ಜೈಪುರ: ಈ ಬಾರಿಯೂ ಐಪಿಎಲ್‌ನಲ್ಲಿ (IPL 2023) ಬಲಿಷ್ಠ ತಂಡವಾಗಿ ಮುನ್ನುಗ್ಗುತ್ತಿರುವ ರಾಜಸ್ಥಾನ್ ರಾಯಲ್ಸ್ (Rajasthan Royals) ಸದ್ಯ 6 ಪಂದ್ಯಗಳಿಗೆ 4ರಲ್ಲಿ ಜಯಭೇರಿ ಬಾರಿಸಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ.
ಕಳೆದ ಬಾರಿ ಫೈನಲ್ ಪ್ರವೇಶಿಸಿದ್ದ ರಾಜಸ್ಥಾನ್, ಗುಜರಾತ್ ಟೈಟಾನ್ಸ್ (Gujarat Taitans) ವಿರುದ್ಧ ಸೋತು ನಿರಾಸೆ ಅನುಭವಿಸಿತ್ತು. ಒಂದು ವೇಳೆ ಈ ಬಾರಿ ರಾಜಸ್ಥಾನ್ ರಾಯಲ್ಸ್ ತಂಡ ಟ್ರೋಫಿ ಗೆದ್ದರೆ ನಾಯಕತ್ವ ವಹಿಸಿರುವ ಸಂಜು ಸ್ಯಾಮ್ಸನ್ (Sanju Samson) ಮತ್ತೆ ಟೀಂ ಇಂಡಿಯಾಕ್ಕೆ (Team India) ಉತ್ತಮ ಕಂಬ್ಯಾಕ್ ಮಾಡಲಿದ್ದಾರೆ ಎನ್ನುವ ಮಾತುಗಳು ಕೇಳಿಬರುತ್ತಿವೆ. ಇದನ್ನೂ ಓದಿ: IPL 2023: ಜೋಸ್, ಜೈಸ್ವಾಲ್, ಸ್ಯಾಮ್ಸನ್ ಸಿಡಿಲಬ್ಬರದ ಬ್ಯಾಟಿಂಗ್ – ರಾಜಸ್ಥಾನ್‌ಗೆ 72 ರನ್‌ಗಳ ಭರ್ಜರಿ ಜಯ
Advertisement
Advertisement
2023ರ ಸೀಜನ್‌ನಲ್ಲಿ ಶ್ರೀಲಂಕಾ, ನ್ಯೂಜಿಲೆಂಡ್ ಹಾಗೂ ಆಸ್ಟ್ರೇಲಿಯಾ ವಿರುದ್ಧ ನಡೆದ ಸರಣಿಯಲ್ಲಿ ಸಂಜು ಸ್ಯಾಮ್ಸನ್ ಸ್ಥಾನ ಪಡೆದುಕೊಂಡಿರಲಿಲ್ಲ. ನ್ಯೂಜಿಲೆಂಡ್ ವಿರುದ್ಧ ನಡೆದ 3 ಪಂದ್ಯಗಳ ಟಿ20 ಸರಣಿಯಲ್ಲಿ ಮೊದಲ ಪಂದ್ಯಕ್ಕೆ ಲಭ್ಯರಾಗಿದ್ದರು. ಆದರೆ ಫೀಲ್ಡಿಂಗ್ ವೇಳೆ ಕಾಲಿಗೆ ಪೆಟ್ಟಾಗಿಸಿಕೊಂಡಿದ್ದರಿಂದ ಮುಂದಿನ ಪಂದ್ಯಗಳಲ್ಲಿ ಆಡುವ ಅವಕಾಶ ಕಳೆದುಕೊಂಡರು. ಆಸ್ಟ್ರೇಲಿಯಾ ಟೆಸ್ಟ್ ಹಾಗೂ ಏಕದಿನ ಸರಣಿ ವೇಳೆಗೆ ಸಂಜು ಫಿಟ್ ಆಗಿದ್ದರೂ ಸ್ಥಾನ ಪಡೆದುಕೊಳ್ಳುವಲ್ಲಿ ವಿಫಲರಾಗಿದ್ದರು. ಬ್ಯಾಟಿಂಗ್‌ನಲ್ಲಿ ಕಳಪೆ ಫಾರ್ಮ್ ಮುಂದುವರಿಸಿದ್ದರೂ ಕೆ.ಎಲ್. ರಾಹುಲ್ ಅವರಿಗೆ ಸ್ಥಾನ ನೀಡಲಾಗಿತ್ತು.
