ಬೆಂಗಳೂರು: ಯಾರೇ ಆಗಲಿ ಕಷ್ಟ ಪಟ್ಟು ಪಕ್ಷ ಕಟ್ಟಿದ ಡಿ.ಕೆ ಶಿವಕುಮಾರ್(D K Shivakumar) ಅವರಿಗೆ ನೋವಾಗುವಂತೆ ಮಾತನಾಡಬಾರದು ಎಂದು ಕುಣಿಗಲ್(Kunigal) ಶಾಸಕ ರಂಗನಾಥ್(Ranganath) ಹೇಳಿದರು.
ಬೆಂಗಳೂರಿನಲ್ಲಿ ರಾಜಣ್ಣ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿದ ಅವರು, ಒಬ್ಬ ಕಾರ್ಯಕರ್ತನಾಗಿ ಪಕ್ಷ ಕಟ್ಟಿದವರಿಗೆ ನೋವಾಗುವ ರೀತಿ ಮಾತಾಡಬಾರದು. ಡಿಕೆಶಿ ಅವರು ಪಕ್ಷಕ್ಕಾಗಿ ಹಗಲು ರಾತ್ರಿ ದುಡಿದಿದ್ದಾರೆ. ಅವರಿಗೆ ನೋವಾಗುವ ರೀತಿ ಮಾತನಾಡುವುದು ತಪ್ಪು ಎಂದರು. ಇದನ್ನೂ ಓದಿ : ಪಿಜಿ ಮೆಡಿಕಲ್: ಸ್ಟ್ರೇ ವೇಕೆನ್ಸಿ ಸುತ್ತಿಗೆ ಅರ್ಜಿ ಸಲ್ಲಿಸಲು ಫೆ.19ರವರೆಗೆ ಅವಕಾಶ: ಕೆಇಎ
Advertisement
Advertisement
ಮೊದಲು ಸರ್ಕಾರ ಬಂದ್ರೆ ಸಾಕಪ್ಪ ಅಂತ ನಮಗೆ ಇತ್ತು. ಡಿ.ಕೆ ಶಿವಕುಮಾರ್ ಅವರ ಅಧ್ಯಕ್ಷತೆ ಮತ್ತು ಸಿದ್ದರಾಮಯ್ಯ ಅವರ ಮುಂದಾಳತ್ವದಲ್ಲಿ ಪಕ್ಷ ಅಧಿಕಾರಕ್ಕೆ ಬಂದಿದೆ. ಪಕ್ಷ ಹಾಗೂ ಸರ್ಕಾರ ಎರಡು ಚೆನ್ನಾಗಿ ನಡೆಯುತ್ತಿದೆ. ಇಂತಹ ಸಂದರ್ಭಗಳಲ್ಲಿ ಈ ಹೇಳಿಕೆ ತರವಲ್ಲ. ದಯವಿಟ್ಟು ಕಾರ್ಯಕರ್ತರಿಗೆ ನೋವಾಗುವ ಹೇಳಿಕೆ ಕೊಡಬಾರದು. ಎಷ್ಟೇ ದೊಡ್ಡವರಾದ್ರೂ ಪಕ್ಷಕ್ಕೆ ಹಾನಿ ಮಾಡಬಾರದು ಎಂದು ಡಿಕೆ ಶಿವಕುಮಾರ್ ಅವರು ಹೇಳಿಕೊಟ್ಟಿದ್ದಾರೆ. ರಾಜಣ್ಣ ಹೇಳಿಕೆಯನ್ನು ಎಐಸಿಸಿ ಅವರು ನೋಡ್ತಾರೆ ಎಂದು ಹೇಳಿದರು. ಇದನ್ನೂ ಓದಿ : ಅಟಲ್‌ಜೀ ಜನ್ಮ ಶತಾಬ್ಧಿ – ವಾಜಪೇಯಿ ಜತೆ ಕೆಲಸ ಮಾಡಿದ ಸಮಕಾಲೀನ ಕಾರ್ಯಕರ್ತರಿಗೆ ಬಿಜೆಪಿ ಗೌರವ