ಬೆಳಗಾವಿ: ಪ್ರೀತಿಸುವಂತೆ (Lover) ಪೀಡಿಸುತ್ತಿದ್ದ ಯುವಕ ಹಾಗೂ ಆತನ ಸಹೋದರನ ಇಬ್ಬರನ್ನೂ ಯುವತಿ ತಂದೆಯೇ ಬರ್ಬರವಾಗಿ ಹತ್ಯೆಗೈದಿರುವ ಘಟನೆ ಬೆಳಗಾವಿ (Belagavi) ಜಿಲ್ಲೆಯ ಸವದತ್ತಿ ತಾಲೂಕಿನ ಕಾರಿಮನಿ ಗ್ರಾಮದಲ್ಲಿ ನಡೆದಿದೆ.
ಕಾರಿಮನಿ ಗ್ರಾಮದ ಯಲ್ಲಪ್ಪ ಹಳೇಗೋಡಿ (22) ಮಾಯಪ್ಪ ಹಳೇಗೋಡಿ (22) ಮೃತ ಯುವಕರು. ಸವದತ್ತಿ ತಾಲೂಕಿನ ದುಂಡನಕೊಪ್ಪ ಗ್ರಾಮದ ಫಕೀರಪ್ಪ ಭಾಂವಿಹಾಳ (50) ಹತ್ಯೆಗೈದ ವ್ಯಕ್ತಿ. ಇದನ್ನೂ ಓದಿ: ದಿಢೀರನೇ ಮದುವೆ ಫೋಟೋ ಡಿಲೀಟ್ ಮಾಡಿ ಅನುಮಾನ ಮೂಡಿಸಿದ ರಣ್‌ವೀರ್ ಸಿಂಗ್
ಯುವಕ ಯಲ್ಲಪ್ಪ ಹಳೆಗೋಡಿ ಆರೋಪಿ ಫಕೀರಪ್ಪ ಪುತ್ರಿಯನ್ನು ಪ್ರೀತಿಸುವಂತೆ ಬೆನ್ನುಬಿದ್ದಿದ್ದ. ಇದರಿಂದ ಸಿಟ್ಟಿಗೆದ್ದ ಫಕೀರಪ್ಪ ಯುವಕನಿಗೆ ಎಚ್ಚರಿಕೆ ನೀಡಲು ಕಾರಿಮನಿ ಗ್ರಾಮಕ್ಕೆ ತೆರಳಿದ್ದ. ಈ ವೇಳೆ ಫಕೀರಪ್ಪ ಹಾಗೂ ಯಲ್ಲಪ್ಪ ಮಾತಿಗೆ-ಮಾತು ಬೆಳೆದು ವಿಕೋಪಕ್ಕೆ ತಿರುಗಿದೆ. ಫಕೀರಪ್ಪ ಯಲ್ಲಪ್ಪನಿಗೆ ಚಾಕುವಿನಿಂದ ಇರಿದಿದ್ದಾನೆ. ಅಲ್ಲದೇ ಯಲ್ಲಪ್ಪನನ್ನು ಬಿಡಿಸಿಕೊಳ್ಳಲು ಬಂದ ಸಹೋದರ ಮಾಯಪ್ಪನಿಗೂ ಚಾಕುವಿನಿಂದ ಇರಿದಿದ್ದಾನೆ.
ತೀವ್ರ ರಕ್ತಸ್ರಾವದಿಂದ ಯಲ್ಲಪ್ಪ ಸ್ಥಳದಲ್ಲೇ ಮೃತಪಟ್ಟರೆ, ಮಾಯಪ್ಪ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾನೆ. ಮುರಗೋಡ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಅಲ್ಲದೇ ಈ ಹತ್ಯೆ ಬಳಿಕ ಪರಾರಿಯಾಗಿರುವ ಆರೋಪಿ ಫಕೀರಪ್ಪ ಭಾಂವಿಹಾಳ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ. ಸ್ಥಳಕ್ಕೆ ರಾಮದುರ್ಗ DYSP ಭೇಟಿ ನೀಡಿದ್ದಾರೆ. ಇದನ್ನೂ ಓದಿ: ರೇವಣ್ಣ ವಿಚಾರದಲ್ಲಿ ಮಾತ್ರ ಹೋರಾಟ ಮಾಡ್ತೀನಿ, ಪ್ರಜ್ವಲ್‌ಗಾಗಿ ಅಲ್ಲ: ಹೆಚ್‌ಡಿಕೆ