– ಅಕ್ರಮ ಸಂಬಂಧ ವಿಚಾರಕ್ಕೆ ಬಿತ್ತು ಅಕ್ಕ – ತಮ್ಮನ ಹೆಣ
ಬೆಂಗಳೂರು: ಅಪ್ರಾಪ್ತ ಬಾಲಕನೊಬ್ಬ ಡಬಲ್ ಮರ್ಡರ್ ಮಾಡಿರುವ ಘಟನೆ ಪೀಣ್ಯ ಪೊಲೀಸ್ ಠಾಣಾ (Peenya Police Station) ವ್ಯಾಪ್ತಿಯಲ್ಲಿ ನಡೆದಿದೆ.
ಯಮುನಾ (36), ಆಕೆಯ ಸಹೋದರ ಸುದೀಪ್ (34) ಕೊಲೆಯಾದವರು. ಇದನ್ನೂ ಓದಿ: ಹಾಡಹಗಲೇ ಕತ್ತು ಕೊಯ್ದು ಪತ್ನಿಯ ಬರ್ಬರ ಹತ್ಯೆ – ಶವದ ಮೇಲೆ ಕಾರು ಹಾಯಿಸಿ ವಿಕೃತಿ, ಪತಿ ವಶಕ್ಕೆ

ಕೊಲೆ ನೆಡೆದಿದ್ದು ಹೇಗೆ?
ಯಮುನಾ ಗಂಡ ಮಲ್ಲೇಗೌಡ ಛಾಯಾ ಎಂಬಾಕೆಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ ಎಂದು ಆರೋಪಿಸಲಾಗಿತ್ತು. ಇದನ್ನ ಕೇಳಲು ಯಮುನಾ ಮತ್ತು ಆಕೆಯ ಸಹೋದರ ಸುದೀಪ್ ಛಾಯಾ ಮನೆ ಬಳಿ ಹೋಗಿದ್ದರು. ಅಕ್ರಮ ಸಂಬಂಧ ವಿಚಾರ ಪ್ರಸ್ತಾಪಿಸುತ್ತಿದ್ದಾಗ ವಾಗ್ವಾದ ಬೆಳೆದಿತ್ತು. ಈ ವೇಳೆ ಮನೆಯಲ್ಲೇ ಇದ್ದ ಛಾಯಾಳ ಮಗ, ಇಬ್ಬರನ್ನೂ ಮಚ್ಚಿನಿಂದ ಹೊಡೆದು ಕೊಲೆ ಮಾಡಿದ್ದಾನೆ.
ಸದ್ಯ ಪೀಣ್ಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಹೆಚ್ಚಿನ ತನಿಖೆ ನಡೆಯುತ್ತಿದೆ. ಇದನ್ನೂ ಓದಿ: ಲೋಕಾ ದಾಳಿ ವೇಳೆ 10 ಕೋಟಿ ಭ್ರಷ್ಟಾಚಾರ ಬಯಲು – ಕೊಪ್ಪಳ ನಗರಸಭೆಯ ಜೆಇ ಸಸ್ಪೆಂಡ್

