ಬೆಂಗಳೂರು: ಯೆಲ್ಲೋ ಮೆಟ್ರೋ (Yellow Metro) ಪ್ರಯಾಣಿಕರಿಗೆ ಹೊಸ ವರ್ಷಕ್ಕೆ ಡಬಲ್ ಗುಡ್‌ನ್ಯೂಸ್ ನೀಡೋಕೆ ಬಿಎಂಆರ್‌ಸಿಎಲ್ (BMRCL) ಮುಂದಾಗಿದ್ದು, 8 ರಿಂದ 10 ನಿಮಿಷಕ್ಕೊಂದು ರೈಲು ಸಂಚರಿಸಲಿವೆ.
ಸಿಲಿಕಾನ್ ಸಿಟಿಯ ಮೆಟ್ರೋ ಮಾರ್ಗದಲ್ಲಿ ಅತೀ ಹೆಚ್ಚು ಸದ್ದು ಮಾಡಿದ ಮಾರ್ಗವೆಂದರೆ ಯೆಲ್ಲೋ ಲೈನ್. ಕಾಮಗಾರಿ ಆರಂಭವಾದ ಕಾಲದಿಂದಲೂ ಒಂದಲ್ಲ ಒಂದು ಅಡೆತಡೆ. ಸಂಚಾರ ಮುಕ್ತವಾದ ಮೇಲು ಇದೇ ಸಮಸ್ಯೆ. ಆದರೂ ನಿತ್ಯ ಒಂದು ಲಕ್ಷಕ್ಕೂ ಹೆಚ್ಚು ಪ್ರಯಾಣಿಕರು ಸಂಚರಿಸುತ್ತಾರೆ. ಮಾರ್ಗ ಓಪನ್ ಆಗಿ ತಿಂಗಳುಗಳೇ ಕಳೆದರೂ ಪೂರ್ಣ ಪ್ರಮಾಣದ ರೈಲುಗಳಿಲ್ಲದೇ ಪ್ರಯಾಣಿಕರು ಕಷ್ಟನೋ ಸುಖನೋ ಅಡ್ಜಸ್ಟ್ ಮಾಡಿಕೊಂಡು ಹೋಗ್ತಿದ್ದಾರೆ. ಆದರೆ ಶೀಘ್ರದಲ್ಲೇ ಹೊಸ ರೈಲುಗಳು ಸೇರ್ಪಡೆಯಾಗಿ, ಪ್ರಯಾಣಿಕರಿಗೆ ಸುಲಭ ಸಂಚಾರ ನೀಡಲು ಮುಂದಾಗಿದೆ.ಇದನ್ನೂ ಓದಿ: ಹಾಸನ | ತಂಗಿಯ ಆರತಕ್ಷತೆಗೆ ಮೊಸರು ತರಲು ಹೋಗಿದ್ದ ಸಹೋದರ ಅಪಘಾತದಲ್ಲಿ ದುರ್ಮರಣ
ಸದ್ಯ ಮಾರ್ಗದಲ್ಲಿ 5 ಸೆಟ್ ರೈಲುಗಳ ಓಡಾಟ ಇದೆ. ಪ್ರತಿ 15 ನಿಮಿಷಕ್ಕೊಂದು ರೈಲು ಓಡಾಟ ಮಾಡುತ್ತಿರುವ ಪ್ರಯಾಣಿಕರಿಗೆ ಕೊಂಚ ಹೆಚ್ಚಿನ ಸಮಯ ಕಾಯಬೇಕಾಗುತ್ತದೆ. ಪರಿಣಾಮ, ಕೆಲವೊಮ್ಮೆ ಒಂದು ಟ್ರೈನ್ ಮಿಸ್ ಆದ್ರೆ 15 ನಿಮಿಷ ಕಾಯಬೇಕು. ಇಲ್ಲ ರಷ್ ಇದ್ದರೂ ಬೇರೆ ಟ್ರೈನ್‌ಗೆ ಕಾಯದೇ ಅದೇ ರೈಲು ಹತ್ತಿ ಹೋಗಬೇಕು. ಇದು ಹಲವು ಪ್ರಯಾಣಿಕರಿಗೆ ಕಿರಿಕಿರಿ ಆಗ್ತಿದೆ. ಸದ್ಯ ಈ ಎಲ್ಲಾ ಸಮಸ್ಯೆಗಳಿಗೆ ಶೀಘ್ರ ಬ್ರೇಕ್ ಬೀಳಲಿದೆ. ಈಗಾಗಲೇ ಕೋಲ್ಕತ್ತಾದ ಟಿಟಾಗರ್‌ನಿಂದ 6 ರೈಲು ಬೆಂಗಳೂರಿನತ್ತ ಹೊರಟಿದೆ. ಮುಂದಿನ ವಾರ ಈ ರೈಲು ಬೆಂಗಳೂರು ಸೇರಿ, ಎಲ್ಲಾ ಪರೀಕ್ಷೆ ಪೂರ್ಣಗೊಳಿಸಿ ಡಿಸೆಂಬರ್ ಅಂತ್ಯಕ್ಕೆ ಟ್ರ‍್ಯಾಕ್‌ಗೆ ಇಳಿಯಲಿದೆ. ಅಲ್ಲದೇ ಮುಂದಿನ ತಿಂಗಳು ಅಂದರೆ ಡಿಸೆಂಬರ್‌ಗೆ ಮತ್ತೊಂದು ಸೆಟ್ ಕೂಡ ಬೆಂಗಳೂರು ಸೇರಲಿದೆ. 7ನೇ ರೈಲು ಜನವರಿ ಅಂತ್ಯಕ್ಕೆ ಟ್ರ‍್ಯಾಕ್‌ಗೆ ಇಳಿದು ಪ್ರಯಾಣಿಕರ ಸಂಚಾರಕ್ಕೆ ಮುಕ್ತವಾಗಲಿದೆ.
ಇನ್ನೂ ಈ ಎರಡು ರೈಲುಗಳು ಹೊಸ ವರ್ಷದ ಸಂದರ್ಭದಲ್ಲೇ ಸೇರ್ಪಡೆಗೊಳ್ಳಲಿದ್ದು, ಸಂಚಾರ ಸಮಯ ಇಳಿಕೆಯಾಗಲಿದೆ. ಸದ್ಯ 15 ನಿಮಿಷಕ್ಕೊಂದು ಸಂಚರಿಸುವ ರೈಲುಗಳ ನಡುವಿನ ಸಮಯಾವಧಿ 8 ರಿಂದ 10 ನಿಮಿಷಕ್ಕೆ ಇಳಿಯಲಿದೆ. ಇದರಿಂದ ಸಮಸ್ಯೆ ಎದುರಿಸುತ್ತಿರುವ ಪ್ರಯಾಣಿಕರಿಗೆ ಅನುಕೂಲವಾಗಲಿದೆ.ಇದನ್ನೂ ಓದಿ: ಬೆಂಗ್ಳೂರು| ರಸ್ತೆ ಅಪಘಾತ; ಸರಿಯಾದ ಸಮಯಕ್ಕೆ ಚಿಕಿತ್ಸೆ ಸಿಗದೇ ಟೆಕ್ಕಿ ಸಾವು

