ನವದೆಹಲಿ: ಕೋವಿಡ್ ಲಸಿಕೆಗಳು ನಿರೀಕ್ಷೆಗಿಂತ ಹೆಚ್ಚಿನ ಪ್ರಮಾಣದಲ್ಲಿ ಜನರಿಗೆ ಸೋಂಕಿನಿಂದ ರಕ್ಷಣೆ ನೀಡಲಿವೆ ಎಂದು ವಿಶ್ವ ಆರೋಗ್ಯ ಸಂಸ್ಥೆ( WHO) ಹಿರಿಯ ವಿಜ್ಞಾನಿ ಸೌಮ್ಯಾ ಸ್ವಾಮಿನಾಥನ್ ಹೇಳಿದ್ದಾರೆ.
Advertisement
ಜಾಗತಿಕ ಮಟ್ಟದಲ್ಲಿ ಮತ್ತೊಮ್ಮೆ ಸೋಂಕಿನ ಪ್ರಮಾಣ ಉಲ್ಬಣಗೊಳ್ಳುವುದು ನಿರೀಕ್ಷಿತವಾಗಿದೆ. ಯುರೋಪ್‍ನ ಹಲವು ದೇಶಗಳಲ್ಲಿ ಸೋಂಕು ಭಾರೀ ಏರಿಕೆ ಕಂಡುಬರುತ್ತಿದೆ. ಜೊತೆಗೆ ನಾನಾ ಕಾರಣಗಳಿಂದಾಗಿ ಆಸ್ಪತ್ರೆಗೆ ದಾಖಲಾಗುವ ಸಂಖ್ಯೆಯಲ್ಲೂ ಹೆಚ್ಚಳವಾಗುತ್ತಿದೆ. ಆದರೆ ಸಾವಿನ ಪ್ರಮಾಣದಲ್ಲಿ ಗಮನಾರ್ಹ ಏರಿಕೆ ದಾಖಲಾಗಿಲ್ಲ ಎಂದಿದ್ದಾರೆ.
Advertisement
Advertisement
ಸಾವಿನ ಪ್ರಮಾಣದಲ್ಲಿ ಏರಿಕೆಯಾಗದಿರಲು ಕಾರಣ ಸೋಂಕಿಗೆ ಉತ್ತಾಗುವ ಸಾಧ್ಯತೆ ಇದ್ದ ಬಹುತೇಕ ಜನರಿಗೆ ಎರಡೂ ಡೋಸ್ ಲಸಿಕೆ ನೀಡಿರುವುದು ಎಂದು ಸಂದರ್ಶವೊಂದರಲ್ಲಿ ತಿಳಿಸಿದ್ದಾರೆ. ಇದನ್ನೂ ಓದಿ: ಒಂದು ಕೆನ್ನೆಗೆ ಹೊಡೆದಾಗ ಮತ್ತೊಂದು ಕೆನ್ನೆ ತೋರಿಸಿದರೆ ಸಿಗೋದು ಸ್ವಾತಂತ್ರ್ಯವಲ್ಲ, ಭಿಕ್ಷೆ: ಕಂಗನಾ
Advertisement
ಇತ್ತೀಚಿನ ಸಾಕ್ಷ್ಯಗಳ ಅನ್ವಯ , ಎರಡೂ ಡೋಸ್ ಲಸಿಕೆ ಪಡೆದ ಬಹುತೇಕ ವಯಸ್ಕರಲ್ಲಿ 1ವರ್ಷದ ಬಳಿಕ ರೋಗದ ವಿರುದ್ಧ ಹೋರಾಡುವ ಪ್ರತಿಕಾಯ ಪ್ರಮಾಣ ಇಳಿಕೆ ಆದರೂ ಲಸಿಕೆ ಕನಿಷ್ಠ 1 ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ಅವಧಿಗೆ ರಕ್ಷಣೆ ನೀಡುವುದು ಕಂಡುಬಂದಿದೆ ಎಂದಿದ್ದಾರೆ. ಇದನ್ನೂ ಓದಿ: ಶ್ರೀಕಿ ಜೊತೆ ಪ್ರಿಯಾಂಕ್ ಖರ್ಗೆಗೆ ಸಂಪರ್ಕ, 50 ಸಾವಿರ ಕೋಟಿ ಆಸ್ತಿ – ಕಾರ್ಣಿಕ್ ಆರೋಪ