ಬೆಂಗಳೂರು: ಬೆಂಗಳೂರು ನಗರದ ಬಹುದೊಡ್ಡ ಸಮಸ್ಯೆ ಅಂದರೇ ಅದು ಟ್ರಾಫಿಕ್. ದಟ್ಟಣೆ ಹೆಚ್ಚಾಗಿರೋ ಜಾಗಗಳ ಪರೀಶೀಲನೆಯನ್ನು ಇಂದು ಡಿಸಿಎಂ ಡಿಕೆ ಶಿವಕುಮಾರ್ ಮಾಡಿದ್ದಾರೆ.
ಬಿಬಿಎಂಪಿ ಆಯುಕ್ತರಾದ ತುಷಾರ್ ಗಿರಿನಾಥ್ ಬಿಎಂಆರ್‌ಸಿಎಲ್ ಎಂಡಿ ಮಹೇಶ್ ರಾವ್ ಸೇರಿದಂತೆ ಹಿರಿಯ ಅಧಿಕಾರಿಗಳೊಂದಿಗೆ ನಗರ ಪ್ರದಕ್ಷಿಣೆ ಮಾಡಿದ ಡಿಸಿಎಂ ಡಿಕೆ ಶಿವಕುಮಾರ್ ಬೆಂಗಳೂರಿನ ಟ್ರಾಫಿಕ್ ಹೆಚ್ಚಾಗಿರುವ ಜಂಕ್ಷನ್‌ಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇದನ್ನೂ ಓದಿ: ನಾನು ಯಾವುದೇ ಗುಂಪುಗಾರಿಕೆಯಲ್ಲಿ ನಂಬಿಕೆ ಇಟ್ಟವನಲ್ಲ: ಬೊಮ್ಮಾಯಿ
ಹೆಬ್ಬಾಳ, ಕುವೆಂಪು ಸರ್ಕಲ್, ಗೊರಗುಂಟೆ ಪಾಳ್ಯ, ಸುಮ್ಮನಹಳ್ಳಿ ಹಾಗೂ ನಾಯಂಡಹಳ್ಳಿ ಜಂಕ್ಷನ್‌ಗಳಿಗೆ ಭೇಟಿ ನೀಡಿದ ಡಿಸಿಎಂ, ಹೆಬ್ಬಾಳ ಟು ಜೆಪಿನಗರ ಮಾರ್ಗದ ಮೆಟ್ರೋ ಕಾಮಗಾರಿಯ ಬ್ಲೂ ಪ್ರಿಂಟ್‌ನಲ್ಲಿ ಆಗಿರುವ ಕಾರ್ಯಯೋಜನೆಗಳ ಬಗ್ಗೆ ಸ್ಥಳದಲ್ಲೇ ಅಧಿಕಾರಿಗಳಿಂದ ಮಾಹಿತಿ ಪಡೆದಿದ್ದಾರೆ. ಇದನ್ನೂ ಓದಿ: ರಾಷ್ಟ್ರಪತಿ ದ್ರೌಪದಿ ಮುರ್ಮು ಭೇಟಿಯಾದ ಹೆಚ್‌ಡಿಕೆ
ಮುಂದಿನ 40 ವರ್ಷಗಳ ಬೆಂಗಳೂರನ್ನು ಗಮನದಲ್ಲಿಟ್ಟುಕೊಂಡು ಮೆಟ್ರೋ ಕಾಮಗಾರಿ ನಡೆಯುವ ಪ್ರತಿ ಸ್ಥಳದಲ್ಲೂ ಡಬಲ್ ಡೆಕ್ಕರ್ ಫ್ಲೈಓವರ್ ಮಾಡಲು ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಇದನ್ನೂ ಓದಿ: ರಾಯಚೂರಿನಲ್ಲಿ ಸಾಮೂಹಿಕ ವಿವಾಹ ಕಾರ್ಯಕ್ರಮ – 20 ವರ್ಷದಲ್ಲಿ 2600 ಜೋಡಿ ಮದುವೆ
ಇದರಿಂದ ರಸ್ತೆಯ ಟ್ರಾಫಿಕ್ ಕೂಡ ಕಡಿಮೆ ಆಗಲಿದೆ ಎಂಬ ಅಭಿಪ್ರಾಯವನ್ನ ಡಿಸಿಎಂ ಹೊಂದಿದ್ದು, ಈಗಾಗಲೇ ಡಿಪಿಆರ್ ಆಗಿರೋ ಹೆಬ್ಬಾಳ ಟು ಜೆಪಿನಗರದ ಮಾರ್ಗದಲ್ಲಿ ಎಲ್ಲ ಕಡೆಗೂ ಡಬಲ್ ಡೆಕ್ಕರ್ ಫ್ಲೈಓವರ್ ಮಾಡಲು ಸೂಚಿಸಿದ್ದಾರೆ. ಇದಕ್ಕೆ ಹೆಚ್ಚುವರಿಯಾಗಿ 9,800 ಕೋಟಿ ರೂ. ಬೇಕಾಗಲಿದ್ದು, ಇದನ್ನ ಬಿಬಿಎಂಪಿ ಮತ್ತು ನಮ್ಮ ಮೆಟ್ರೋ ಒದಗಿಸುವಂತೆ ತಿಳಿಸಿದ್ದಾರೆ. ಇದನ್ನೂ ಓದಿ: ಬ್ಯಾಂಕ್ ವಂಚನೆ ಕೇಸ್ – ಮಾಜಿ ಸಚಿವ ಕೃಷ್ಣಯ್ಯ ಶೆಟ್ಟಿಗೆ 3 ವರ್ಷ ಜೈಲು
 

 
		 
		 
		 
		 
		
 
		 
		 
		 
		