Advertisement
Advertisement
ಪ್ರಸ್ತುತ ಐಪಿಎಲ್ ಆವೃತ್ತಿಯಲ್ಲಿ ರಾಜಸ್ಥಾನ್ ರಾಯಲ್ಸ್ ತಂಡವನ್ನು ಯಶಸ್ವಿಯಾಗಿ ಮುನ್ನಡೆಸುತ್ತಿರುವ ಸಂಜು ಸ್ಯಾಮ್ಸನ್ ತಂಡ ಟ್ರೋಫಿ ಗೆದ್ದರೆ ಮತ್ತೆ ಟೀಂ ಇಂಡಿಯಾದಲ್ಲಿ ಸ್ಥಾನ ಭದ್ರಪಡಿಸಿಕೊಳ್ಳುವ ಸಾಧ್ಯತೆಗಳಿವೆ ಎಂಬ ಮಾತುಗಳು ಕೇಳಿಬಂದಿದೆ. ಇದನ್ನೂ ಓದಿ: ಕೊಹ್ಲಿ ಮತ್ತೆ ನಾಯಕನಾಗಲು ಇದೇ ಕಾರಣ – ನೋವಿನಲ್ಲೂ RCB ತಂಡಕ್ಕಾಗಿ ಅಬ್ಬರಿಸಿದ ಡುಪ್ಲೆಸಿಸ್
ಕಳೆದ ಸೀಜನ್ ನಲ್ಲಿ 146 ಸ್ಟ್ರೈಕ್‌ರೇಟ್‌ನಲ್ಲಿದ್ದ ಸಂಜು 17 ಪಂದ್ಯಗಳಲ್ಲಿ 458 ರನ್ ಗಳಿಸಿದ್ದರು. ಈ ಬಾರಿ 6 ಪಂದ್ಯಗಳಲ್ಲಿ 160 ಸ್ಟ್ರೈಕ್‌ರೇಟ್ ಕಾಯ್ದುಕೊಂಡಿದ್ದು, 2 ಅರ್ಧಶತಕ ಸೇರಿದಂತೆ 159 ರನ್ ಗಳಿಸಿದ್ದಾರೆ. ಈ ಸೀಜನ್‌ನಲ್ಲಿ ಅವರು ಉತ್ತಮ ಪ್ರದರ್ಶನ ನೀಡಿದಲ್ಲಿ ಮತ್ತೆ ಟೀಂ ಇಂಡಿಯಾದಲ್ಲಿ ಸ್ಥಾನ ಖಚಿತಪಡಿಸಿಕೊಳ್ಳುವ ಸಾಧ್ಯತೆಯಿದೆ ಎನ್ನಲಾಗಿದೆ.
ಈ ಕುರಿತು ಪಾಡ್‌ಕಾಸ್ಟ್ ಸಂದರ್ಶನದಲ್ಲಿ ಟೀಂ ಇಂಡಿಯಾ ಆಯ್ಕೆಗಾರರ ಸಮಿತಿಯ ಮಾಜಿ ಸದಸ್ಯ ಸರನ್‌ದೀಪ್ ಮಾತನಾಡಿ, ಐಪಿಎಲ್ ಪ್ರಶಸ್ತಿಗೂ ಟೀಂ ಇಂಡಿಯಾದಲ್ಲಿ ಸ್ಥಿರ ಅವಕಾಶ ಪಡೆಯುವುದಕ್ಕೂ ಯಾವುದೇ ಸಂಬಂಧವಿಲ್ಲ ಎಂದಿದ್ದಾರೆ.
ನಾವು ಆಯ್ಕೆಗಾರರಾಗಿದ್ದಾಗ ಕೇರಳ ಮೂಲದ ಸಂಜು ಸ್ಯಾಮ್ಸನ್‌ಗೆ ಅಂತಾರಾಷ್ಟ್ರೀಯ ಟಿ20 ಪಂದ್ಯಗಳಲ್ಲಿ ಉತ್ತಮ ಅವಕಾಶ ಸಿಕ್ಕಿತ್ತು. ಆದ್ರೆ ಈ ಸೀಜನ್‌ನಲ್ಲಿ ಸಂಜು ಸ್ಯಾಮ್ಸನ್ ಪ್ರದರ್ಶನ ಉತ್ತಮವಾಗಿದ್ದರೂ ಪ್ರತಿಸ್ಪರ್ಧಿ ತಂಡಗಳಲ್ಲಿರುವ ವಿಕೆಟ್ ಕೀಪರ್‌ಗಳು ಉತ್ತಮ ಪ್ರದರ್ಶನವನ್ನೇ ನೀಡಿದ್ದಾರೆ. ಹಾಗಾಗಿ ನೀವು ಐಪಿಎಲ್ ಸೀಜನ್‌ನಲ್ಲಿ 700-800 ರನ್ ಗಳಿಸಿದರೆ, ಖಂಡಿತವಾಗಿಯೂ ಟೀಂ ಇಂಡಿಯಾದಲ್ಲಿ ಸ್ಥಾನ ಭದ್ರಪಡಿಸಿಕೊಳ್ಳುತ್ತೀರಿ ಎಂದು ಹೇಳಿದ್ದಾರೆ.