ಉಕ್ರೇನ್ ಅಧ್ಯಕನ ಹೇಳಿಕೆ ಪ್ರಸಾರ ಮಾಡಬೇಡಿ- ಎಚ್ಚರಿಕೆ ಕೊಟ್ಟ ರಷ್ಯಾ

Public TV
1 Min Read
vladimir putin russia ukraine e1645983295685

ಮಾಸ್ಕೋ: ಉಕ್ರೇನ್ ಮೇಲೆ ರಷ್ಯಾ ತನ್ನ ಆಕ್ರಮಣವನ್ನು ಮುಂದುವರಿಸಿದೆ. ಅಧ್ಯಕ್ಷ ವೊಲೊಡಿಮಿರ್ ಝೆಲೆನ್‍ಸ್ಕಿ ಅವರ ಜೊತೆ ನಡೆಸಿದ ಸಂದರ್ಶನವನ್ನು ಪ್ರಕಟಿಸದಂತೆ ರಷ್ಯಾ ಮಾಧ್ಯಮಗಳಿಗೆ ಅಲ್ಲಿನ ಸರ್ಕಾರ ಎಚ್ಚರಿಕೆ ನೀಡಿದೆ.

ರಷ್ಯಾ ಹೇಳಿದ್ದೇನು?: ಉಕ್ರೇನ್ ನಾಯಕನ ಸಂದರ್ಶನ ನಡೆಸಿದ ಮಾಧ್ಯಮ ಸಂಸ್ಥೆಗಳ ಬಗ್ಗೆ ತನಿಖೆ ಆರಂಭಿಸಲಾಗಿದೆ ಎಂದು ರಷ್ಯಾದ ಸಂವಹನ ಕಾವಲುಪಡೆ ತಿಳಿಸಿದೆ. ರಷ್ಯಾದ ಹಲವು ಸಂಸ್ಥೆಗಳು ಝೆಲೆನ್‍ಸ್ಕಿ ಸಂದರ್ಶನ ನಡೆಸಿವೆ. ಈ ಸಂದರ್ಶನಗಳು ಪ್ರಕಟವಾಗದಂತೆ ತಡೆಯುವ ಅಗತ್ಯವಿದೆ ಎಂದು ಕಾವಲುಪಡೆಯು ಪ್ರಕಟಣೆಯಲ್ಲಿ ತಿಳಿಸಿದೆ.

vladimir putin

ಫೆಬ್ರವರಿ 24ರಿಂದ ರಷ್ಯಾ ದಾಳಿಯ ಪರಿಣಾಮ ಉಕ್ರೇನ್‍ನ ಸುಮಾರು 30 ಲಕ್ಷ ಜನರು ತಮ್ಮ ರಾಷ್ಟ್ರ ತೊರೆದು ವಲಸೆ ಹೋಗಿದ್ದು, ಪಶ್ಚಿಮ ರಾಷ್ಟ್ರಗಳ ಬೆಂಬಲ ಕೋರಿದ್ದಾರೆ. ನೂರಾರು ನಾಗರಿಕರು ಸಾವಿಗೀಡಾಗಿದ್ದಾರೆ ಹಾಗೂ ಸಾವಿರಾರು ಮಂದಿ ಗಾಯಗೊಂಡಿದ್ದಾರೆ. ಇದನ್ನೂ ಓದಿ: ರಷ್ಯಾ ಕಂಡರೆ ಪಾಶ್ಚಾತ್ಯ ರಾಷ್ಟ್ರಗಳಿಗೆ ಭಯವೇ?: ಉಕ್ರೇನ್ ಅಧ್ಯಕ್ಷ

Volodymyr Zelenskyy

ನ್ಯಾಟೊ ಹೊಂದಿರುವ ಶೇ 1 ರಷ್ಟು ಯುದ್ಧ ವಿಮಾನಗಳು ಮತ್ತು ಶೇ 1 ರಷ್ಟು ಟ್ಯಾಂಕರ್‌ಗಳು ಉಕ್ರೇನ್‍ಗೆ ಬೇಕಾಗಿವೆ. ನಾವು ಅದಕ್ಕಿಂತ ಹೆಚ್ಚೇನೂ ಕೇಳುತ್ತಿಲ್ಲ. ಯುದ್ಧ ವಿಮಾನಗಳನ್ನು ಹೊಡೆದುರುಳಿಸುವ ಕ್ಷಿಪಣಿಗಳು ಮತ್ತು ಸಣ್ಣ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ರವಾನಿಸುವುದಾಗಿ ಹಲವು ರಾಷ್ಟ್ರಗಳು ಭರವಸೆ ನೀಡಿವೆ. ಆದರೆ ಉಕ್ರೇನ್‍ಗೆ ಯುದ್ಧ ಟ್ಯಾಂಕರ್‌ಗಳು , ವಿಮಾನಗಳು ಮತ್ತು ಜಲಾಂತರ್ಗಾಮಿಗಳ ಅವಶ್ಯಕತೆ ಇದೆ ಶಸ್ತ್ರಾಸ್ತ್ರಗಳನ್ನು ನೀಡುವಂತೆ ಪಾಶ್ಚಿಮಾತ್ಯ ರಾಷ್ಟ್ರಗಳಿಗೆ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್‍ಸ್ಕಿ ಮನವಿ ಮಾಡಿದ್ದರು.

Share This Article