ಬೆಂಗಳೂರು: ಚಿನ್ನ ಕಳ್ಳ ಸಾಗಾಣಿಗೆ ಪ್ರಕರಣದ (Gold Smuggling Case) ತನಿಖೆ ತೀವ್ರಗೊಳ್ಳುತ್ತಿದ್ದಂತೆ ಕರ್ನಾಟಕದ (Karnataka) ಪ್ರಭಾವಿ ನಾಯಕನ ಜರ್ಮನಿ (Germany Tour) ಟೂರ್ ಬಗ್ಗೆ ಈಗ ಭಾರೀ ಅನುಮಾನ ಎದ್ದಿದೆ.
ಹೌದು. ಕಳ್ಳ ಸಾಗಾಣಿಕೆ ಪ್ರಕರಣ ತನಿಖೆಗೆ ಈಗ ಕೇಂದ್ರೀಯ ತನಿಖಾ ದಳ (CBI) ಎಂಟ್ರಿ ಕೊಟ್ಟಿದೆ. ಈ ತನಿಖೆಯಲ್ಲಿ ನಾಲ್ಕೈದು ವರ್ಷದ ವಿದೇಶಿ ಪ್ರವಾಸದ ಲಿಂಕ್ ಜಾಲಾಡುವ ಸಾಧ್ಯತೆಯಿದೆ. ಇದನ್ನೂ ಓದಿ: 2 ವರ್ಷದಲ್ಲಿ ದುಬೈಗೆ 52 ಟ್ರಿಪ್ – ಈ ಪೈಕಿ 45 ಬಾರಿ ಒಂದೇ ದಿನದಲ್ಲಿ ಹೋಗಿ ಬಂದಿದ್ದ ರನ್ಯಾ
ತನ್ನ ಬಗ್ಗೆ ಅನುಮಾನ ಬರುತ್ತಿದ್ದಂತೆ ನನಗೆ ಯಾವುದೇ ಸಂಬಂಧ ಇಲ್ಲ. ನಾನು ವೈಯಕ್ತಿಕ ಪ್ರವಾಸಕ್ಕೆ ಜರ್ಮನಿಗೆ ತೆರಳಿದ್ದೇನೆ ಎಂದು ಆಪ್ತರ ಜೊತೆ ಆ ನಾಯಕ ಹೇಳಿರುವ ವಿಚಾರ ಮೂಲಗಳಿಂದ ಪಬ್ಲಿಕ್ ಟಿವಿಗೆ ತಿಳಿದು ಬಂದಿದೆ.
ಜರ್ಮನಿ ಪ್ರವಾಸಕ್ಕೂ ಗೋಲ್ಡ್ ಸ್ಮಗ್ಲಿಂಗ್ ಕೇಸ್‌ಗೂ ಯಾವುದೇ ಸಂಬಂಧ ಇಲ್ಲ. ನಾನು ಸ್ನೇಹಿತರ ಜೊತೆ ಜರ್ಮನಿಗೆ ಹೋಗಿದ್ದೇನೆ. ಸಿಬಿಐ ಟೂರ್ ಟ್ರ‍್ಯಾಕ್ ಮಾಡಿದ್ರೂ ತನಗೆ ಸಂಬಂಧ ಇಲ್ಲ ಎಂದು ಸಮರ್ಥನೆ ನೀಡಿದ್ದಾರೆ.
ಹೀಗಿದ್ದರೂ ಸಿಬಿಐ ತನಿಖೆ ಪೂರ್ಣಗೊಳ್ಳುವವರೆಗೂ ಆ ವ್ಯಕ್ತಿ ಆತಂಕದಲ್ಲಿದ್ದಾರೆ ಎನ್ನಲಾಗುತ್ತಿದೆ. ಒಂದು ವೇಳೆ ಸಿಬಿಐ ತನಿಖೆಯಲ್ಲಿ ಹೆಸರು ಬಂದರೆ ರಾಜ್ಯದಲ್ಲಿ ದೊಡ್ಡ ಪೊಲಿಟಿಕಲ್ ಟರ್ನ್ ತೆಗೆದುಕೊಳ್ಳುವ ಸಾಧ್ಯತೆಯಿದೆ.