್ ಪ್ರದೇಶದ ರಾಜಧಾನಿ ಉರುಮ್ಕಿಯಲ್ಲಿನ ಬಹುಮಹಡಿ ಕಟ್ಟಡಕ್ಕೆ ಬೆಂಕಿ ಬಿದ್ದು 10 ಜನ ಮೃತಪಟ್ಟಿದ್ದರು. ಕಟ್ಟಡವು ಭಾಗಶಃ ಲಾಕ್ಡೌನ್ ಆಗಿರುವುದರಿಂದ ನಿವಾಸಿಗಳು ಸಮಯಕ್ಕೆ ತಪ್ಪಿಸಿಕೊಳ್ಳಲು ಸಾಧ್ಯವಾಗಲಿಲ್ಲ ಎಂದು ಟೀಕೆ ವ್ಯಕ್ತವಾಗಿದೆ. ಇದನ್ನೂ ಓದಿ: ಪಾಕ್ನಲ್ಲಿ ಅರಾಜಕತೆ ಸೃಷ್ಟಿಸೋದು ನನಗೆ ಇಷ್ಟವಿಲ್ಲ- ಪ್ರತಿಭಟನಾ ರ್ಯಾಲಿ ಕೈಬಿಟ್ಟ ಇಮ್ರಾನ್ ಖಾನ್
上海乌鲁木齐路 民众高喊
共产党 下台!
这是迄今为止最为激进的口号。 pic.twitter.com/ijP7lxnIgH
— 李老师不是你老师 (@whyyoutouzhele) November 26, 2022
ಚೀನಾದ ಅತ್ಯಂತ ಜನನಿಬಿಡ ನಗರವಾದ ಶಾಂಘೈನಲ್ಲಿ ನಿವಾಸಿಗಳು ಶನಿವಾರ ರಾತ್ರಿ ವುಲುಮುಕಿ ರಸ್ತೆಯಲ್ಲಿ ಜಮಾಯಿಸಿದರು. ಮೇಣದ ಬತ್ತಿ ಹಚ್ಚಿ ಪ್ರತಿಭಟನೆ ನಡೆಸಿದರು. ʼಡೌನ್ ಕ್ಸಿ ಜಿನ್ಪಿಂಗ್ʼ (Xi Jinping) ಎಂದು ಆಕ್ರೋಶ ಹೊರಹಾಕಿದರು.
ʻಲಾಕ್ಡೌನ್ ತೆರವುಗೊಳಿಸಿ, ಡೌನ್ ವಿತ್ ಕ್ಸಿ ಜಿನ್ಪಿಂಗ್, ಡೌನ್ ವಿತ್ ಕಮ್ಯೂನಿಸ್ಟ್ ಪಾರ್ಟಿʼ ಎಂದು ಪ್ರತಿಭಟನಾಕಾರರು ಘೋಷಣೆಗಳನ್ನು ಕೂಗಿ ಕಿಡಿಕಾರಿದ್ದಾರೆ. ಇದನ್ನೂ ಓದಿ: ಕೂಚಿಪುಡಿ ನೃತ್ಯ ಪ್ರದರ್ಶಿಸಿದ ಬ್ರಿಟನ್ ಪ್ರಧಾನಿ ಮಗಳು