ನವದೆಹಲಿ: ಭಯೋತ್ಪಾದಕ ಸಂಘಟನೆಗಳೊಂದಿಗಿನ ತಮ್ಮ ದೇಶದ ಸಂಬಂಧವನ್ನು ಪಾಕಿಸ್ತಾನದ ಮಾಜಿ ವಿದೇಶಾಂಗ ಸಚಿವ ಮತ್ತು ಪಾಕಿಸ್ತಾನ್ ಪೀಪಲ್ಸ್ ಪಾರ್ಟಿ(ಪಿಪಿಪಿ) ಅಧ್ಯಕ್ಷ ಬಿಲಾವಲ್ ಭುಟ್ಟೋ ಜರ್ದಾರಿ (Bilawal Bhutto Zardari) ಅವರು ಬಹಿರಂಗವಾಗಿ ಒಪ್ಪಿಕೊಂಡಿದ್ದಾರೆ.
ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿ (Pahalgam Terror Attack) ಬೆನ್ನಲ್ಲೇ ಸ್ಕೈ ನ್ಯೂಸ್‌ಗೆ ನೀಡಿದ ಸಂದರ್ಶನವೊಂದರಲ್ಲಿ ಮಾತನಾಡಿದ ಬಿಲಾವಲ್ ಭುಟ್ಟೋ, ಪಾಕಿಸ್ತಾನದ (Pakistan) ಇತಿಹಾಸದ ಬಗ್ಗೆ ಹೇಳುವುದಾದರೆ ಪಾಕಿಸ್ತಾನಕ್ಕೆ ಭಯೋತ್ಪಾದಕ ಸಂಘಟನೆಗಳೊಂದಿಗೆ ಸಂಪರ್ಕವಿದೆ ಎಂಬುದು ರಹಸ್ಯವೇನಲ್ಲ ಅದು ಇತಿಹಾಸವಾಗಿದೆ. ಆದರೆ ಇಂದು ನಾವು ಅದರಲ್ಲಿ ಭಾಗಿಯಾಗಿಲ್ಲ. ಇದು ನಮ್ಮ ಇತಿಹಾಸದ ದುರದೃಷ್ಟಕರ ಭಾಗವಾಗಿದೆ ಎಂಬುದು ನಿಜ ಎಂದು ಹೇಳಿದ್ದಾರೆ. ಇದನ್ನೂ ಓದಿ: ಭಾರತದ ಮೊದಲ ಟ್ರಾನ್ಸ್‌ಶಿಪ್‌ಮೆಂಟ್ ಹಬ್‌ಗೆ ಪ್ರಧಾನಿ ಮೋದಿ ಚಾಲನೆ
ಇತ್ತೀಚೆಗೆ ಪಾಕಿಸ್ತಾನದ ರಕ್ಷಣಾ ಸಚಿವ ಖ್ವಾಜಾ ಆಸಿಫ್ ಅವರು ದೇಶವು ಭಯೋತ್ಪಾದಕ ಗುಂಪುಗಳಿಗೆ ಬೆಂಬಲ ಮತ್ತು ಧನಸಹಾಯ ನೀಡಿದೆ ಎಂದು ಒಪ್ಪಿಕೊಂಡಿದ್ದರು. ಅಮೆರಿಕಕ್ಕಾಗಿ ನಾವು ಕೊಳಕು ಕೆಲಸ ಮಾಡಿದ್ದೇವೆ ಎಂದು ಹೇಳಿದ್ದರು. ಈ ಹೇಳಿಕೆಯನ್ನು ಬಿಲಾವಲ್ ಭುಟ್ಟೋ ಜರ್ದಾರಿ ಹೇಳಿಕೆ ಪುಷ್ಠಿಕರಿಸಿದೆ. ಇದನ್ನೂ ಓದಿ: ರಕ್ಷಣೆಗೆ ಅಮೆರಿಕ, ಚೀನಾಗೆ ಪಾಕ್ ಮೊರೆ – ಪ್ರತೀಕಾರ ಕಟ್ಟಿಟ್ಟಬುತ್ತಿ: ಭಾರತ ಗುಡುಗು
ಭಯೋತ್ಪಾದನೆಗೆ ಬೆಂಬಲ ನೀಡಿದಕ್ಕೆ ಪಾಕಿಸ್ತಾನ ಸಾಕಷ್ಟು ಅನುಭವಿಸಿದೆ. ನಾವು ಉಗ್ರವಾದದ ಹಲವು ಅಲೆಗಳನ್ನು ಎದುರಿಸಿದ್ದೇವೆ. ನಾವು ಅನುಭವಿಸಿದ ಪರಿಣಾಮವಾಗಿ ನಾವು ಸಾಕಷ್ಟು ಪಾಠಗಳನ್ನು ಸಹ ಕಲಿತಿದ್ದೇವೆ. ಈ ಸಮಸ್ಯೆಯನ್ನು ಪರಿಹರಿಸಲು ನಾವು ಆಂತರಿಕ ಸುಧಾರಣೆಗಳ ಮೂಲಕ ಹೋಗಿದ್ದೇವೆ. ಇದು ಇತಿಹಾಸದ ದುರದೃಷ್ಟಕರ ಭಾಗವಾಗಿದೆ ಎಂಬುದು ನಿಜ ಎಂದು ಭುಟ್ಟೋ ಹೇಳಿದ್ದಾರೆ.