ನವದೆಹಲಿ: ನಾಯಿ ಬಿಸ್ಕೆಟ್ (Dog Biscuit) ವಿಚಾರವಾಗಿ ತಮ್ಮ ವಿರುದ್ಧ ಟೀಕೆ ವ್ಯಕ್ತಪಡಿಸಿರುವ ಬಿಜೆಪಿ ನಾಯಕರ ವಿರುದ್ಧ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ಕಿಡಿಕಾರಿದ್ದಾರೆ.
ನಾಯಿ ಬಿಸ್ಕೆಟ್ ಕುರಿತು ಸ್ಪಷ್ಟನೆ ನೀಡಿರುವ ರಾಹುಲ್ ಗಾಂಧಿ, ನಾಯಿಗೆ ನಾನು ಬಿಸ್ಕೆಟ್ ತಿನ್ನಿಸಲು ಪ್ರಯತ್ನಿಸಿದೆ. ಆದರೆ ಅದು ಸ್ವೀಕರಿಸಲಿಲ್ಲ, ನಡುಗುತ್ತಿತ್ತು. ಹೀಗಾಗಿ ಅದರ ಮಾಲೀಕರಿಗೆ ನಾನು ಬಿಸ್ಕೆಟ್ ನೀಡಿದೆ. ಮಾಲೀಕನ ಕೈ ಸೇರುತ್ತಿದ್ದಂತೆ ನಾಯಿ ಬಿಸ್ಕೆಟ್‌ಗಳನ್ನು ತಿಂದಿತು. ಅದರಲ್ಲಿ ಏನು ಸಮಸ್ಯೆ ಇದೆ ಎಂದು ಬಿಜೆಪಿ ವಿರುದ್ಧ ಹರಿಹಾಯ್ದಿದ್ದಾರೆ.
Advertisement
#WATCH | On the viral video of him feeding a dog during the ‘Bharat Jodo Nyay Yatra’, Congress leader Rahul Gandhi says, “…I called the dog and the owner. The dog was nervous, shivering and when I tried to feed it, the dog got scared. So I gave biscuits to the dog’s owner and… pic.twitter.com/QhO6QvfyNB
— ANI (@ANI) February 6, 2024
Advertisement
ನಾಯಿ ತಿರಸ್ಕರಿಸಿದ ಬಿಸ್ಕೆಟ್ ಅನ್ನು ರಾಹುಲ್ ಗಾಂಧಿ ವ್ಯಕ್ತಿಯೊಬ್ಬರಿಗೆ ನೀಡುತ್ತಿರುವ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಇದಕ್ಕೆ ಟೀಕೆ ಕೂಡ ವ್ಯಕ್ತವಾಗಿತ್ತು. ರಾಹುಲ್ ಗಾಂಧಿ ತಮ್ಮ ಪಕ್ಷದ ಕಾರ್ಯಕರ್ತರನ್ನು ಈ ರೀತಿ ನಡೆಸಿಕೊಂಡಿದ್ದಾರೆ ಎಂದು ಬಿಜೆಪಿ ನಾಯಕರು ಟೀಕಿಸಿದ್ದರು. ಇದನ್ನೂ ಓದಿ: ನಾಯಿ ತಿನ್ನದ ಬಿಸ್ಕತ್ತನ್ನು ಕಾರ್ಯಕರ್ತನಿಗೆ ನೀಡಿದ ರಾಹುಲ್ ಗಾಂಧಿ – ವಿಡಿಯೋ ವೈರಲ್
Advertisement
ಭಾರತ್ ಜೋಡೊ ನ್ಯಾಯ ಯಾತ್ರಾ ವೀಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ. ರಾಹುಲ್ ಗಾಂಧಿ, ನಾಯಿಗೆ ಬಿಸ್ಕೆಟ್ ನೀಡಿದ್ದಾರೆ. ಆದರೆ ನಾಯಿ ಅದನ್ನು ತಿನ್ನಲು ನಿರಾಕರಿಸಿದೆ. ನಂತರ ಅದರ ಮಾಲೀಕನಿಗೆ ಬಿಸ್ಕೆಟ್‌ನ್ನು ರಾಹುಲ್ ಗಾಂಧಿ ನೀಡಿದ್ದಾರೆ. ಈ ದೃಶ್ಯದ ವೀಡಿಯೋ ವೈರಲ್ ಆಗಿದೆ.
Advertisement
ನಾಯಿ ತಿನ್ನಲು ನಿರಾಕರಿಸಿದ ಬಿಸ್ಕೆಟ್ ಅನ್ನು ಕಾರ್ಯಕರ್ತನಿಗೆ ರಾಹುಲ್ ಗಾಂಧಿ ನೀಡಿದ್ದಾರೆ ಎಂದು ಬಿಜೆಪಿ ಲೇವಡಿ ಮಾಡಿದೆ. ಇದಕ್ಕೆ ಪ್ರತಿಯಾಗಿ ರಾಹುಲ್ ಗಾಂಧಿ ಸ್ಪಷ್ಟನೆ ನೀಡಿದ್ದಾರೆ. ಇದನ್ನೂ ಓದಿ: ಉತ್ತರಾಖಂಡ ವಿಧಾನಸಭೆಯಲ್ಲಿ ಏಕರೂಪದ ನಾಗರಿಕ ಸಂಹಿತೆ ಮಸೂದೆ ಮಂಡನೆ