ವಾಷಿಂಗ್ಟನ್: ವಿಶ್ವಸಂಸ್ಥೆಯ ಭಾರತೀಯ ರಾಯಭಾರಿ ಟಿಎಸ್ ತಿರುಮೂರ್ತಿ ಶುಕ್ರವಾರ ಬ್ರಿಟನ್‌ನಲ್ಲಿರುವ ನೆದರ್ಲೆಂಡ್ ರಾಯಭಾರಿ ಕೆರೆಲ್ ವ್ಯಾನ್ ಒಸ್ಟೆರೋಮ್ ರೊಂದಿಗೆ ಟ್ವಿಟರ್‌ನಲ್ಲಿ ವಾಗ್ವಾದ ನಡೆಸಿದ್ದಾರೆ.
ಉಕ್ರೇನ್ ಬಗೆಗಿನ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಭಾರತ ಗೈರುಹಾಜರಾಗಬಾರದಿತ್ತು ಎಂದು ಕೆರೆಲ್ ವ್ಯಾನ್ ಒಸ್ಟೆರೋಮ್ ಟೀಕಿಸಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ತಿರುಮೂರ್ತಿ, ನಮಗೆ ನಿಮ್ಮ ಸಲಹೆ ಬೇಡ. ನಮಗೆ ಏನು ಮಾಡಬೇಕೆಂಬುದು ತಿಳಿದಿದೆ ಎಂದು ಟ್ವಿಟ್ಟರ್‌ನಲ್ಲಿ ಟಾಂಗ್ ನೀಡಿದ್ದಾರೆ. ಇದನ್ನೂ ಓದಿ: 2024ರಲ್ಲಿ ಶುಕ್ರಯಾನಕ್ಕೆ ISRO ಸಜ್ಜು- ಇಲ್ಲಿದೆ ಶುಕ್ರಗ್ರಹದ ಸ್ವಾರಸ್ಯಕರ ಸಂಗತಿ
Advertisement
At the UN Security Council meeting on #Ukraine this afternoon, I made the following statement ⤵️ pic.twitter.com/1ZMrEOzADB
— PR/Amb T S Tirumurti (@ambtstirumurti) May 5, 2022
Advertisement
ರಷ್ಯಾ-ಉಕ್ರೇನ್ ಯುದ್ಧದ ಕುರಿತು ಬುಧವಾರ ನಡೆದ ವಿಶ್ವಸಂಸ್ಥೆ ಭದ್ರತಾ ಮಂಡಳಿ ಸಭೆಯಲ್ಲಿ ತಿರುಮೂರ್ತಿ ಹೇಳಿಕೆ ಬಗ್ಗೆ ವಿವರಣೆ ನೀಡಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ಕರೇಲ್ ವ್ಯಾನ್ ಒಸ್ಟೆರೊಮ್ ಸಾಮಾನ್ಯ ಸಭೆಯಲ್ಲಿ ನೀವು ಗೈರಾಗಬಾರದಿತ್ತು. ವಿಶ್ವಸಂಸ್ಥೆಯ ನಿಯಮಗಳನ್ನು ಗೌರವಿಸಬೇಕಿತ್ತು ಎಂದಿದ್ದರು. ಇದನ್ನೂ ಓದಿ: ರಷ್ಯಾದ ಜನರಲ್‌ಗಳನ್ನು ಕೊಲ್ಲಲು ಉಕ್ರೇನ್‌ಗೆ ಅಮೆರಿಕ ಗುಪ್ತಚರ ಸಹಾಯ
Advertisement
Kindly don’t patronize us Ambassador. We know what to do.
— PR/Amb T S Tirumurti (@ambtstirumurti) May 5, 2022
Advertisement
ಈ ವರ್ಷ ಜನವರಿಯಿಂದ, ವಿಶ್ವಸಂಸ್ಥೆಯ ಭದ್ರತಾ ಮಂಡಳಿ, ಸಾಮಾನ್ಯ ಸಭೆ ಹಾಗೂ ಉಕ್ರೇನ್-ರಷ್ಯಾದ ಆಕ್ರಮಣದ ಬಗ್ಗೆ ಮಾನವ ಹಕ್ಕುಗಳ ಮಂಡಳಿಯಲ್ಲಿನ ಕಾರ್ಯವಿಧಾನದ ಮತ ಹಾಗೂ ಕರಡು ನಿರ್ಣಯಗಳಿಂದ ಭಾರತ ದೂರ ಉಳಿದಿತ್ತು. ಈ ಹಿನ್ನೆಲೆಯಲ್ಲಿ ನೆದರ್ಲೆಂಡ್‌ನ ರಾಯಭಾರಿ ಭಾರತವನ್ನು ಟೀಕಿಸಿದ್ದರು.