ಬೀದರ್: ಗೃಹ ಜ್ಯೋತಿ (Gruhajyothi) ಯೋಜನೆಯಲ್ಲಿ ನಮ್ಮಗೆ 200 ಯೂನಿಟ್ (200 Unit) ಫ್ರೀ ಕರೆಂಟ್ ಸಿಕ್ತು ಎಂದು ಖುಷಿಯಲ್ಲಿದ್ದ ಗಡಿ ಜಿಲ್ಲೆ ಜನರಿಗೆ ಸರ್ಕಾರ ತ್ರೀಬಲ್ ಬಿಲ್ ಶಾಕ್ ನೀಡಿದೆ.
ಏಕಾಏಕಿ ಯಾರಿಗೂ ಮಾಹಿತಿ ನೀಡಿದೆ ದುಪ್ಪಟ್ಟು ಕರೆಂಟ್ ಬಿಲ್ ನೀಡಿ ಸಾರ್ವಜನಿಕರಿಗೆ ಶಾಕ್ ಮೇಲೆ ಶಾಕ್ ನೀಡಿದೆ. ಕರೆಂಟ್ ಫ್ರೀ ಕನಸಿನಲ್ಲಿದ್ದ ಗಡಿ ಜಿಲ್ಲೆ ಬೀದರ್ (Bidar) ಜನರಿಗೆ ಈಗ ತ್ರಿಬಲ್ ಬಿಲ್ ಶಾಕ್ ನ್ನು ಸರ್ಕಾರ ನೀಡಿದೆ. ಕಳೆದ ತಿಂಗಳು 1 ಸಾವಿರ ಬಂದಿದ್ದ ಕರೆಂಟ್ ಬಿಲ್ ಈ ತಿಂಗಳು 2500 ರಿಂದ 3000 ಸಾವಿರ ಬಿಲ್ ಬಂದಿದೆ.
ಬೀದರ್ ಜಿಲ್ಲೆಯ ಬಹುತೇಕ ಜನರ ಕರೆಂಟ್ ಬಿಲ್ ದುಪ್ಪಟ್ಟು ಆಗಿದ್ದು ಜೆಎಸ್ಕಾಂ ಇಲಾಖೆ (JESCOM Department)) ಹಾಗೂ ಸರ್ಕಾರ ಬಿಲ್ ಶಾಕ್ ಮೇಲೆ ಶಾಕ್ ನೀಡುತ್ತಿದೆ. ಬೀದರ್ ನ ಗುರುನಗರ ಕಾಲೋನಿಯ ಶಿವರಾಜ್ ಬಿರಾದರ್ ಎಂಬವರಿಗೆ ಕಳೆದ ತಿಂಗಳು 950 ಬಿಲ್ ಬಂದಿತ್ತು. ಆದರೆ ಈ ಬಾರಿ 2007 ಕರೆಂಟ್ ಬಿಲ್ ಬಂದಿದೆ. ಇದನ್ನೂ ಓದಿ: ಆರ್‌ಎಸ್‌ಎಸ್ ಸಂಸ್ಥೆಗಳಿಗೆ ಸರ್ಕಾರ ಮಂಜೂರು ಮಾಡಿದ್ದ ಭೂಮಿ ವಾಪಸ್ ಪಡೆಯುತ್ತೇವೆ: ದಿನೇಶ್ ಗುಂಡೂರಾವ್
ನಗರದ ವೈಷ್ಣವಿ ನಗರದ ಪ್ರಕಾಶ್ ಪಾಟೀಲ್ ಎಂಬವರಿಗೆ ಕಳೆದ ತಿಂಗಳು 1500 ಬಂದ್ರೆ ಈ ಬಾರಿ 3800 ಕರೆಂಟ್ ಬಿಲ್ ಬಂದಿದೆ. ಗುರುನಗರದ ನಿರಂಜನಾ ಬಿರಾದರ್ ಎಂಬವರಿಗೆ ಕಳೆದ ಬಾರಿ 2 ಸಾವಿರ ಬಂದ್ರೆ, ಈ ಬಾರಿ 5 ಸಾವಿರ ಬಿಲ್ ಬಂದಿದೆ. ಇದೇ ರೀತಿ ನಗರ ಸೇರಿದಂತೆ ಜಿಲ್ಲೆಯಾದ್ಯಂತ ಕಳೆದ ಬಾರಿಗೆ ಹೊಲಿಸಿದ್ರೆ ಈ ಬಾರಿ ಮೂರು ಪಟ್ಟು ಕರೆಂಟ್ ಬಿಲ್ ಜಾಸ್ತಿ ಬಂದಿದೆ.
ಈ ರೀತಿ ಮೋಸ ಮಾಡೋದಾದ್ರೆ ನಿಮ್ಮ ಗೃಹ ಜ್ಯೋತಿಯ 200 ಯೂನಿಟ್ ಕರೆಂಟ್ ಬೇಡ. ನಮ್ಮಗೆ ಮೊದಲಿನ ರೀತಿ ಕರೆಂಟ್ ಬಿಲ್ ಮಾಡಿ ಸಾಕು. ಇಲ್ಲವಾದ್ರೆ ನಾವು ಯಾರು ಕರೆಂಟ್ ಬಿಲ್ ಕಟ್ಟೋದಿಲ್ಲ ಎಂದು ಸರ್ಕಾರಕ್ಕೆ ಚೀಮಾರಿ ಹಾಕಿದ್ದಾರೆ.