ಮುಂಬೈ: ಟೀಂ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ (MS Dhoni) 2020ರ ಆಗಸ್ಟ್ 15 ರಂದು ಅಂತಾರಾಷ್ಟ್ರೀಯ ಕ್ರಿಕೆಟ್ಗೆ ನಿವೃತ್ತಿ ಹೇಳಿರುವುದು ಗೊತ್ತೇ ಇದೆ. ಆದರೆ ಧೋನಿ 2019ರಲ್ಲೇ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ನಿವೃತ್ತಿ (Retirement) ಹೇಳಿದ್ದರು ಎಂದು ಟೀಂ ಇಂಡಿಯಾದ (Team India) ಫಿಲ್ಡಿಂಗ್ ಕೋಚ್ ಆಗಿದ್ದ ಆರ್.ಶ್ರೀಧರ್ (R.Sridhar) ಹೇಳಿದ್ದಾರೆ.
Advertisement
ಕೋಚಿಂಗ್ ಬಿಯಾಂಡ್ ಮೈ ಡೇಸ್ ವಿಥ್ ದಿ ಇಂಡಿಯನ್ ಕ್ರಿಕೆಟ್ ಟೀಮ್ ಎಂಬ ಪುಸ್ತಕದಲ್ಲಿ ಈ ಇಂಟ್ರಸ್ಟಿಂಗ್ ಸಂಗತಿಯನ್ನು ಆರ್.ಶ್ರೀಧರ್ ಬಹಿರಂಗ ಪಡಿಸಿದ್ದಾರೆ. 2019ರ ಏಕದಿನ ವಿಶ್ವಕಪ್ ಸೆಮಿಫೈನಲ್ (ODI World Cup SemiFinal) ಪಂದ್ಯವನ್ನು ನ್ಯೂಜಿಲೆಂಡ್ ವಿರುದ್ಧ ಭಾರತ ಸೋತಿತ್ತು. ಅಂದು ಧೋನಿ ರನೌಟ್ ಮೂಲಕ ಕೊನೆಯಲ್ಲಿ ಔಟ್ ಆಗಿದ್ದರು. ಅಂದೇ ಧೋನಿ ಕ್ರಿಕೆಟ್ಗೆ ನಿವೃತ್ತಿ ಘೋಷಿಸಿದ್ದರು. ಇದನ್ನೂ ಓದಿ: ತಾಲಿಬಾನ್ ಆಡಳಿತದ ವಿರುದ್ಧ ಮುನಿಸು – ಅಫ್ಘಾನಿಸ್ತಾನ ವಿರುದ್ಧ ನಾವು ಆಡಲ್ಲ ಎಂದ ಆಸ್ಟ್ರೇಲಿಯಾ
Advertisement
Advertisement
ಧೋನಿ, ಪಂತ್ ಜೊತೆ ತಿಂಡಿ ತಿನ್ನುತ್ತಿದ್ದರು. ಈ ವೇಳೆ ಪಂತ್, ಭಯ್ಯ ತಂಡದಲ್ಲಿರುವ ಕೆಲವರು ಇಂದೇ ಲಂಡನ್ ಬಿಟ್ಟು ತೆರಳಲು ಯೋಚಿಸುತ್ತಿದ್ದಾರೆ. ನಿಮ್ಮ ಪ್ಲಾನ್ ಏನು ಎಂದು ಕೇಳಿದ್ದಾರೆ. ಈ ವೇಳೆ ಧೋನಿ, ನಾನು ತಂಡದ ಜೊತೆ ನನ್ನ ಕೊನೆಯ ಬಸ್ ಪ್ರಯಾಣವನ್ನು ಮಿಸ್ ಮಾಡಿಕೊಳ್ಳುವುದಿಲ್ಲ ಎಂದು ಹೇಳಿದ್ದರು. ಈ ಮೂಲಕ ನ್ಯೂಜಿಲೆಂಡ್ ವಿರುದ್ಧದ ಸೆಮಿಫೈನಲ್ ಪಂದ್ಯ ಧೋನಿಯ ಕೊನೆಯ ಪಂದ್ಯವಾಗಿತ್ತು ಎಂಬ ಹಿಂಟ್ ನೀಡಿದ್ದರು ಎಂದು ಬರೆದುಕೊಂಡಿದ್ದಾರೆ. ಇದನ್ನೂ ಓದಿ: 1,929 ಗಂಟೆಗಳ ಬಳಿಕ ನಿವೃತ್ತಿ ಹೊಂದಿದ್ದೇನೆ – 2 ವರ್ಷಗಳ ಹಿಂದೆ ಶಾಕಿಂಗ್ ನ್ಯೂಸ್ ಕೊಟ್ಟಿದ್ದ ಧೋನಿ
Advertisement
2019ರ ಏಕದಿನ ವಿಶ್ವಕಪ್ ಸೆಮಿಫೈನಲ್ ಪಂದ್ಯದ ನಂತರ ಕ್ರಿಕೆಟ್ನಿಂದ ದೂರ ಉಳಿದಿದ್ದ ಧೋನಿ, ವಿದಾಯ ಘೋಷಿಸುವ ಯಾವುದೇ ಸುಳಿವನ್ನು ನೀಡಿರಲಿಲ್ಲ. ಆದರೆ 2020 ಆಗಸ್ಟ್ 15 ರಂದು ಇನ್ಸ್ಟಾಗ್ರಾಮ್ನಲ್ಲಿ ಪೋಸ್ಟ್ ಹಾಕುವ ಮೂಲಕ ವಿದಾಯ ಸುದ್ದಿ ನೀಡಿದ್ದರು. 2022ರ ಆಗಸ್ಟ್ 15 ರಂದು ರಾತ್ರಿ 7:29 ಗಂಟೆಗೆ ಇನ್ಸ್ಟಾಗ್ರಾಮ್ನಲ್ಲಿ, ನಿಮ್ಮೆಲ್ಲರ ಪ್ರೀತಿ, ಸಹಕಾರಕ್ಕೆ ಧನ್ಯವಾದಗಳು 1,929 ಗಂಟೆಗಳ ಬಳಿಕ ನನ್ನನ್ನು ನಿವೃತ್ತಿ ಹೊಂದಿದ ಆಟಗಾರ ಎಂದು ಸ್ವೀಕರಿಸಿ ಎಂದು ಧೋನಿ ನಿವೃತ್ತಿಯ ಬಗ್ಗೆ ಘೋಷಿಸಿದ್ದರು. ಇದು ಧೋನಿ ಅಭಿಮಾನಿಗಳಲ್ಲಿ ಬೇಸರ ತರಿಸಿತ್ತು.
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k