ಲಕ್ನೋ: ಅಯೋಧ್ಯೆ ರಾಮಮಂದಿರದಲ್ಲಿ (Ayodhya Ram Mandir) ಪ್ರತಿಷ್ಠಾಪನೆಗೊಂಡಿರುವ ಬಾಲಕರಾಮನಿಗೆ (Ramlala) ಪ್ರತಿ ದಿನ ಬೆಳಗ್ಗೆ 6:30 ಕ್ಕೆ ಆರತಿ ಬೆಳಗಲಾಗುವುದು. ಇದನ್ನು ದೂರದರ್ಶನದಲ್ಲಿ ನೇರ ಪ್ರಸಾರ ಮಾಡಲಾಗುವುದು.
ಈಗ ಪ್ರತಿದಿನವೂ ಭಗವಾನ್ ರಾಮಲಲ್ಲಾನ ದಿವ್ಯ ದರ್ಶನವಾಗುತ್ತದೆ. ಅಯೋಧ್ಯೆಯ ಬಾಲಕರಾಮನಿಗೆ ಪ್ರತಿ ದಿನ ಆರತಿ ಬೆಳಗುವುದರ ನೇರ ಪ್ರಸಾರವನ್ನು ವೀಕ್ಷಿಸಬಹುದು. ಪ್ರತಿದಿನ ಬೆಳಗ್ಗೆ 6:30 ಕ್ಕೆ #DDNational ನೇರ ಪ್ರಸಾರವಾಗಲಿದೆ ಎಂದು ಸಾರ್ವಜನಿಕ ಪ್ರಸಾರಕರು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಇದನ್ನೂ ಓದಿ: ಲೋಕಸಭಾ ಚುನಾವಣೆ ಸ್ಪರ್ಧೆಗೆ ಮಲ್ಲಿಕಾರ್ಜುನ ಖರ್ಗೆ ಹಿಂದೇಟು?
Advertisement
Advertisement
ರಾಮನ ವಿಗ್ರಹದ ಪ್ರತಿಷ್ಠಾಪನೆಯ ನಂತರ, ನಾವು ಬೆಳಗ್ಗೆ ದೈನಂದಿನ ಆರತಿಯ ನೇರ ಪ್ರಸಾರಕ್ಕೆ ಅನುಮತಿ ಪಡೆಯಲು ಪ್ರಯತ್ನಿಸುತ್ತಿದ್ದೆವು. ಈಗ ಅನುಮೋದನೆ ನೀಡಲಾಗಿದೆ. ವಿವಿಧ ಕಾರಣಗಳಿಂದ ಅಯೋಧ್ಯೆಗೆ ಭೇಟಿ ನೀಡಲು ಸಾಧ್ಯವಾಗದ ಎಲ್ಲ ಭಕ್ತರು ಡಿಡಿ ನ್ಯಾಷನಲ್ ಮೂಲಕ ಶ್ರೀರಾಮನ ಮಂಗಳಕರ ದರ್ಶನವನ್ನು ಪಡೆಯಬಹುದು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
Advertisement
Advertisement
ಅಯೋಧ್ಯೆ ರಾಮಮಂದಿರದಲ್ಲಿ ಜ.22 ರಂದು ರಾಮಮಂದಿರದಲ್ಲಿ ರಾಮಲಲ್ಲಾನ ಪ್ರತಿಷ್ಠಾಪನೆ ನೆರವೇರಿಸಲಾಯಿತು. ರಾಮಲಲ್ಲಾನ ದರ್ಶನಕ್ಕೆ ಲಕ್ಷಾಂತರ ಸಂಖ್ಯೆಯಲ್ಲಿ ಭಕ್ತರು ಅಯೋಧ್ಯೆಗೆ ಭೇಟಿ ನೀಡುತ್ತಿದ್ದಾರೆ. ಇದನ್ನೂ ಓದಿ: ಬಿಜೆಪಿ ಕರ್ನಾಟಕ ಫಸ್ಟ್ ಲಿಸ್ಟ್ ಇಂದೇ ರಿಲೀಸ್ ಸಾಧ್ಯತೆ- ಸಂಭಾವ್ಯ ಅಭ್ಯರ್ಥಿಗಳು ಯಾರು?