ರಾಕಿಂಗ್ ಸ್ಟಾರ್ ಯಶ್ ಹೊಸ ಸಿನಿಮಾದ ಅಪ್ ಡೇಟ್ ಬಗ್ಗೆ ತಿಳಿದುಕೊಳ್ಳಲು ಹಲವು ತಿಂಗಳಿಂದ ಅಭಿಮಾನಿಗಳು ಕಾಯುತ್ತಿದ್ದಾರೆ. ಕೆಜಿಎಫ್ 2 ಸಿನಿಮಾ ನಂತರ ಯಶ್ ಯಾರ ಸಿನಿಮಾದಲ್ಲಿ ನಟಿಸಲಿದ್ದಾರೆ ಎನ್ನುವುದು ಹಾಗೆಯೇ ಉಳಿದುಕೊಂಡಿದೆ. ಆಗಾಗ್ಗೆ ಗಾಸಿಪ್ ಗಳು ಹರಿದಾಡುತ್ತಲೇ ಇವೆ. ಈ ಬಾರಿ ಹುಟ್ಟು ಹಬ್ಬಕ್ಕೆ ಸಿನಿಮಾದ ಕೆಲವು ಸಂಗತಿಗಳು ಸಿಗುವುದು ಗ್ಯಾರಂಟಿ ಎಂದೇ ಹೇಳಲಾಗುತ್ತಿದೆ. ಅಲ್ಲದೇ, ಅದು ಅಭಿಮಾನಿಗಳಿಗೆ ಡಬಲ್ ಧಮಾಕಾ ಅಂತಾನೂ ಹೇಳಲಾಗುತ್ತಿದೆ.
Advertisement
ಮೊನ್ನೆಯಷ್ಟೇ ರಾಧಿಕಾ ಪಂಡಿತ್ ಮತ್ತೆ ಸಿನಿಮಾ ರಂಗಕ್ಕೆ ಬರುವ ವಿಚಾರ ಬಹಿರಂಗಗೊಂಡಿತ್ತು. ಆದರೆ, ಯಾವ ಚಿತ್ರ, ನಿರ್ದೇಶಕರು ಯಾರು? ಬ್ಯಾನರ್ ಯಾವುದು ಎನ್ನುವ ಕುರಿತು ಯಾವುದೇ ಮಾಹಿತಿ ಸಿಕ್ಕಿರಲಿಲ್ಲ. ಸದ್ಯ ಗಾಂಧಿನಗರದಲ್ಲಿ ಹರಿದಾಡುತ್ತಿರುವ ಮಾಹಿತಿ ಪ್ರಕಾರ, ಯಶ್ ತಮ್ಮದೇ ಸ್ವಂತ ನಿರ್ಮಾಣ ಸಂಸ್ಥೆಯನ್ನು ಶುರು ಮಾಡಲಿದ್ದಾರಂತೆ. ಆ ಬ್ಯಾನರ್ ಮೂಲಕವೇ ರಾಧಿಕಾ ಪಂಡಿತ್ ರೀ ಎಂಟ್ರಿ ಕೊಡಲಿದ್ದಾರೆ ಎಂದು ಹೇಳಲಾಗುತ್ತಿದೆ. ಇದನ್ನೂ ಓದಿ: ನಾನಿಲ್ಲಿ ಗೆದ್ದಿರುವಂಥದ್ದು ನಿಮ್ಮಿಂದ, ನೀವು ನನ್ನನ್ನು ಗೆಲ್ಲಿಸಿದ್ದೀರಿ: ರೂಪೇಶ್ ಶೆಟ್ಟಿ
Advertisement
Advertisement
ಅಷ್ಟೇ ಅಲ್ಲದೇ, ಹುಟ್ಟು ಹಬ್ಬದ ದಿನದಂದು ಯಶ್ ಅವರ ಹೊಸ ಸಿನಿಮಾದ ಕೆಲ ಅಪ್ ಡೇಟ್ ಕೂಡ ಸಿಗಲಿದೆ ಎಂದು ಹೇಳಲಾಗುತ್ತಿದೆ. ಸದ್ಯಕ್ಕೆ ಅವರು ಯಾವ ಬ್ಯಾನರ್ ನಿಂದ ಸಿನಿಮಾ ಮಾಡುತ್ತಾರೆ ಎನ್ನುವ ವಿಚಾರವಷ್ಟೇ ಗೊತ್ತಾಗಲಿದ್ದು, ಮತ್ತೊಂದು ಬಾರಿ ಉಳಿದ ವಿಷಯಗಳನ್ನು ಹಂಚಿಕೊಳ್ಳಲಿದ್ದಾರೆ ಎನ್ನುತ್ತವೆ ಮೂಲಗಳು. ಹಾಗಾಗಿ ಈ ಬಾರಿ ಯಶ್ ಹುಟ್ಟು ಹಬ್ಬ ವಿಶೇಷವಾಗಿ ಇರಲಿದೆಯಂತೆ. ಅಭಿಮಾನಿಗಳಿಗೆ ಎರಡೆರಡು ಸುದ್ದಿಗಳು ಸಿಗಲಿವೆ ಎಂದು ಹೇಳಲಾಗುತ್ತಿದೆ.
Advertisement
ಹಲವು ತಿಂಗಳಿಂದ ಯಶ್ ಅವರ ಹೊಸ ಸಿನಿಮಾ ಬಗ್ಗೆ ಅಷ್ಟೊಂದು ಗಾಸಿಪ್ ಗಳು ಹರಿದಾಡುತ್ತಿದ್ದರೂ, ಈ ಕುರಿತು ಒಂದೇ ಒಂದು ಉತ್ತರವನ್ನೂ ಯಶ್ ಕೊಟ್ಟಿಲ್ಲ. ಅವರು ಕೂಡ ಯಾವುದೇ ಮಾಹಿತಿ ಹಂಚಿಕೊಂಡಿಲ್ಲ. ಹೊಸ ಸಿನಿಮಾ ಪ್ರಶ್ನೆ ಬಂದಾಗೆಲ್ಲ ಅವರು ಜಾರಿಕೊಂಡಿದ್ದಾರೆ. ಸಮಯ ಸಿಕ್ಕಾಗ ಹೇಳುವುದಾಗಿ ಹೇಳಿದ್ದಾರೆ. ಆದರೆ, ಈ ಬಾರಿ ಹುಟ್ಟು ಹಬ್ಬದ ದಿನದಂದು ಅಭಿಮಾನಿಗಳನ್ನು ನಿರಾಸೆ ಮಾಡುವುದಿಲ್ಲ ಎನ್ನುವುದು ಪಕ್ಕಾ ಆಗಿದೆ.