ನವದೆಹಲಿ: ತಮ್ಮ ಪ್ರವಾಸದ ವೇಳೆ ವೆಸ್ಟ್ ಇಂಡೀಸ್ (West Indies) ಕ್ರಿಕೆಟ್ ಮಂಡಳಿ ಮೂಲಭೂತ ವ್ಯವಸ್ಥೆಗಳನ್ನು ಒದಗಿಸಿಲ್ಲ ಎಂದು ಟೀಂ ಇಂಡಿಯಾ (eam India) ನಾಯಕ ಹಾರ್ದಿಕ್ ಪಾಂಡ್ಯ (Hardik Pandya) ಆರೋಪಿಸಿದ್ದಾರೆ.
ಹಾರ್ದಿಕ್ ಕ್ರೀಡಾಂಗಣವನ್ನು ಅತ್ಯುತ್ತಮವಾದ ಸ್ಥಳಗಳಲ್ಲಿ ಒಂದಾಗಿದೆ ಎಂದಿದ್ದಾರೆ. ಆದರೆ ವೆಸ್ಟ್ ಇಂಡೀಸ್ ಕ್ರಿಕೆಟ್ ಮಂಡಳಿಯ ನ್ಯೂನತೆಗಳನ್ನು ಇದೇ ವೇಳೆ ಎತ್ತಿ ತೋರಿಸಿದ್ದಾರೆ. ಕ್ರಿಕೆಟ್ ಮಂಡಳಿ ಮೂಲಭೂತ ಅವಶ್ಯಕತೆಗಳನ್ನು ಪೂರೈಸಿಲ್ಲ. ಭವಿಷ್ಯದಲ್ಲಿ ಆತಿಥೇಯರು ಈ ಬಗ್ಗೆ ಎಚ್ಚರವನ್ನು ಹೊಂದಬೇಕು ಎಂದು ಅವರು ಮನವಿ ಮಾಡಿದ್ದಾರೆ. ಇದನ್ನೂ ಓದಿ: 200 ರನ್‌ಗಳ ಭರ್ಜರಿ ಗೆಲುವು – ವಿಂಡೀಸ್ ವಿರುದ್ಧ ಸತತ 13ನೇ ಏಕದಿನ ಸರಣಿ ಗೆದ್ದ ಭಾರತ
Advertisement
ಇದು ನಾವು ಆಡಿದ ಉತ್ತಮ ಮೈದಾನಗಳಲ್ಲಿ ಒಂದಾಗಿದೆ. ನಾವು ಮುಂದಿನ ಬಾರಿ ವೆಸ್ಟ್ ಇಂಡೀಸ್‍ಗೆ ಬಂದಾಗ ಎಲ್ಲವೂ ಉತ್ತಮವಾಗಬಹುದು. ಕಳೆದ ವರ್ಷವೂ ಕೆಲವು ಬಿಕ್ಕಟ್ಟುಗಳು ಸಂಭವಿಸಿದ್ದವು. ವೆಸ್ಟ್ ಇಂಡೀಸ್ ಕ್ರಿಕೆಟ್ ಮಂಡಳಿಗೆ ನಾವು ಐಷಾರಾಮಿ ಸೌಲಭ್ಯವನ್ನು ಕೇಳುವುದಿಲ್ಲ. ಆದರೆ ನಮಗೆ ಕೆಲವು ಮೂಲಭೂತ ಅವಶ್ಯಕತೆಗಳನ್ನು ಒದಗಿಸಬೇಕು ಎಂದು ಬಯಸುತ್ತೇನೆ ಎಂದಿದ್ದಾರೆ.
