ರಾಜ್‌ಕೋಟ್: ಭಾರತ ಹಾಗೂ ಇಂಗ್ಲೆಂಡ್ ನಡುವಿನ 3ನೇ ಟೆಸ್ಟ್ ಪಂದ್ಯದ ದ್ವಿತೀಯ ಇನಿಂಗ್ಸ್‌ನಲ್ಲಿ ಟೀಂ ಇಂಡಿಯಾದ ಯುವ ಆರಂಭಿಕ ಆಟಗಾರ ಯಶಸ್ವಿ ಜೈಸ್ವಾಲ್ ಬ್ಯಾಕ್ ಟು ಬ್ಯಾಕ್ ದ್ವಿಶತಕ ಸಿಡಿಸುವ ಮೂಲಕ ಟೆಸ್ಟ್ ಕ್ರಿಕೆಟ್‌ನಲ್ಲಿ ಹೊಸ ಛಾಪು ಮೂಡಿಸಿದ್ದಾರೆ.
ಈವೆರೆಗೆ ರಣಜಿ ಟ್ರೋಫಿ, ದುಲೀಪ್ ಟ್ರೋಫಿ, ಇರಾನಿ ಕಪ್ ಟೂರ್ನಿಗಳಲ್ಲಿ ದ್ವಿಶತಕ ಸಿಡಿಸಿದ್ದ 22 ವರ್ಷ ವಯಸ್ಸಿನ ಯಶಸ್ವಿ ಜೈಸ್ವಾಲ್ ಅಂತಾರಾಷ್ಟ್ರೀಯ ಟೆಸ್ಟ್ ಕ್ರಿಕೆಟ್‌ನಲ್ಲಿ ಬ್ಯಾಕ್ ಟು ಬ್ಯಾಕ್ ದ್ವಿಶತಕಗಳ ಖಾತೆ ತೆರೆದಿದ್ದಾರೆ. ಅಲ್ಲದೇ ವಿನೋದ್ ಕಾಂಬ್ಳಿ, ವಿರಾಟ್ ಕೊಹ್ಲಿ ನಂತರ ಬ್ಯಾಕ್ ಟು ಬ್ಯಾಕ್ ದ್ವಿಶತಕ ಸಿಡಿಸಿದ 3ನೇ ಭಾರತೀಯ ಮತ್ತು ಇಂಗ್ಲೆಂಡ್ ವಿರುದ್ಧ ದ್ವಿಶತಕ ಸಿಡಿಸಿದ ಮೊದಲ ಭಾರತೀಯ ಆಟಗಾರ ಎಂಬ ಖ್ಯಾತಿಯನ್ನೂ ಹೆಗಲಿಗೇರಿಸಿಕೊಂಡಿದ್ದಾರೆ.
2ನೇ ಟೆಸ್ಟ್ ಪಂದ್ಯದಲ್ಲಿ 277 ಎಸೆತಗಳಲ್ಲಿ 200 ರನ್ ಬಾರಿಸಿದ್ದ ಜೈಸ್ವಾಲ್, ಟೆಸ್ಟ್ ಕ್ರಿಕೆಟ್‌ನಲ್ಲಿ ಅತ್ಯಂತ ಕಿರಿಯ ವಯಸ್ಸಿಗೆ ಈ ಸಾಧನೆ ಮಾಡಿದ ಭಾರತದ 3ನೇ ಕ್ರಿಕೆಟಿಗ ಎನಿಸಿಕೊಂಡಿದ್ದಾರೆ. ಜೈಸ್ವಾಲ್ ಅದ್ಭುತ ಬ್ಯಾಟಿಂಗ್ ಪ್ರದರ್ಶನದಿಂದ ಟೀಂ ಇಂಡಿಯಾ 3ನೇ ಪಂದ್ಯದ 2ನೇ ಇನ್ನಿಂಗ್ಸ್‌ನಲ್ಲೂ 400 ರನ್‌ಗಳ ಗಡಿ ದಾಟುವಲ್ಲಿ ಯಶಸ್ವಿಯಾಗಿದೆ.
ನೋವಿನಲ್ಲೂ ದೇಶಕ್ಕಾಗಿ ಕಟ್ಟಿದ ಇನ್ನಿಂಗ್ಸ್: 3ನೇ ದಿನದಾಟದಲ್ಲಿ ಶತಕ ಸಿಡಿಸಿ ಬೆನ್ನುನೋವಿನಿಂದ ಕ್ರೀಸ್ ತೊರೆದಿದ್ದ ಯಶಸ್ವಿ ಜೈಸ್ವಾಲ್, 4ನೇ ದಿನದಾಟದಲ್ಲಿ ಬ್ಯಾಟಿಂಗ್ ಆರ್ಭಟ ಮುಂದುವರಿಸಿದ್ದಾರೆ. 231 ಎಸೆಯಗಳಲ್ಲಿ ಯಶಸ್ವಿಯಾಗಿ ದ್ವಿಶತಕ ಬಾರಿಸಿರುವ ಯಶಸ್ವಿ ಜೈಸ್ವಾಲ್ ಒಟ್ಟು 236 ಎಸೆತಗಳಲ್ಲಿ 214 ರನ್ ಬಾರಿಸಿ ಕ್ರೀಸ್ ಉಳಿಸಿಕೊಂಡಿದ್ದಾರೆ. ಇದರಲ್ಲಿ 14 ಬೌಂಡರಿ, 12 ಸಿಕ್ಸರ್‌ಗಳೂ ಸೇರಿವೆ.
More Details Awaited