ವಿಜಯಪುರ: ನನ್ನ ಕಚೇರಿಗೆ ಬುರ್ಖಾಧಾರಿಗಳು, ಟೋಪಿ ಧಾರಿಗಳು ಬರುವುದೇ ಬೇಡ ಎಂದು ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿವಾದಾತ್ಮಕ ಹೇಳಿಕೆ ನೀಡಿದ್ದು, ವಿಡಿಯೋ ವೈರಲ್ ಆಗಿದೆ.
ಸಿದ್ಧೇಶ್ವರ ಕಲಾಭವನದಲ್ಲಿ ಜೂನ್ 4 ರಂದು ನಡೆದ ಖಾಸಗಿ ಕಾರ್ಯಕ್ರಮದಲ್ಲಿ ಶಾಸಕರು ಮಾತನಾಡಿದ್ದರು. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಸದ್ಯ ಈ ಶಾಸಕ ಯತ್ನಾಳ್ ಅವರ ಈ ಹೇಳಿಕೆಯ ಬಗ್ಗೆ ಸಾರ್ವಜನಿಕರಿಂದ ಆಕ್ಷೇಪ ಕೇಳಿಬಂದಿದೆ.
Advertisement
Advertisement
ಚುನಾವಣೆಯ ಪ್ರಕ್ರಿಯೆ ಪೂರ್ಣಗೊಳ್ಳುವವರೆಗೆ ನಾನು ಮುಸ್ಲಿಮರ ಮುಖವನ್ನೇ ನೋಡಬಾರದು ಎಂದು ಶಪಥ ಮಾಡಿದ್ದೆ. ಅಲ್ಲದೇ ಮುಸ್ಲಿಮರು ನನಗೆ ಮತ ಹಾಕುವುದೇ ಬೇಡವೆಂದು ಹೇಳಿದ್ದೆ. ಮುಸ್ಲಿಮರಿಗೆ ಬೆಂಬಲಿಸುತ್ತಿರುವ ಕೆಲವು ಹಿಂದುಗಳು ಅವರಿಗೆ ಹುಟ್ಟಿದ್ದಾರೆ ಅನಿಸುತ್ತದೆ. ನಾನು ಚುನಾವಣೆಯಲ್ಲಿ ಸೋಲುತ್ತೇನೆಂದು ಅವರು ಭಾವಿಸಿದ್ದರು ಎಂದು ಶಾಸಕ ಯತ್ನಾಳ್ ಭಾಷಣದಲ್ಲಿ ಹೇಳಿದ್ದರು.
Advertisement
ಹಿಂದೂ ಜನರನ್ನು ಬಿಟ್ಟು ಬೇರೆ ಯಾರಿಗೂ ಕೆಲಸ ಮಾಡಿಕೊಡದಂತೆ ಮಹಾನಗರ ಪಾಲಿಕೆ ಸದಸ್ಯರಿಗೂ ತಾಖೀತು ಮಾಡಿರುವೆ. ಮುಸ್ಲಿಮರು ಹಿಂದೂ ಮಹಿಳೆಯರಿಗೆ, ವ್ಯಾಪಾರಿಗಳಿಗೆ ತೊಂದರೆ ಕೊಟ್ಟರೆ ಸೂಕ್ತ ಕ್ರಮ ಕೈಗೊಳ್ಳಲಾಗುತ್ತದೆ. ನಾನು ಆಯ್ಕೆಯಾಗದಿದ್ದರೆ ತಮಗೆ ಉಳಿಗಾಲವಿಲ್ಲವೆಂದು ಹಿಂದೂಗಳು ತಿಳಿದಿದ್ದರು. ಹೀಗಾಗಿ ಅವರೇ ಚುನಾವಣೆಯಲ್ಲಿ ಗೆಲುವು ನೀಡಿದ್ದಾರೆ. ಹಿಂದೂಗಳ ಪರವಾಗಿ ಮಾತ್ರ ನಾನು ಕೆಲಸ ಮಾಡುತ್ತೇನೆ ಎಂದು ಅವರು ಹೇಳಿದರು.
Advertisement
ವಿವಾದಾತ್ಮಕ ಹೇಳಿಕೆಯ ಬಗ್ಗೆ ಪ್ರಶ್ನೆ ಕೇಳಿದ್ದಕ್ಕೆ ಶಿವಾಜಿ ಮಹಾರಾಜರ ಕಾರ್ಯಕ್ರಮದಲ್ಲಿ ನಾನು ಮುಸ್ಲಿಮರ ಬಗ್ಗೆ ಮಾತನಾಡಿದ್ದೇನೆ. ಹಿಂದೂ ಧರ್ಮದ ವಿರುದ್ಧ ಮಾತನಾಡುವ ಅಕ್ಬರುದ್ದೀನ್ ಓವೈಸಿಗೆ ಮೊದಲು ಪ್ರಶ್ನೆ ಮಾಡಿ, ಅವರ ವಿರುದ್ಧ ಬರೆಯಿರಿ. ನಂತರ ನನ್ನನ್ನು ಪ್ರಶ್ನಿಸಿ ಎಂದು ಮಾಧ್ಯಮಗಳ ವಿರುದ್ಧ ಹರಿಹಾಯ್ದಿದ್ದಾರೆ.
ನಾನು ಚುನಾವಣೆಗೂ ಮುನ್ನ ಮುಸ್ಲಿಮರ ಮತಗಳು ಬೇಡವೆಂದು ಹೇಳಿದ್ದೆನೆ. ನನ್ನ ಮಾತಿಗೆ ನಾನು ಈಗಲೂ ಬದ್ಧನಾಗಿರುವೆ. ಹಫ್ತಾ ವಸೂಲಿ, ರೌಡಿಶೀಟರ್ ಗಳ ಬಗ್ಗೆ ಹೇಳಿದ್ದೇನೆ. ದೇಶ ದ್ರೋಹಿಗಳಿಗೆ ತಕ್ಕ ಪಾಠ ಕಲಿಸಬೇಕು ಎಂದು ಅವರು ಪ್ರತಿಕ್ರಿಯೆ ನೀಡಿದ್ದಾರೆ.