ಕೋಲಾರ: ಡಬಲ್‌ಡೆಕ್ಕರ್ (Double Decker) ರೈಲೊಂದು ಹಳಿ ತಪ್ಪಿ ಲೋಕೋಪೈಲೆಟ್ ಸಮಯಪ್ರಜ್ಞೆಯಿಂದ ಭಾರೀ ದುರಂತ ತಪ್ಪಿದ ಘಟನೆ ಕೋಲಾರ (Kolar) ಜಿಲ್ಲೆಯ ಬಂಗಾರಪೇಟೆ (Bangarapet) ತಾಲೂಕಿನ ಬಿಸಾನತ್ತಂ ಬಳಿ ನಡೆದಿದೆ.
ರೈಲು ಬೆಂಗಳೂರಿನಿಂದ (Bengaluru) ಚೆನ್ನೈಗೆ (Chennai) ತೆರಳುತ್ತಿದ್ದ ಸಂದರ್ಭ ರೈಲಿನ ಒಂದು ಕೋಚ್ ಹಳಿ ಬಿಟ್ಟು ಪಕ್ಕಕ್ಕೆ ಇಳಿದಿದೆ. ಹಳಿ ತಪ್ಪಿದ್ದನ್ನು ಗಮನಿಸಿದ ಲೋಕೋಪೈಲೆಟ್ ಕೂಡಲೇ ರೈಲನ್ನು ನಿಲ್ಲಿಸಿ ಅಧಿಕಾರಿಗಳಿಗೆ ಘಟನೆ ಕುರಿತು ಮಾಹಿತಿ ನೀಡಿದ್ದಾರೆ. ಇದರಿಂದಾಗಿ ನಡೆಯುತ್ತಿದ್ದ ಭಾರೀ ಅನಾಹುತ ತಪ್ಪಿದೆ. ಇದನ್ನೂ ಓದಿ: ತಮಿಳುನಾಡಿನಲ್ಲಿ ಕಳ್ಳಭಟ್ಟಿ ಸೇವಿಸಿ 10 ಸಾವು – 30ಕ್ಕೂ ಹೆಚ್ಚು ಮಂದಿ ಆಸ್ಪತ್ರೆಗೆ ದಾಖಲು
ಘಟನೆ ನಡೆದ ಕೂಡಲೇ ತಾಂತ್ರಿಕ ತಜ್ಞರು ಸ್ಥಳಕ್ಕೆ ಭೇಟಿ ನೀಡಿದ್ದು, ಬಂಗಾರಪೇಟೆ ರೈಲ್ವೇ ಸಿಬ್ಬಂದಿ ಸಮಸ್ಯೆ ಬಗೆಹರಿಸಿದ ಬಳಿಕ ರೈಲು ಸಂಚಾರ ಮುಂದುವರಿಸಿದೆ. ಇದನ್ನೂ ಓದಿ: ಹಣವಿಲ್ಲದ್ದಕ್ಕೆ 5 ತಿಂಗಳ ಮಗುವಿನ ಶವವನ್ನು ಬ್ಯಾಗ್‍ನಲ್ಲಿ ತುಂಬಿಕೊಂಡು ಬಸ್‍ನಲ್ಲೇ ಕ್ರಮಿಸಿದ ತಂದೆ