Connect with us

Latest

ಕೃಷ್ಣಾ ನದಿ ದುರಂತ: ಮಗಳ ಶವ ನೋಡಿದ ತಾಯಿ ದಾರುಣ ಸಾವು!

Published

on

ವಿಜಯವಾಡ: ಆಂಧ್ರದ ವಿಜಯವಾಡ ಜಿಲ್ಲೆಯಲ್ಲಿ ನಡೆದ ಕೃಷ್ಣಾ ನದಿ ದುರಂತದಲ್ಲಿ ಮೃತಪಟ್ಟ ತನ್ನ ಮಗಳ ಶವವನ್ನು ನೋಡಿ ತಾಯಿ ಆಘಾತಗೊಂಡು ಮೃತಪಟ್ಟ ದಾರುಣ ಘಟನೆ ನಡೆದಿದೆ.

ಮೃತ ದುರ್ದೈವಿಯನ್ನು ಲಕ್ಷ್ಮೀಕಾಂತಂ ಎಂದು ಗುರುತಿಸಲಾಗಿದೆ. ವಿಧವೆಯಾಗಿರೋ ಲಕ್ಷ್ಮೀಕಾತಂ ತನ್ನ ಮಗಳು ಲೀಲಾವತಿ ಹಾಗೂ ಆಕೆಯ ಮಗಳೊಂದಿಗೆ ವಾಸವಿದ್ದರು. ಆದ್ರೆ ನಿನ್ನೆ ಇಲ್ಲಿನ ಕೃಷ್ಣಾ ನದಿಯಲ್ಲಿ ನಡೆದ ಘೋರ ದುರಂತದಿಂದಾಗಿ ಮಗಳು ಲೀಲಾವತಿ ಮೃತಪಟ್ಟಿದ್ದರು. ಮಗಳ ಸಾವಿನ ಸುದ್ದಿ ಕೇಳುತ್ತಿದ್ದಮತೆಯೇ ಮಾನಸಿಕವಾಗಿ ನೊಂದಿದ್ದ ತಾಯಿ, ಮಗಳ ಶವ ಮನೆಗೆ ಬಂದ ಬಳಿಕ ನೋಡಿದ ಕೂಡಲೇ ಆಘಾತಗೊಂಡು ಕುಸಿದುಬಿದ್ದಿದ್ದಾರೆ. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಾಯಿಸಿತಾದರೂ ಅದಾಗಲೇ ಹೃಯಯಾಘಾತವಾಗಿ ಮೃತಪಟ್ಟಿದ್ದಾರೆ ಅಂತ ವೈದ್ಯರು ತಿಳಿಸಿದ್ದಾರೆ.

ನದಿ ದುರಂತಕ್ಕೆ ಬಲಿಯಾದ ಲೀಲಾವತಿ ಮಗಳು ವಿಜಯವಾಡದಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದು, ಇದೀಗ ತಾಯಿ ಹಾಗೂ ಅಜ್ಜಿಯನ್ನು ಕಳೆದುಕೊಂಡು ಅನಾಥರಾಗಿದ್ದಾರೆ.

ಇದನ್ನೂ ಓದಿ: ಮಹಾ ಆರತಿ ನೋಡಲು ತೆರಳುತ್ತಿದ್ದ 38 ಜನರಿದ್ದ ದೋಣಿ ಮುಗುಚಿ ಬಿತ್ತು

ಜಿಲ್ಲೆಯ ಪವಿತ್ರ ಸಂಗಮ್ ಘಾಟ್ ಬಳಿಯ ಕೃಷ್ಣಾ ನದಿಯಲ್ಲಿ ಭಾನುವಾರ 38 ಜನ ಪ್ರಯಾಣಿಸುತ್ತಿದ್ದ ದೋಣಿಯೊಂದು ಮಗುಚಿ ಬಿದ್ದಿದ್ದು, 11 ಮಂದಿ ಕಣ್ಮರೆಯಾಗಿದ್ದರು. ಇಲ್ಲಿಯವರೆಗೆ 16 ಮೃತದೇಹಗಳು ಪತ್ತೆಯಾಗಿದ್ದು, ಶವವನನ್ನು ಮರಣೋತ್ತರ ಪರೀಕ್ಷೆಗಾಗಿ ಒಂಗೋಲ್ ಪಟ್ಟಣಕ್ಕೆ ಕಳುಹಿಸಲಾಗಿದೆ.

ಮೃತಪಟ್ಟವರೆಲ್ಲರೂ ಒಂಗೋಲ್ ವಾಲ್ಕರ್ಸ್ ಕ್ಲಬ್ ನವರಾಗಿದ್ದು, ಭಾನುವಾರ ರಜಾದಿನವಾಗಿದ್ದರಿಂದ ಎಲ್ಲರೂ ಭವಾನಿ ಐಲ್ಯಾಂಡ್ ಹಾಗೂ ಪವಿತ್ರ ಸಂಗಮ್ ಗೆ ಪಿಕ್ ನಿಕ್ ಗೆಂದು ತೆರಳಿದ್ದರು. ಈ ವೇಳೆ ದೋಣಿ ಮಗುಚಿ 17 ಮಂದಿ ಸಾವನ್ನಪ್ಪಿ, 21 ಮಂದಿಯನ್ನು ರಕ್ಷಿಸಲಾಗಿತ್ತು.

Click to comment

Leave a Reply

Your email address will not be published. Required fields are marked *