Advertisement
ಟ್ರಿನಿಡಾಡ್‍ನಿಂದ ಬಾರ್ಬಡೋಸ್‍ಗೆ ತಡರಾತ್ರಿಯ ವಿಮಾನವು ಸುಮಾರು ನಾಲ್ಕು ಗಂಟೆಗಳಷ್ಟು ವಿಳಂಬವಾದ ನಂತರ ಭಾರತೀಯ ಕ್ರಿಕೆಟಿಗರು ಬಿಸಿಸಿಐಗೆ ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದ್ದರು. ಇದರಿಂದಾಗಿ ಪಂದ್ಯದ ವೇಳೆ ಆಟಗಾರರು ನಿದ್ರಾಹೀನರಾಗಿದ್ದರು. ಪಂದ್ಯಗಳ ನಡುವೆ ಕಡಿಮೆ ಅಂತರವಿರುವಾಗ ತಡರಾತ್ರಿ ವಿಮಾನಗಳನ್ನು ಇರಿಸದಂತೆ ಹಿರಿಯ ಕ್ರಿಕೆಟಿಗರು ಬಿಸಿಸಿಐಗೆ ವಿನಂತಿಸಿದ್ದಾರೆ.
Advertisement
Advertisement
ವೆಸ್ಟ್ ಇಂಡೀಸ್ ವಿರುದ್ಧದ ಮೂರನೇ ಏಕದಿನ ಪಂದ್ಯವನ್ನು ಭರ್ಜರಿ 200 ರನ್‍ಗಳಿಂದ ಗೆಲ್ಲುವ ಮೂಲಕ ಟೀಂ ಇಂಡಿಯಾ ಮೂರು ಪಂದ್ಯಗಳ ಏಕದಿನ ಸರಣಿಯನ್ನು 2-1 ಅಂತರದಿಂದ ಗೆದ್ದುಕೊಂಡಿದೆ. ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಭಾರತ 50 ಓವರ್‍ಗಳಲ್ಲಿ 351 ರನ್ ಗಳಿಸಿತು. ಕಠಿಣ ಸವಾಲನ್ನು ಬೆನ್ನತ್ತಿದ ವಿಂಡೀಸ್ 151 ರನ್‍ಗಳಿಗೆ ಆಲೌಟ್ ಆಯ್ತು. ಈ ಮೂಲಕ ತವರಿನಲ್ಲಿ ವಿಂಡೀಸ್ ಸತತ 6ನೇ ಸರಣಿ ಸೋತರೆ, ವಿಂಡೀಸ್ ವಿರುದ್ಧ ಭಾರತ ಸತತ 13ನೇ ಏಕದಿನ ಸರಣಿ ಗೆದ್ದುಕೊಂಡಂತಾಗಿದೆ.
ಪಂದ್ಯದಲ್ಲಿ ಸಂಜು ಸ್ಯಾಮ್ಸನ್ ಮತ್ತು ರುತುರಾಜ್ ಗಾಯಕ್ವಾಡ್ ಅವರಂತಹ ಕಿರಿಯ ಆಟಗಾರರಿಗೆ ಹೆಚ್ಚಿನ ಅವಕಾಶಗಳನ್ನು ನೀಡಲಾಗಿದೆ. ನಾಯಕ ರೋಹಿತ್ ಶರ್ಮಾ ಮತ್ತು ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿಗೆ ಪಂದ್ಯದಲ್ಲಿ ವಿಶ್ರಾಂತಿ ನೀಡಿದ್ದರಿಂದ ಹಾರ್ದಿಕ್ ಸತತ ಎರಡನೇ ಬಾರಿಗೆ ಟೀಂ ಇಂಡಿಯಾವನ್ನು ಮುನ್ನಡೆಸಿದ್ದಾರೆ.
ವೆಸ್ಟ್ ಇಂಡೀಸ್ ವಿರುದ್ಧ ಇದೇ ಮೈದಾನದಲ್ಲಿ ಗುರುವಾರ ಆರಂಭವಾಗಲಿರುವ ಐದು ಪಂದ್ಯಗಳ ಟಿ20 ಸರಣಿಯಲ್ಲಿ ಹಾರ್ದಿಕ್ ನಾಯಕತ್ವ ವಹಿಸಲಿದ್ದಾರೆ. ಇದನ್ನೂ ಓದಿ: IND vs WI: ಹ್ಯಾಟ್ರಿಕ್ ಅರ್ಧ ಶತಕ ಸಿಡಿಸಿ ಮಹಿ ದಾಖಲೆ ಸರಿಗಟ್ಟಿದ ಇಶಾನ್ ಕಿಶನ್
Web Stories