ಬೆಂಗಳೂರು: ಹಿರಿಯ ಸಾಹಿತಿ ಸಂಶೋಧಕ ಚಿದಾನಂದ ಮೂರ್ತಿ ವಯೋಸಹಜ ಕಾಯಿಲೆಯಿಂದ ಇಂದು ಸಾವನ್ನಪ್ಪಿದ್ದಾರೆ. ಹೀಗಾಗಿ ಅವರ ಅಂತಿಮ ದರ್ಶನಕ್ಕೆ ಬರುವವರಿಗೆ ಹೂವಿನ ಹಾರ ಹಾಕಲು ಅವಕಾಶ ನೀಡಿಲ್ಲ.
ಹೌದು. ಚಿಮೂ ಅಂತಿಮ ದರ್ಶನಕ್ಕೆ ಜನಸಾಗರವೇ ಹರಿದು ಬರುತ್ತಿದೆ. ಬರುತ್ತಿರುವ ಎಲ್ಲರೂ ಹೂವಿನ ಹಾರ ಹಾಕಿ ಅಂತಿಮ ಗೌರವ ನೀಡಲು ಮುಂದಾದರು. ಆದರೆ ಅವರ ಪುತ್ರ ಚಿಮೂ ದೇಹದ ಮೇಲೆ ಹೂವಿನ ಹಾರಹಾಕಲು ಅವಕಾಶ ನೀಡಲಿಲ್ಲ. ಯಾಕೆಂದರೆ ಚಿಮೂ ಕೊನೆಯಾಸೆ ಅದೇ ಆಗಿತ್ತು. ಯಾವುದೇ ಪೂಜೆ ನಡೆಸೋದು, ಹೂವಿನ ಹಾರ ಹಾಕೋದು ಬೇಡ ಎಂದು ಚಿಮೂ ತನ್ನ ಮಗನಲ್ಲಿ ಹೇಳಿದ್ದರಂತೆ. ಹೀಗಾಗಿ ಮಗನೇ ಖುದ್ದು ಬಂದವರಿಗೆ ಮನವಿ ಮಾಡಿಕೊಂಡರು.
Advertisement
Advertisement
ಅಪ್ಪ ಅವರಿಚ್ಛೆಯಂತೆ ಬದುಕಿದ್ರು. ಅದೇ ರೀತಿ ಅಂತಿಮ ಇಚ್ಛೆಯನ್ನು ಈಡೇರಿಸಬೇಕಾಗಿದೆ ಅಂದ್ರು. ಆದರೂ ಸಾಕಷ್ಟು ಜನ ಇನ್ನೂ ಶವದ ಪೆಟ್ಟಿಗೆಯ ಮೇಲೆ ಹೂವಿನ ಹಾರ ಹಾಕಿದರು. ಅದನ್ನು ಪದೇ ಪದೇ ತೆಗೆದು ಅವರ ಕುಟುಂಬಸ್ಥರು ಸ್ವಚ್ಛಗೊಳಿಸುತ್ತಾ ಇದ್ರು. ಅಲ್ಲದೆ ಬದುಕಿದ್ದಾಗ ಸರಳವಾಗಿ, ಕನ್ನಡ ಪ್ರೇಮಿಯಾಗಿ ಬದುಕಿದ ಚಿಮೂ ಜೀವನ ಎಲ್ಲರಿಗೂ ಮಾದರಿ ಅಂತ ಜನ ಅವರ ಅಂತಿಮದರ್ಶನ ಪಡೆದು ಮಾತನಾಡಿಕೊಂಡರು.