ಬೆಂಗಳೂರು: ಮಾಜಿ ಮುಖ್ಯಮಂತ್ರಿ ಎಸ್.ಎಂ ಕೃಷ್ಣ (SM Krishna) ಅವರು ಚೇತರಿಸಿಕೊಳ್ಳುತ್ತಿದ್ದಾರೆ. ಹೀಗಾಗಿ ಯಾರೂ ಆತಂಕ ಹಾಗೂ ಗಾಬರಿ ಪಡಬೇಡಿ ಎಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ (Basavaraj Bommai) ಹೇಳಿದ್ದಾರೆ.
Advertisement
ಇಂದು ಆಸ್ಪತ್ರೆಗೆ ಭೇಟಿ ನೀಡಿ ಎಸ್‍ಎಂಕೆ ಆರೋಗ್ಯ ವಿಚಾರಿಸಿದ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಸಿಎಂ, ಎಸ್ ಎಂ ಕೃಷ್ಣರವರು ಜ್ವರದಿಂದ ಬಳಲುತ್ತಿದ್ದರು. ನಿನ್ನೆ ವೈದೇಹಿ ಆಸ್ಪತ್ರೆ (Vydehi Hospital) ಗೆ ದಾಖಲಿಸಿದ್ರು. ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿದ್ದರಿಂದ ಮಣಿಪಾಲ್ ಆಸ್ಪತ್ರೆ (Manipal Hospital) ಗೆ ಸೇರಿಸಲಾಗಿತ್ತು. ನಿರಂತರ ಚಿಕಿತ್ಸೆಯಿಂದ ಈಗ ಚೇತರಿಸಿಕೊಳ್ಳುತ್ತಿದ್ದಾರೆ ಎಂದರು.
Advertisement
Advertisement
ಎರಡು ಮೂರು ದಿನಗಳಲ್ಲಿ ಅವರು ಡಿಸ್ಜಾರ್ಜ್ (Discharge) ಆಗುತ್ತಾರೆ. ಅವರು ಚೇತರಿಸಿಕೊಳ್ಳುತ್ತಿದ್ದಾರೆ. ಯಾರು ಆತಂಕಕ್ಕೆ ಒಳಗಾಗಬಾರದು, ಗಾಬರಿ ಬೇಡ ಎಂದು ಇದೇ ವೇಳೆ ಸಿಎಂ ಮನವಿ ಮಾಡಿಕೊಂಡರು. ಇದನ್ನೂ ಓದಿ: ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಾ ಇದ್ದು, ವೈದ್ಯರ ತಂಡ ಆರೈಕೆ ಮಾಡ್ತಿದೆ: ಎಸ್‍ಎಂಕೆ ಹೆಲ್ತ್ ಬುಲೆಟಿನ್
Advertisement
ಹೆಲ್ತ್ ಬುಲೆಟಿನ್ ರಿಲೀಸ್: ಶ್ವಾಸಕೋಶ (Lungs Infection) ದ ಸೊಂಕಿನಿಂದ ಬಳಲುತ್ತಿರುವ ಎಸ್‍ಎಂಕೆಗೆ ಡಾ. ಸತ್ಯನಾರಾಯಣ್ ಮತ್ತು ಡಾ ಸುನೀಲ್ ಕಾರಂತ್ ರಿಂದ ಚಿಕಿತ್ಸೆ ನೀಡಲಾಗುತ್ತಿದೆ. ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಾ ಇದ್ದು ವೈದ್ಯರ ತಂಡ ಆರೈಕೆ ಮಾಡ್ತಾ ಇದೆ. ಶ್ವಾಸಕೋಶದ ಒಳಗಡೆ ಆಕ್ಸಿಜನ್ ಪ್ರಮಾಣ ಏರುಪೇರು ಆಗ್ತಾ ಇದ್ದು, ವೈದ್ಯರ ತಂಡ ನಿಗಾವಹಿಸಿದೆ. ಆರೋಗ್ಯ ಸಚಿವ ಡಾ. ಸುಧಾಕರ್ (Dr. Sudhakar) ಮೇಲ್ವಿಚಾರಣೆ ನಡೆಸುತ್ತಾ ಇದ್ದಾರೆ. ಅಲ್ಲದೆ ವೈದ್ಯರ ತಂಡದ ಜೊತೆ ಸಂಪರ್ಕದಲ್ಲಿ ಇದ್ದಾರೆ ಎಂದು ತಿಳಿಸಲಾಗಿದೆ.