ಬೆಂಗಳೂರು: ನಗರದಲ್ಲಿ ಮಳೆ ಆಗುತ್ತಿರುವ ಸಂದರ್ಭದಲ್ಲಿ ಮಳೆ ಹಾನಿ ಪ್ರದೇಶಗಳಿಗೆ ಭೇಟಿ ನೀಡದೆ ಇರುವುದಕ್ಕೆ ಅಲ್ಲಿ ಹೋಗಿ ನಾನು ಪ್ರಚಾರ ತೆಗೆದುಕೊಳ್ಳುವುದು ಬೇಡ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ (D.K.Shivakumar) ಹೇಳಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಅವರು, ನಮ್ಮ ಅಧಿಕಾರಿಗಳು 48 ಗಂಟೆ ಸತತವಾಗಿ ಕೆಲಸ ಮಾಡಿದ್ದಾರೆ. ನಾನೇ ಕೆಲವರನ್ನ ಈಗ ರಿಲೀವ್ ಮಾಡಲು ಹೇಳಿದ್ದೇನೆ. ನಿನ್ನೆ ಇಡೀ ದಿನ ಬಿಜೆಪಿಯವರಿಗೆ ಕಾಣಿಸಿದ್ದೇನೆ ಅಲ್ವಾ. ನಿನ್ನೆ ತಡರಾತ್ರಿ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಬೆಂಗಳೂರಲ್ಲಿ ಮಳೆ ಆರ್ಭಟ; ನಾಳೆ ಅಂಗನವಾಡಿ, ಪ್ರಾಥಮಿಕ-ಪ್ರೌಢ ಶಾಲೆಗಳಿಗೆ ರಜೆ ಘೋಷಣೆ
ಚೌಡೇಶ್ವರಿ ನಗರದ 150 MM ಮಳೆ ಬಿದ್ದಿದೆ, ಜಾಸ್ತಿ ಮಳೆ ಆಗಿದೆ. ಅಧಿಕಾರಿಗಳು ಸಂಪೂರ್ಣ ಮಾಹಿತಿ ನೀಡಿದ್ದಾರೆ. ಎಲ್ಲರಿಗೂ ಮಾರ್ಗದರ್ಶನ ನೀಡಿದ್ದೇನೆ. ಕೇಂದ್ರ ವಿದ್ಯಾಲಯ, ಟಾಟಾ ನಗರದಿಂದ ನೀರು ಎತ್ತುವ ಕೆಲಸ ಆಗ್ತಿದೆ. ಐದು ಎಸ್‌ಡಿಆರ್‌ಎಫ್ ತಂಡ ಕೆಲಸ ಮಾಡ್ತಿದೆ. ನನಗೆ ವಿಸಿಟ್ ದೊಡ್ಡದೇನು ಅಲ್ಲ. ಪಬ್ಲಿಸಿಟಿ ನನಗೆ ಮುಖ್ಯ ಅಲ್ಲ. ಅದಕ್ಕಾಗಿ ಒಂದು ಪ್ರತ್ಯೇಕ ಟೀಂ ಮಾಡಿದ್ದೇವೆ. ಎಲ್ಲೆಲ್ಲಿ ಮಳೆ ಸಮಸ್ಯೆ ಇದೆ ಎಂಬ ಬಗ್ಗೆ ವರದಿ ನೀಡಲು ಹೇಳಿದ್ದೇನೆ ಎಂದು ಮಾಹಿತಿ ನೀಡಿದ್ದಾರೆ.
ಪ್ರಕೃತಿ ಮುಂದೆ ಯಾರೂ ಇಲ್ಲ. ದುಬೈ, ದೆಹಲಿ ಸೇರಿದಂತೆ ಹಲವೆಡೆ ಮಳೆ ಅಗ್ತಿದೆ. ಬರಗಾಲ ಪ್ರದೇಶದಲ್ಲಿಯೂ ಮಳೆ ಆಗ್ತಿದೆ. ನಾವು ಇಡೀ ತಂಡದಿಂದ ಮಾಹಿತಿ ತರಿಸಿಕೊಂಡಿದ್ದೇನೆ. ನಾನು ನಿನ್ನೆ ನೆಲಮಂಗಲ ರಸ್ತೆಯಲ್ಲಿ ತಗಲಾಕಿಕೊಂಡಿದ್ದೆ. ನಿನ್ನೆ ರಾತ್ರಿ ಎಲ್ಲಾ ರಿವ್ಯೂವ್ ಮಾಡಿದ್ದೇನೆ. ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ದಾಸರಹಳ್ಳಿಯಲ್ಲಿ ಒಂದು ಟ್ಯಾಂಕ್ ಒಡೆದು ಹೋಗಿದೆ. ಮಹದೇವಪುರ, ಭದ್ರಪ್ಪ ಲೇಔಟ್, ರಮಣಶ್ರೀ ಸೇರಿದಂತೆ ಎಲ್ಲ ಕಡೆ ಮಳೆ ಆಗಿದೆ. ಎಲ್ಲ ಕಡೆ ಅಧಿಕಾರಿಗಳು ಕೆಲಸ ಮಾಡ್ತಿದ್ದಾರೆ ಎಂದಿದ್ದಾರೆ. ಇದನ್ನೂ ಓದಿ: ಬೆಂಗಳೂರಲ್ಲಿ ಭಾರೀ ಮಳೆಗೆ ನಿರ್ಮಾಣ ಹಂತದ ಕಟ್ಟಡ ಕುಸಿತ; ಮೂವರು ಕಾರ್ಮಿಕರ ಸಾವು
ಕೆರೆಗೆ ಮಕ್ಕಳು ಬಿದ್ದಿರುವುದು ನನ್ನ ಗಮನಕ್ಕೆ ಬಂದಿದೆ. ಪಾಪ ತಾಯಿಯ ಗೋಳು ಟಿವಿಯಲ್ಲಿ ನೋಡಿದೆ ಎಂದು ಡಿಸಿಎಂ ಮರುಕ ವ್ಯಕ್ತಪಡಿಸಿದ್ದಾರೆ.