ಮಲಗಿದ್ದಾಗಲೇ ಇಬ್ಬರ ಕತ್ತು ಕೊಯ್ದು ಬರ್ಬರ ಹತ್ಯೆ

Public TV
1 Min Read
BLG MURDER

ಬೆಳಗಾವಿ: ಪೆಟ್ರೋಲ್ ಪಂಪ್‍ನಲ್ಲಿ ಕೆಲಸ ಮಾಡುತ್ತಿದ್ದ ಇಬ್ಬರ ಕತ್ತು ಕೊಯ್ದು ಕೊಲೆ ಮಾಡಿರುವ ಘಟನೆ ಜಿಲ್ಲೆಯ ಕಿತ್ತೂರು ಹೊರವಲಯದಲ್ಲಿ ತಡರಾತ್ರಿ ನಡೆದಿದೆ.

ಲಿಂಗದಳ್ಳಿ ಗ್ರಾಮದ ಮಂಜುನಾಥ ಪಟ್ಟಣಶೆಟ್ಟಿ (30) ಮತ್ತು ತಿಗಡೊಳ್ಳಿ ಗ್ರಾಮದ ಮುಸ್ತಾಕ ಬೀಡಿ (32) ಕೊಲೆಯಾದ ದುರ್ದೈವಿಗಳು. ಮೃತರು ಕಿತ್ತೂರು ಹೊರವಲಯದ ಶಿವಾ ಪೆಟ್ರೋಲ್ ಪಂಪ್‍ನಲ್ಲಿ ಕೆಲಸ ಮಾಡುತ್ತಿದ್ದರು. ಆದರೆ ತಡರಾತ್ರಿ ಮಲಗಿದ್ದಾಗಲೇ ಇಬ್ಬರ ಕತ್ತು ಕೊಯ್ದು ಕೊಲೆ ಮಾಡಿ ದುಷ್ಕರ್ಮಿಗಳು ಪರಾರಿಯಾಗಿದ್ದಾರೆ.

vlcsnap 2019 05 15 12h11m41s60

ದುಷ್ಕರ್ಮಿಗಳು ಪಂಪ್ ಹೊರಗಡೆ ಮಲಗಿದ್ದ ವ್ಯಕ್ತಿಯ ಕತ್ತು ಕೊಯ್ದು ಬಳಿಕ ಪಂಪ್ ಒಳಗೆ ನುಗ್ಗಿ ಮತ್ತೊಬ್ಬನ ಕೊಲೆ ಮಾಡಿದ್ದಾರೆ. ಬೆಳಗ್ಗೆ ಮಾಹಿತಿ ತಿಳಿದು ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಜೊತೆಗೆ ಶ್ವಾನದಳ ಮತ್ತು ಬೆರಳಚ್ಚು ತಜ್ಞರು ಭೇಟಿ ನೀಡಿ ಪರಿಶೀಲಿಸಿದ್ದಾರೆ.

ಸದ್ಯಕ್ಕೆ ಈ ಕುರಿತು ಕಿತ್ತೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ದರೋಡೆಕೋರರು ಈ ಕೃತ್ಯ ಎಸಗಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *