LatestMain PostNational

ಡಬಲ್ ಎಂಜಿನ್ ಸರ್ಕಾರ ಡ್ರಗ್ ಮಾಫಿಯಾಗೆ ಪ್ರೋತ್ಸಾಹ ಕೊಡುತ್ತಿದೆ: ರಾಹುಲ್ ಗಾಂಧಿ ವಾಗ್ದಾಳಿ

Advertisements

ನವದೆಹಲಿ: ಗುಜರಾತ್‌ನಲ್ಲಿ ಡ್ರಗ್, ಲಿಕ್ಕರ್ ಮಾಫಿಯಾಗೆ ಡಬಲ್ ಎಂಜಿನ್ ಸರ್ಕಾರ ನಿರಂತರವಾಗಿ ಪ್ರೋತ್ಸಾಹ ನೀಡುತ್ತಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಬಿಜೆಪಿ ಕೇಂದ್ರ ಹಾಗೂ ಗುಜರಾತ್ ರಾಜ್ಯ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಯುವಕರಿಗೆ ಡ್ರಗ್ಸ್ ಮಾರಾಟ ಮಾಡಲಾಗುತ್ತಿದೆ. ಗುಜರಾತ್‌ನ ಮುಂದ್ರಾ ಬಂದರಿನಲ್ಲಿ 3 ಬಾರಿ ಡ್ರಗ್ಸ್ ಪತ್ತೆಯಾಗಿದೆ. ಪದೇ ಪದೇ ಇದೇ ಬಂದರಿಗೆ ಡ್ರಗ್ಸ್ ಬರುತ್ತಿರುವುದು ಹೇಗೆ? ಮಾಫಿಯಾಗೆ ನಿರಂತರವಾಗಿ ಪ್ರೋತ್ಸಾಹ ನೀಡುತ್ತಿರುವ ಡಬಲ್ ಎಂಜಿನ್ ಸರ್ಕಾರದಲ್ಲಿ ಕುಳಿತವರು ಯಾರು ಎಂದು ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ವಾಣಿಜ್ಯ ಬಳಕೆಯ ಎಲ್‌ಪಿಜಿ ಸಿಲಿಂಡರ್ ಬೆಲೆ 36 ರೂ. ಇಳಿಕೆ

RAHUL

ಸಪ್ಟೆಂಬರ್ 21 ರಂದು 21 ಸಾವಿರ ಕೋಟಿ ರೂ. ಬೆಲೆ ಬಾಳುವ 3,000 ಕೆ.ಜಿ, ಮೇ 22 ರಂದು 500 ಕೋಟಿ ಬೆಲೆಯ 56 ಕೆಜಿ, ಜುಲೈ 22 ರಂದು 375 ಕೋಟಿ ರೂ. ಮೌಲ್ಯದ 75 ಕೆ.ಜಿ ಡ್ರಗ್ಸ್ ಪತ್ತೆಯಾಗಿದೆ. ಗುಜರಾತ್‌ನಲ್ಲಿ ಕಾನೂನು ಸುವ್ಯವಸ್ಥೆ ಇದೆಯೇ? ಮಾಫಿಯಾಗೆ ಕಾನೂನು ಭಯವಿಲ್ಲವೇ? ಅಥವಾ ಇದು ಮಾಫಿಯಾ ಸರ್ಕಾರವೇ ಎಂದು ರಾಹುಲ್ ಕಿಡಿಕಾರಿದ್ದಾರೆ. ಇದನ್ನೂ ಓದಿ: ಬೆದರಿಕೆ ಪತ್ರಗಳ ಹಿನ್ನೆಲೆ ಶಸ್ತ್ರಾಸ್ತ್ರ ಪರವಾನಗಿ ಪಡೆದ ಸಲ್ಮಾನ್ ಖಾನ್

ಇದೇ ವಿಚಾರವಾಗಿ ಪ್ರಿಯಾಂಕಾ ಗಾಂಧಿ ಕೂಡಾ ಟ್ವೀಟ್ ಮಾಡಿದ್ದು, ಗುಜರಾತ್‌ನ ಒಂದೇ ಬಂದರಿನಲ್ಲಿ ಸುಮಾರು 22,000 ಕೋಟಿ ರೂ. ಮೌಲ್ಯದ ಡ್ರಗ್ಸ್ 3 ಬಾರಿ ವಶಪಡಿಸಿಕೊಳ್ಳಲಾಗಿದೆ. ಸರ್ಕಾರ ಮಂದಗತಿಯಲ್ಲಿದೆ, ಸರ್ಕಾರದ ಎಲ್ಲಾ ಸಂಸ್ಥೆಗಳು ಮೌನವಾಗಿವೆ. ಬಿಜೆಪಿ ಸರ್ಕಾರದ ಮೂಗಿನ ಕೆಳಗೆ ಮಾಫಿಯಾ ದೇಶಾದ್ಯಂತ ಡ್ರಗ್ಸ್ ಹಂಚುತ್ತಿದೆ. ಕಾನೂನು ಮತ್ತು ಸುವ್ಯವಸ್ಥೆ ಅಸಹಾಯಕವಾಗಿದೆಯೇ ಅಥವಾ ಮಾಫಿಯಾದೊಂದಿಗೆ ಶಾಮೀಲಾಗಿದೆಯೇ? ಎಂದು ಪ್ರಶ್ನಿಸಿದ್ದಾರೆ.

Live Tv

Leave a Reply

Your email address will not be published.

Back to top button