ಧಾರವಾಡ: ಗಣೇಶ ಕೂರಿಸಲು ಯಾರು ಕೂಡ ಅನುಮತಿ ತೆಗೆದುಕೊಳ್ಳಲು ಹೋಗಬೇಡಿ. ಮೈಕ್ ಹಾಕಲು ನಾನು ಸಹ ಅನುಮತಿ ಮೊರೆ ಹೋಗುವುದಿಲ್ಲ ಎಂದು ಪೊಲೀಸರು ಹಾಗೂ ಸರ್ಕಾರಕ್ಕೆ ಶ್ರೀರಾಮ ಸೇನೆ ಸಂಘಟನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಸವಾಲು ಹಾಕಿದ್ದಾರೆ.
ಗಣೇಶೋತ್ಸವ ಕುರಿತು ಮಾತನಾಡಿದ ಅವರು, ಗಣೇಶೋತ್ಸವ ಧಾರ್ಮಿಕ ಶಾಸ್ತ್ರೋಕ್ತ ವಿಧಿ ವಿಧಾನಗಳ ಪ್ರಕಾರ ನಡೆದುಕೊಂಡು ಬಂದ ಸಂಪ್ರದಾಯ. ಜಾತಿ, ಧರ್ಮ ಬಿಟ್ಟು ಎಲ್ಲರೂ ಆಚರಿಸಿಕೊಂಡು ಬಂದಿದ್ದಾರೆ. ಗಣೇಶೋತ್ಸವಕ್ಕೆ ಕರ್ನಾಟಕದಲ್ಲಿ ಸರ್ಕಾರದಿಂದ ಕಿರಿಕಿರಿಯಾಗುತ್ತಿದೆ. ಯಾಕಾದ್ರು ಗಣಪತಿ ಪ್ರತಿಷ್ಠಾಪನೆ ಮಾಡಬೇಕು ಎನ್ನುವಂತೆ ಆಗಿದೆ. ಸರ್ಕಾರ ನಿರ್ಬಂಧ ಹಾಕಬಾರದು. ಗಣೇಶೋತ್ಸವಕ್ಕೆ ಮುಕ್ತ ಅವಕಾಶ ಮಾಡಿಕೊಡಬೇಕು ಎಂದು ಒತ್ತಾಯಿಸಿದ್ದಾರೆ. ಇದನ್ನೂ ಓದಿ: ಹಮಾರೆ ಪಾರ್ಟಿ ಮೆ ಕ್ಯಾ ಚಲ್ ರಹಾಹೈ ಬೊಮ್ಮಾಯಿ ಜೀ?- CMಗೆ ಅಮಿತ್ ಶಾ ಫುಲ್ ಕ್ಲಾಸ್
Advertisement
Advertisement
ಪರಿಸರ ಹಾಗೂ ಶಬ್ದ ಮಾಲಿನ್ಯದ ಬಗ್ಗೆ ವಿಚಾರ ಮಾಡೋಣ. ನಮ್ಮ ಉತ್ಸಾಹಕ್ಕೆ ಭಂಗ ತರುವಂತಹ ಕಾರ್ಯವನ್ನು ವಿರೋಧಿಸುತ್ತೇವೆ. ಎಷ್ಟೊಂದು ಕಡೆ ಅನುಮತಿ ಪಡೆಯಬೇಕು? ವಿದ್ಯುತ್, ಪೆಂಡಾಲ್, ಪೊಲೀಸ್, ಪಾಲಿಕೆ ಹಾಗೂ ಅಗ್ನಿಶಾಮಕ ದಳದ ಅನುಮತಿ ಪಡೆಯಬೇಕು. ಇದಕ್ಕೆಲ್ಲ ಓಡಾಡಬೇಕಾಗಿದೆ. ಇದರ ಮಧ್ಯೆ ಪೊಲೀಸರ ಕಿರಿಕಿರಿ ಹೆಚ್ಚಾಗಿದೆ. ನಮಗೆ ಸ್ವಾತಂತ್ರ್ಯ ಇಲ್ಲಾ? ಈ ರೀತಿ ಕಟ್ಟಪ್ಪಣೆ ಹಾಕಿದರೆ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.
Advertisement
ಈಗಲೇ ಡಿಸಿಗಳ ಸಭೆ ಕರೆದು ಅನುಮತಿ ಕೊಡಿ. ಒಂದೇ ಕಡೆ ಅನುಮತಿ ಪಡೆಯವಂತೆ ಮಾಡಿ. ನಮ್ಮನ್ನು ಸುತ್ತಿಸಿ ಸತಾಯಿಸಬೇಡಿ. ಕಾಂಗ್ರೆಸ್‌ನವರು ಇದ್ದಾಗ ಇದನ್ನೇ ಮಾಡಿದ್ರು. ಈಗ ನೀವು ಅದನ್ನೇ ಮಾಡುತಿದ್ದೀರಿ. ನಿಮ್ಮ ಹರಕು ಬಾಯಿ ಮಾತು ನಮಗೆ ಬೇಡ. ಡಿಜೆ ಹಾಕುವುದು ಬೇಡ ಅಂತಾ ನಾನು ಕೂಡಾ ವಿನಂತಿ ಮಾಡುತ್ತೇನೆ. ನಮಗೆ ಕಿರಿಕಿರಿ ಕೊಟ್ಟರೆ ದೊಡ್ಡ ಆಂದೋಲನ ಮಾಡುತ್ತೇವೆ ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ. ಇದನ್ನೂ ಓದಿ: ಮಡಿಕೇರಿಯಲ್ಲಿ ಮಧ್ಯರಾತ್ರಿ ಜಲಸ್ಫೋಟ – ಭಾರೀ ಶಬ್ದದೊಂದಿಗೆ ಸಮುದ್ರದಂತೆ ಉಕ್ಕಿ ಬಂದ ಪ್ರವಾಹ
Advertisement
ಹಿಂದೂ ವ್ಯಾಪಾರಿಗಳ ಕಡೆ ಮಾತ್ರ ವ್ಯಾಪಾರ ಮಾಡಿ. ಹೂವು ,ಹಣ್ಣು ಎಲ್ಲ ಹಿಂದೂಗಳ ಕಡೆ ತೆಗೆದುಕೊಳ್ಳಿ ಎಂದು ಸಲಹೆ ನೀಡಿದ್ದಾರಲ್ಲದೇ, ಹಿಂದಿನ ಧಾರವಾಡ ಡಿಸಿ ಪಿಒಪಿ ಗಣೇಶ ರದ್ದು ಮಾಡಿದ್ದರು. ಅದನ್ನ ಈ ಡಿಸಿ ಕೂಡಾ ರದ್ದು ಮಾಡಬೇಕು. ಎಲ್ಲಿಯಾದರೂ ಆ ಮಾದರಿ ಗಣೇಶ ಮೂರ್ತಿ ಮಾರಾಟ ಮಾಡಿದರೆ ನಾವೇ ದಾಳಿ ಮಾಡುತ್ತೇವೆ. ಜನರು ಮೋಸ ಹೋಗಬೇಡಿ, ಪಿಒಪಿ ಗಣಪತಿ ನಿಮಗೆ ಶಾಪ ಕೊಡ್ತಾನೆ. ಮಣ್ಣಿನ ಗಣಪತಿ ಕೂರಿಸುವಂತೆ ಕೈಮುಗಿದು ಕೇಳಿಕೊಳ್ಳುತ್ತೇನೆ ಎಂದು ಮನವಿ ಮಾಡಿದ್ದಾರೆ.