– ಆ್ಯಪ್ ಆಧಾರಿತ ಆಟೋಗಳೇ ಹೆಚ್ಚು
ಬೆಂಗಳೂರು: ಪ್ರಯಾಣಿಕರ ಬಳಿ ಮನಸೋ ಇಚ್ಛೆ ಸುಲಿಗೆ ಮಾಡುತ್ತಿದ್ದ ಆಟೋ ಚಾಲಕರ ವಿರುದ್ಧ ಸಮರ ಸಾರಿದ್ದ ಆರ್‌ಟಿಓ (RTO) ಭರ್ಜರಿ ಕಾರ್ಯಚರಣೆ ಮುಂದುವರೆಸಿದ್ದು, ಕಳೆದೊಂದು ವಾರದಲ್ಲೇ ಸಾವಿರಕ್ಕೂ ಹೆಚ್ಚು ಆಟೋಗಳಿಗೆ (Auto) ಶಾಕ್ ನೀಡಿದೆ.
ಬೆಂಗಳೂರು ನಗರದಲ್ಲಿ ಬೈಕ್ ಟ್ಯಾಕ್ಸಿ ಬ್ಯಾನ್ ಬೆನ್ನಲ್ಲೇ ಆಟೋ ಚಾಲಕರು ಪ್ರಯಾಣಿಕರ ಬಳಿ ದುಪ್ಪಟ್ಟು ದರ ವಸೂಲಿಗೆ ಮುಂದಾಗಿದ್ದಾರೆ ಅನ್ನೋ ಆರೋಪಗಳು, ದೂರುಗಳು ಹೆಚ್ಚಾಗಿದ್ದ ಕಾರಣ, ಕಳೆದ ಒಂದು ವಾರದಿಂದ ಆರ್‌ಟಿಓ, ಆಟೋ ಚಾಲಕರ ವಿರುದ್ಧ ಸಮರ ಸಾರಿತ್ತು. ಅದರಂತೆ ತಂಡಗಳ ರಚನೆ ಮಾಡಿ ವಲಯ ವ್ಯಾಪ್ತಿಯಲ್ಲಿ ಕಾರ್ಯಚರಣೆ ನಡೆಸಿತ್ತು. ಕಾರ್ಯಚರಣೆ ಭರ್ಜರಿ ಯಶಸ್ಸು ಸಾಧಿಸಿದ್ದು, ಒಂದೇ ವಾರದಲ್ಲಿ ಸಾವಿರಕ್ಕೂ ಹೆಚ್ಚು ಆಟೋಗಳ ವಿರುದ್ಧ ಕ್ರಮಕೈಗೊಂಡಿದೆ. ಇದನ್ನೂ ಓದಿ: ಮೂರುವರೆ ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ – ಆರೋಪಿಗೆ ಜೀವಾವಧಿ ಶಿಕ್ಷೆ
ಕಳೆದ ಒಂದು ವಾರದಿಂದ ನಗರದ 11 ಆರ್‌ಟಿಓ ಕಚೇರಿ ವ್ಯಾಪ್ತಿಯಲ್ಲಿ 20 ತಂಡಗಳನ್ನ ರಚಿಸಿ ಸಾರಿಗೆ ಅಧಿಕಾರಿಗಳು ನಗರದಾದ್ಯಂತ ಕಾರ್ಯಚರಣೆ ಕೈಗೊಂಡಿದ್ದಾರೆ. ಈ ವೇಳೆ ಒಟ್ಟು 3,531 ಆಟೋಗಳನ್ನ ತಪಾಸಣೆ ನಡೆಸಿದ್ದು, ಅದರಲ್ಲಿ ಪರ್ಮೀಟ್, ದುಪ್ಪಟ್ಟು ದರ ವಸೂಲಿ ಇನ್ಶೂರೆನ್ಸ್, ಡಾಕ್ಯುಮೆಂಟ್‌ಗಳಿಲ್ಲದ 1,006 ವಾಹನಗಳ ವಿರುದ್ಧ ಕೇಸ್ ದಾಖಲಿಸಿ, 233 ಆಟೋಗಳನ್ನ ಸೀಜ್ (Auto Seize) ಮಾಡಿದ್ದಾರೆ. ಇದನ್ನೂ ಓದಿ: Uttara Kannada | ದಟ್ಟ ಅರಣ್ಯದ ಗುಹೆಯಲ್ಲಿ ಚಿಕ್ಕ ಮಕ್ಕಳೊಂದಿಗೆ ವಾಸ – ರಷ್ಯಾ ಮೂಲದ ವಿದೇಶಿ ಮಹಿಳೆಯ ರಕ್ಷಣೆ
ಯಾವ್ಯಾವ ಆರ್‌ಟಿಓ ವ್ಯಾಪ್ತಿಯಲ್ಲಿ ಎಷ್ಟೆಷ್ಟು ವಾಹನ ಜಪ್ತಿ?
