Connect with us

ವೋಟಿನ ರಾಜಕಾರಣ ಬೇಡ, ಸುಹಾನ ಗೆ ಸರ್ಕಾರ ರಕ್ಷಣೆ ನೀಡ್ಬೇಕು: ಶೋಭಾ ಕರಂದ್ಲಾಜೆ

ವೋಟಿನ ರಾಜಕಾರಣ ಬೇಡ, ಸುಹಾನ ಗೆ ಸರ್ಕಾರ ರಕ್ಷಣೆ ನೀಡ್ಬೇಕು: ಶೋಭಾ ಕರಂದ್ಲಾಜೆ

ಬೆಂಗಳೂರು: ವೋಟಿನ ರಾಜಕಾರಣ ಮಾಡುವುದು ಬೇಡ. ಸುಹಾನಾಗೆ ಸರ್ಕಾರ ರಕ್ಷಣೆ ನೀಡಬೇಕು ಅಂತ ಸಂಸದೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ.

ರಿಯಾಲಿಟಿ ಶೋನಲ್ಲಿ ಮುಸ್ಲಿಂ ಯುವತಿ ಸುಹಾನ ಸಯೀದ್ ಹಿಂದೂ ದೇವರನಾಮ ಹಾಡಿದ್ದಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ವಿರೋಧ ವ್ಯಕ್ತವಾಗಿರುವ ಕುರಿತು ಪ್ರತಿಕ್ರಿಯಿಸಿದ ಕರಂದ್ಲಾಜೆ, ಸುಹಾನ ಒಳ್ಳೆಯ ಗಾಯಕಿ. ಅವರ ವಿರುದ್ಧ ಬೆದರಿಕೆ ಬರುತ್ತಿವೆ. ಅಲ್ಪಸಂಖ್ಯಾತರ ಬಗ್ಗೆ ಸರ್ಕಾರ ಹೇಳಿಕೊಳ್ಳುತ್ತೆ. ಆದರೆ ಸುಹಾನ ವಿಚಾರದಲ್ಲಿ ಮಾತನಾಡದಿರೋದು ಏಕೆ ಅಂತ ಪ್ರಶ್ನಿಸಿದ್ರು.

ಹೆಣ್ಣು ಮಕ್ಕಳ ಸ್ವಶಕ್ತೀಕರಣದ ಬಗ್ಗೆ ಸಿಎಂ ಮಾತನಾಡ್ತಾರೆ. ಸುಹಾನ ರಕ್ಷಣೆ ಕೊಡುವ ಬಗ್ಗೆ ಮಾತನಾಡ್ತಿಲ್ಲ. ಮಾತನಾಡಿದರೆ ತಪ್ಪಾಗುತ್ತದೆಂದು ಸಿಎಂ ಮಾತನಾಡ್ತಿಲ್ಲ. ವೋಟಿನ ರಾಜಕಾರಣ ಬೇಡ. ಸುಹಾನಗೆ ರಕ್ಷಣೆ ನೀಡಬೇಕು ಅಂತ ಅವರು ಹೇಳಿದ್ರು.

Advertisement
Advertisement