ಧಾರವಾಡ: ಮುಸ್ಲಿಂ (Muslim) ಸಮುದಾಯಕ್ಕೆ ಕೊಟ್ಟಿರುವ ಶೇ.4 ಮೀಸಲಾತಿಯನ್ನು (2A Reservation) ವಾಪಸ್ ಪಡೆದುಕೊಳ್ಳಿ ಎನ್ನುವುದು ಯಾವ ನ್ಯಾಯ? ಮುಸ್ಲಿಂ ಸಮುದಾಯದ ಮೀಸಲಾತಿಗೆ ಕೈ ಹಾಕಬೇಡಿ. ಒಂದು ವೇಳೆ ಹಾಗೆ ಮಾಡಿದ್ದೇ ಆದಲ್ಲಿ ನಾವೂ ಬೀದಿಗಿಳಿಯಬೇಕಾಗುತ್ತದೆ ಎಂದು ಧಾರವಾಡ ಅಂಜುಮನ್ ಸಂಸ್ಥೆಯ ಮಾಜಿ ಅಧ್ಯಕ್ಷ ಇಸ್ಮಾಯಿಲ್ ತಮಟಗಾರ (Ismail Tamatgar) ಎಚ್ಚರಿಕೆ ನೀಡಿದ್ದಾರೆ.
ಧಾರವಾಡದಲ್ಲಿ (Dharwad) ಮಾತನಾಡಿದ ಅವರು, ಪಂಚಮಸಾಲಿ (Panchmasali) ಸಮುದಾಯಕ್ಕೆ 2ಎ ಮೀಸಲಾತಿ ನೀಡಿ ಎಂದು ಹೋರಾಟ ನಡೆಯುತ್ತಿದೆ. ಈ ಹೋರಾಟಕ್ಕೆ ನಮ್ಮ ಬೆಂಬಲವೂ ಇದೆ. ಆದರೆ, ಶಾಸಕರಾದ ಅರವಿಂದ ಬೆಲ್ಲದ ಹಾಗೂ ಬಸನಗೌಡ ಪಾಟೀಲ್ ಯತ್ನಾಳ್ ಅವರು ಮುಸ್ಲಿಂ ಸಮುದಾಯಕ್ಕೆ ನೀಡಿರುವ ಶೇ.4 ಮೀಸಲಾತಿಯನ್ನು ಕಡಿತಗೊಳಿಸಿ ನಮಗೆ ನೀಡಿ ಎನ್ನುತ್ತಿದ್ದಾರೆ. ಇದು ಸರಿಯಲ್ಲ. ಈ ರೀತಿ ಹೇಳಿಕೆ ನೀಡಿದರೆ ನಾವೂ ಸಹ ಶೇ.8 ಮೀಸಲಾತಿ ಕೊಡಿ ಎಂದು ಬೀದಿಗಿಳಿಯಬೇಕಾಗುತ್ತದೆ ಎಂದು ಹೇಳಿದರು. ಇದನ್ನೂ ಓದಿ: ಭಾರತ್ ಜೋಡೋ ಯಾತ್ರೆ – ಬಾಲಕನಿಗೆ ಕರಾಟೆ ಪಂಚ್ ಹೇಳ್ಕೊಟ್ಟ ರಾಹುಲ್
Advertisement
Advertisement
ಮುಸ್ಲಿಂ ಸಮುದಾಯಕ್ಕೆ ಕೊಟ್ಟಿರುವ ಶೇ.4 ಮೀಸಲಾತಿಯನ್ನು ವಾಪಸ್ ಪಡೆದುಕೊಳ್ಳಿ ಎನ್ನುವುದು ಯಾವ ನ್ಯಾಯ? ಪಂಚಮಸಾಲಿಗೆ 2ಎ ಮೀಸಲಾತಿ ಕೊಟ್ಟಿದ್ದೇ ಆದಲ್ಲಿ ಒಬಿಸಿಗೆ ಕೊಟ್ಟಿರುವ ಮೀಸಲಾತಿ ಕೂಡಾ ಹೋಗುತ್ತದೆ ಎಂದರು.
Advertisement
ಯತ್ನಾಳ್ ಹಾಗೂ ಬೆಲ್ಲದ ಅವರ ಜೊತೆ ವೇದಿಕೆ ಹಂಚಿಕೊಂಡ ಕಾಂಗ್ರೆಸ್ ಮುಖಂಡರು ಕೂಡಾ ಮುಸ್ಲಿಂ ಮೀಸಲಾತಿ ಬಗೆಗಿನ ತಮ್ಮ ನಿಲುವನ್ನು ಮೊದಲು ಸ್ಪಷ್ಟಪಡಿಸಬೇಕು. ಮುಸ್ಲಿಂ ಸಮಾಜ ಸುಮ್ಮನೆ ಇರುವುದಕ್ಕೆ ನಮ್ಮ ಮೀಸಲಾತಿಯನ್ನು ತೆಗೆಯಿರಿ ಎನ್ನುವ ಮಾತುಗಳನ್ನಾಡುತ್ತಿದ್ದಾರೆ. ಇವರ ಹೇಳಿಕೆಗಳು ಇದೇ ರೀತಿ ಮುಂದುವರೆದಿದ್ದೇ ಆದಲ್ಲಿ ನಾವೂ ಬೀದಿಗಿಳಿಯಬೇಕಾಗುತ್ತದೆ. ನಾವು ತೊಂದರೆಯಲ್ಲಿದ್ದೇವೆ. ನಮ್ಮ ತಂಟೆಗೆ ಕೈ ಹಾಕುವ ಕೆಲಸ ಮಾಡಬೇಡಿ ಎಂದು ಎಚ್ಚರಿಕೆ ನೀಡಿದರು. ಇದನ್ನೂ ಓದಿ: ಕಾಶಿ ಯಾತ್ರೆಗೆ ಬಿಬಿಎಂಪಿ ನೌಕರರು ಸಜ್ಜು