ಬೆಂಗಳೂರು: ಮಾಂಗಲ್ಯ ಸರದಲ್ಲಿನ ಹವಳವನ್ನ ಒಡೆಯುವ ಕಾರ್ಯಕ್ಕೆ ಮಹಿಳೆಯರು ಯಾರು ಕಿವಿಗೊಡಬೇಡಿ. ಇದನ್ನ ಯಾರೋ ದುರುದ್ದೇಶದಿಂದ ಅಪಪ್ರಚಾರ ಮಾಡ್ತಿದ್ದಾರೆ. ಇದರ ಹಿಂದೆ ಹುನ್ನಾರಗಳಿರಬಹುದು ಎಂದು ಕನ್ನಡ ಸಂಸೃತಿ ಇಲಾಖೆಯ ಸಚಿವೆ ಉಮಾಶ್ರೀ ಹೇಳಿದ್ದಾರೆ.
ಆಷಾಡ ಮಾಸ ದೋಷ ಇದ್ದಿದ್ದೆ ಆಗಿದ್ರೆ, ಹವಳವನ್ನ ತೆಗೆದಿಡಿ, ಆಷಾಡ ಮಾಸ ಮುಗಿದ ಬಳಿಕ ಮತ್ತೆ ಹಾಕಿಕೊಳ್ಳಿ ಅಂತಾ ಹೇಳಬಹುದಿತ್ತು. ಹವಳವನ್ನ ಒಡೆದು ಹಾಕಿ ಅಂತಾ ಸುದ್ದಿ ಹರಿಬಿಡ್ತಿರುವ ಹಿನ್ನೆಲೆ ನೋಡಿದ್ರೆ ಇದನ್ನ ಬೇಕಂತಲೇ ಮಾಡ್ತಿದ್ದಾರೆ ಎಂದು ಸಚಿವೆ ಉಮಾಶ್ರೀ ಶಂಕೆ ವ್ಯಕ್ತಪಡಿಸಿದರು.
ಈಗ ಮುಂದೆ ಯಾರೆಲ್ಲಾ ಮಾಂಗಲ್ಯ ಒಡೆದು ಹಾಕಬೇಕೆಂದಿದ್ದರೋ, ಅವರೆಲ್ಲ ಮಾಂಗಲ್ಯ ಹಾಕಿಕೊಳ್ಳಿ. ಏನೂ ಆಗೋಲ್ಲ. ನಾನು ಈಗಾಗಲೇ ಕೊಪ್ಪಳ, ಬಳ್ಳಾರಿ, ಚಿತ್ರದುರ್ಗದಲ್ಲಿ ಡಿಸಿಗಳ ಜೊತೆ ಮಾತನಾಡಿದ್ದೇನೆ. ಇಂತಹ ಪ್ರಕರಣಗಳು ನಡೆಯದಂತೆ ಎಚ್ಚರಿಕೆ ವಹಿಸಬೇಕಾಗಿದೆ. ಅಧಿಕಾರಿಗಳು ಕಾನುನಾತ್ಮಕವಾಗಿ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದೇನೆ ಎಂದು ಹೇಳಿದ್ರು.