ಕಚೇರಿ – ಕೇಸ್ ದಾಖಲು – ಸೀಜ್
ಬೆಂ.ಕೇಂದ್ರ – 143 – 69
ಬೆಂ.ಪಶ್ಚಿಮ – 90 – 21
ಬೆಂ.ಪೂರ್ವ – 115 – 13
ಬೆಂ.ಉತ್ತರ – 140 – 12
ಬೆಂ.ದಕ್ಷಿಣ – 147 – 15
ಜ್ಞಾನಭಾರತಿ – 43 – 34
ಯಲಹಂಕ – 51 – 6
ಎಲೆಕ್ಟ್ರಾನಿಕ್ ಸಿಟಿ – 117 – 22
ಕೆ.ಆರ್.ಪುರಂ – 78 – 19
ಚಂದಾಪುರ – 49 – 18
ದೇವನಹಳ್ಳಿ – 33 – 4
ಒಟ್ಟು – 1006 – 233
ಇನ್ನೂ ಈ ಆಟೋಗಳ ಪೈಕಿ ಅತಿ ಹೆಚ್ಚು ಆಟೋಗಳು ಆ್ಯಪ್ ಆಧಾರಿತ ಸಂಚಾರ ಮಾಡುತ್ತಿದ್ದ ಆಟೋಗಳೇ. ನಗರವ್ಯಾಪಿ ಆ್ಯಪ್ ಆಧಾರಿತ ಆಟೋಗಳ ಮೇಲೆಯೇ ಅತಿ ಹೆಚ್ಚು ದೂರಗಳಿದ್ದು, ಅದರಂತೆ ಆಯಾ ವ್ಯಾಪ್ತಿಯಲ್ಲಿ ಹೆಚ್ಚುವರಿ ದರ ಪಡೆದು ಸಂಚಾರ ಮಾಡುತ್ತಿದ್ದ ಆ್ಯಪ್ ಆಧಾರಿತ ಆಟೋಗಳಿಗೂ ಆರ್‌ಟಿಓ ಬಿಸಿ ಮುಟ್ಟಿಸಿದೆ. ಇದನ್ನೂ ಓದಿ: ದೆಹಲಿಯಲ್ಲಿ ಕುಸಿದು ಬಿದ್ದ 4 ಅಂತಸ್ತಿನ ಕಟ್ಟಡ – 14 ತಿಂಗಳ ಮಗು ಸೇರಿ 8 ಮಂದಿ ರಕ್ಷಣೆ
ಯಾವ್ಯಾವ ಆ್ಯಪ್‌ಗಳ ಆಟೋಗಳ ಮೇಲೆ ಕ್ರಮ?
ಆ್ಯಪ್ – ಕೇಸ್ ದಾಖಲು – ಸೀಜ್
ಓಲಾ – 35 – 4
ಊಬರ್ – 59 – 14
ರ‍್ಯಾಪಿಡೋ – 92 – 32
ನಮ್ಮಯಾತ್ರಿ – 25 – 4
ಇತರೆ ಆ್ಯಪ್ – 795 – 179
ಒಟ್ಟಾರೆ ನಗರದಾದ್ಯಂತ ಆರ್‌ಟಿಓ ಕಾರ್ಯಚರಣೆ ಮುಂದುವರೆಯುತ್ತಿದ್ದು, ಮುಂದಿನ ದಿನದಲ್ಲಿ ಇನ್ನಷ್ಟು ಆಟೋಗಳಿಗೆ ಆರ್‌ಟಿಓ ಗಾಳ ಹಾಕಲಿದೆ. ಇದನ್ನೂ ಓದಿ: ಬೆಂಗಳೂರಲ್ಲಿ ಮಳೆ ಅವಾಂತರ – ಕಾರಿನ ಮೇಲೆ ಬಿದ್ದ ಬೃಹತ್ ಮರ, ಚಾಲಕ ಗ್ರೇಟ್ ಎಸ್ಕೇಪ್