ಬಾಲಿವುಡ್ (Bollywood) ಖ್ಯಾತ ನಟಿ ವಿದ್ಯಾ ಬಾಲನ್ (Vidya Balan) ಪದೇ ಪದೇ ಬಾಡಿ ಶೇಮಿಂಗ್ ಗೆ (Body shaming) ಒಳಗಾಗುತ್ತಿದ್ದಾರಂತೆ. ಹಾಗಾಗಿ ನನ್ನ ದೇಹದ ಬಗ್ಗೆ ಯಾರಾದರೂ ಮಾತನಾಡಿದರೆ ಬೇಸರವಾಗುತ್ತದೆ ಎಂದಿದ್ದಾರೆ. ಮನುಷ್ಯರು ದಪ್ಪಗಾಗುವುದು ಅಥವಾ ತೆಳ್ಳಗಾಗುವುದು ಒಂದೊಂದು ಸಾರಿ ಅವರ ಆಯ್ಕೆ ಆಗಿರುವುದಿಲ್ಲ. ನಾನಾ ಕಾರಣಗಳಿಂದಾಗಿ ಹಾಗೆ ಆಗುತ್ತದೆ. ಅದನ್ನೇ ಇಟ್ಟುಕೊಂಡು ಯಾರಿಗೂ ನೋವು ಮಾಡಬಾರದು ಎಂದಿದ್ದಾರೆ.
ಇತ್ತೀಚೆಗಷ್ಟೇ ತಮಗಾದ ನೋವಿನ ಘಟನೆಯನ್ನೂ ಹಂಚಿಕೊಂಡಿರುವ ವಿದ್ಯಾ ಬಾಲನ್, ‘ನಾನು ಮಸಾಜ್ ಪಾರ್ಲರ್ ವೊಂದಕ್ಕೆ ಹೋಗಿದ್ದೆ. ಅಲ್ಲಿದ್ದವರು ನನ್ನನ್ನು ನೋಡಿ, ಏನ್ ಮೇಡಂ ಮತ್ತೆ ದಪ್ಪಾದ್ರಾ ಅಂದ್ರು. ಅವರ ಮಾತು ಕೇಳಿ ನನಗೆ ಸಾಕಷ್ಟು ಬೇಸರವಾಯಿತು. ನಾನು ಹೋಗಿದ್ದು ಮಸಾಜ್ ಪಾರ್ಲರ್ ಗೆ, ಅವರಿಂದ ಈ ಮಾತನ್ನು ಕೇಳಿಸಿಕೊಳ್ಳುವುದಕ್ಕೆ ಅಲ್ಲ’ ಎಂದಿದ್ದಾರೆ. ಇದನ್ನೂ ಓದಿ:ಮಲ್ಲಿಕಾ ಸಿಂಗ್ ಪಾತ್ರ ಪರಿಚಯಿಸಿದ ನಿರ್ದೇಶಕ ಸಿಂಪಲ್ ಸುನಿ
ಬಾಡಿ ಶೇಮಿಂಗ್ ಕುರಿತಾಗಿ ಈ ಹಿಂದೆ ವಿದ್ಯಾ ಬಾಲನ್ ಸಾಕಷ್ಟು ಬಾರಿ ಮಾತನಾಡಿದ್ದಾರೆ. ಅದರಿಂದಾಗಿ ಆಗುವ ಮಾನಸಿಕ ಕಿರಿಕಿರಿ ಕುರಿತಾಗಿಯೂ ಹೇಳಿಕೊಂಡಿದ್ದಾರೆ. ಆದರೆ, ಈವರೆಗೂ ಅದನ್ನು ತಡೆಯುವುದಕ್ಕೆ ಸಾಧ್ಯವಾಗಿಲ್ಲ ಎನ್ನುವ ಬೇಸರ ಅವರದ್ದು. ಹಾಗಾಗಿ ಪದೇ ಪದೇ ತಮಗಾದ ನೋವಿನ ಕ್ಷಣಗಳನ್ನು ಅವರು ಹಂಚಿಕೊಳ್ಳುತ್ತಲೇ ಇರುತ್ತಾರೆ.
ಹೊಸ ಹೊಸ ಸಿನಿಮಾ ಮತ್ತು ಪಾತ್ರಗಳ ಮೂಲಕ ವಿದ್ಯಾ ಬಾಲನ್ ವಿಶೇಷ ನಟಿ ಅನಿಸಿಕೊಂಡಿದ್ದಾರೆ. ನಾಯಕಿ ಪ್ರಧಾನ ಪಾತ್ರಗಳಲ್ಲೇ ಸಾಕಷ್ಟು ಅವರು ಮಿಂಚಿದ್ದಾರೆ. ಇಂತಹ ಪಾತ್ರಗಳು ತಮ್ಮನ್ನು ಹುಡುಕಿಕೊಂಡು ಬರುತ್ತಿರುವುದಕ್ಕೆ ಅವರಿಗೆ ಹೆಮ್ಮೆ ಇದೆಯಂತೆ.
Web Stories