ಮುಂಬೈ: ಶಿವ ಸೇನಾ ಮುಖ್ಯಸ್ಥ ಉದ್ಧವ್ ಠಾಕ್ರೆ ಅವರು ಇಂದು “ನಮಗೆ ದೇಶಭಕ್ತಿ ಬಗ್ಗೆ ಬೋಧನೆ ಮಾಡಬೇಡಿ” ಎಂದು ಬಿಜೆಯ ವಿರುದ್ಧ ವಾಗ್ದಾಳಿಯನ್ನು ಮಾಡಿದ್ದಾರೆ.
ಮುಂಬೈಯ ಶಿವಾಜಿ ಪಾರ್ಕ್‍ನಲ್ಲಿ ಆಯೋಜಿಸಿದ್ದ ಪಕ್ಷದ ವಾರ್ಷಿಕ ದಸರಾ ಕಾರ್ಯಕ್ರಮದಲ್ಲಿ ಮಾತನಾಡಿದ ಠಾಕ್ರೆ, ನಮಗೆ ರಾಷ್ಟ್ರಪ್ರೇಮದ ಬಗ್ಗೆ ಕಲಿಸಬೇಡಿ, ದೇಶಭಕ್ತಿಯನ್ನು ನಿಮ್ಮಿಂದ ಕಲಿಯಬೇಕಾದ ದಿನ ಇನ್ನೂ ಬಂದಿಲ್ಲ ಎಂದು ಹೇಳಿದರು.
Advertisement
ಪ್ರಸ್ತುತ ಸಮಾಜದಲ್ಲಿ ಭ್ರಷ್ಟಾಚಾರವನ್ನು ಬೆಂಬಲಿಸುವವರು ದೇಶಭಕ್ತರಾಗಿದ್ದಾರೆ. ಭ್ರಷ್ಟಾಚಾರವನ್ನು ವಿರೋಧಿಸುವವರು ದೇಶದ್ರೋಹಿಗಳಾಗಿದ್ದಾರೆ. ಇಂತಹ ವಾತಾವರಣ ಸೃಷ್ಟಿಯಾಗಿದೆ ಎಂದು ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದರು. ಇದೇ ಸಂದರ್ಭದಲ್ಲಿ ಕೇಂದ್ರ ಸರ್ಕಾರದ ನೋಟು ರದ್ಧತಿ ನಿರ್ಧಾರವನ್ನು ಟೀಕಿಸಿದರು.
Advertisement
ಇತ್ತೀಚಿಗೆ ಹಣದುಬ್ಬರದ ವಿರುದ್ಧ ಶಿವ ಸೇನಾ ಕಾರ್ಯಕರ್ತರು ಪ್ರತಿಭಟನೆ ಮಾಡುತ್ತಿದ್ದ ಸಂದರ್ಭದಲ್ಲಿ ಪ್ರಧಾನಿ ಮೋದಿ ಅವರ ಮೇಲೆ ವೈಯಕ್ತಿಕ ದಾಳಿಯನ್ನು ಮಾಡಲು ಯೋಚಿಸಿದರು. ಆದರೆ ಅವರು ದಾಳಿಯನ್ನು ಪ್ರಾರಂಭಿಸದಂತೆ ಕಾರ್ಯಕರ್ತರಲ್ಲಿ ಠಾಕ್ರೆ ಅವರು ಮನವಿ ಮಾಡಿಕೊಂಡಿದ್ದರು.
Advertisement
ಇದೇ ಸಂದರ್ಭದಲ್ಲಿ ಬಿಜೆಪಿ ಪಕ್ಷವು ಜಮ್ಮು ಮತ್ತು ಕಾಶ್ಮೀರದಲ್ಲಿ ಪಿಡಿಪಿ ಪಕ್ಷದೊಂದಿಗೆ ಮಾಡಿಕೊಂಡಿರುವ ಸಮ್ಮಿಶ್ರ ಸರ್ಕಾರದ ಹಿನ್ನೆಲೆ ಸಿದ್ಧಾಂತ ಕುರಿತು ಹಾಗೂ ಜಮ್ಮು ಕಾಶ್ಮೀರದ ವಿಶೇಷ ಸ್ಥಾನಮಾನ ಪ್ರಸ್ತುತೆ ಕುರಿತು ಪ್ರಶ್ನಿಸಿದ್ದಾರೆ.
Advertisement
`ಹಿಂದುತ್ವ’ ಎಂದ ಶಬ್ಧವನ್ನು ನಿಷೇಧಿಸಿದಾಗ ನಾವು ಹಿಂದುತ್ವಕ್ಕಾಗಿ ಬಿಜೆಪಿಯೊಂದಿಗೆ ಮೈತ್ರಿ ಹೊಂದಿದ್ದೇವೆ. ಆದರೆ ಬಿಜೆಪಿ ನಾಯಕರು ನಾವು ಅವರಿಗೆ ಯಾವುದೇ ರೀತಿ ಉಪಯೋಗವಿಲ್ಲ ಎಂದು ಭಾವಿಸಿದ್ದಾರೆ ಎಂದು ಠಾಕ್ರೆ ಹೇಳಿದರು.
ಇತ್ತೀಚೆಗೆ ಪ್ರಧಾನಿ ಮೋದಿ ಅವರು ಬುಲೆಟ್ ರೈಲು ಯೋಜನೆಗೆ ಚಾಲನೆ ನೀಡಿದ ಸಂದರ್ಭದಲ್ಲೂ ಶಿವಸೇನೆ ತೀವ್ರ ವಿರೋಧವನ್ನು ವ್ಯಕ್ತಪಡಿಸಿತ್ತು. ಯಾರು ಬುಲೆಟ್ ರೈಲನ್ನು ಬಯಸುತ್ತಾರೆ? ಮೊದಲು ಇರುವ ರೈಲುಗಳಿಗೆ ಮೂಲ ಸೌಕರ್ಯವನ್ನು ಸುಧಾರಿಸಿ ಎಂದು ವ್ಯಂಗ್ಯ ಮಾಡಿದರು.
ಸರ್ಕಾರ ಜಿಎಸ್‍ಟಿ ಏಕರೂಪದ ತೆರಿಗೆಯನ್ನು ಹೊಂದಿದೆ ಎಂದು ಹೇಳುತ್ತದೆ. ಏಕರೂಪತೆ ಎಲ್ಲಿದೆ? ಪಾಕಿಸ್ತಾನವೂ ಕೂಡ ನಮಗಿಂತ ಹೆಚ್ಚಿನ ಅಗ್ಗದ ದರದಲ್ಲಿ ಪೆಟ್ರೋಲ್ ಕೊಡುತ್ತಿದೆ ಎಂದು ಕೇಂದ್ರದ ವಿರುದ್ಧ ಕಿಡಿಕಾರಿದರು.