– ಹಿಂದೂ ಸಂಸ್ಕೃತಿಯನ್ನು ಉಳಿಸುವ ಪಕ್ಷ ಬಿಜೆಪಿ ಒಂದೇ
ಬಾಗಲಕೋಟೆ: ಚೌತಿ ಗಣಪತಿ ಪ್ರಸಾದ ಪರೀಕ್ಷೆ ಮಾಡಿ ವಿತರಣೆ ವಿಚಾರಕ್ಕೆ, ಹಿಂದೂ ದೇವರುಗಳಿಗೆ ಅಪಮಾನ ಮಾಡಬೇಡಿ. ಸಿಎಂಗೆ ಯಾಕೆ ಹಿಂದೂಗಳ ಬಗ್ಗೆ ನಿಕೃಷ್ಠ ಭಾವನೆ. ಕಾನೂನಿಗೆ ಅಪಮಾನ ಮಾಡಬೇಡಿ ಎಂದು ಕೆಎಸ್ ಈಶ್ವರಪ್ಪ (K S Eshwarappa), ಸಿಎಂ ಸಿದ್ದರಾಮಯ್ಯ (CM Siddaramaiah)ವಿರುದ್ಧ ಗರಂ ಆಗಿದ್ದಾರೆ.
Advertisement
ಬಾಗಲಕೋಟೆಯಲ್ಲಿ (Bagalkote) ಮಾಧ್ಯಮಗಳ ಜೊತೆ ಮಾತನಾಡಿದ ಅವರು, ರಾಜ್ಯ ಮಾತ್ರವಲ್ಲ ದೇಶದ ತುಂಬೆಲ್ಲ ಗಣಪತಿ ಕೂರಿಸಲಾಗುತ್ತದೆ. ಗಣಪತಿ ಪ್ರಸಾದ ಕೊಡಬೇಕಾದರೆ ಆಹಾರ ಇಲಾಖೆ ಪರೀಕ್ಷೆ ಮಾಡಬೇಕಂತೆ. ಸಿದ್ದರಾಮಯ್ಯ ಹುಟ್ಟೋ ಮುಂಚೆಯಿಂದಲೂ ದೇಶದಲ್ಲಿ ಗಣಪತಿ ಕೂರಿಸುತ್ತಿದ್ದರು. ಕಾಂಗ್ರೆಸ್ ಪಕ್ಷ ಹುಟ್ಟೋಕಿಂತ ಮುಂಚೆ ದೇಶದಲ್ಲಿ ಗಣಪತಿ ಇಡಲಾಗುತ್ತಿದೆ. ಈಗ ಸರ್ಕಾರ ಹೊಸ ವ್ಯವಸ್ಥೆ ಮಾಡಿಕೊಳ್ಳುತ್ತಿದೆ ಎಂದರು. ಇದನ್ನೂ ಓದಿ: ಜಾತ್ರೆಯಲ್ಲಿ ರಥದ ಚಕ್ರಕ್ಕೆ ಸಿಲುಕಿ ಯುವಕ ದುರ್ಮರಣ
Advertisement
ಪ್ರಸಾದ ಪರೀಕ್ಷೆ ಮಾಡಿ ನೀಡುವ ಕಾನೂನು ತಂದಿದ್ದಾರೆ. ಹಿಂದೂ ಧರ್ಮದ ಬಗ್ಗೆ ಇಷ್ಟು ಕೀಳುಮಟ್ಟದ ರಾಜಕಾರಣ ಕಾಂಗ್ರೆಸ್‌ನವರು (Congress) ಯಾಕೆ ಮಾಡುತ್ತಿದ್ದಾರೆ. ನೀವು ಮಸೀದಿ, ಚರ್ಚ್ ಗಳಲ್ಲಿ ತಿನ್ನುವ ಪದಾರ್ಥಗಳ ಪರೀಕ್ಷೆ ಮಾಡಿದ್ದೀರಾ? ಎಂದು ಪ್ರಶ್ನಿಸಿದರು.
Advertisement
ನಮ್ಮ ದೇಶದ ಇತಿಹಾಸದಲ್ಲಿ ಕರ್ನಾಟಕದ (Karnataka) ಈಗಿನ ರಾಜಕಾರಣ ಬಹಳ ಕೀಳುಮಟ್ಟಕ್ಕೆ ಇಳಿದಿದೆ. ಆಡಳಿತ ಪಕ್ಷ ಭ್ರಷ್ಟಾಚಾರ ಮಾಡಿರುವುದಕ್ಕೆ ವಿರೋಧ ಪಕ್ಷ ಆಪಾದನೆ ಮಾಡೋದು ತಪ್ಪಲ್ಲ. ಆದರೆ ವಿರೋಧ ಪಕ್ಷ ಆಪಾದನೆ ಮಾಡಿದ್ದನ್ನು ಆಡಳಿತ ಪಕ್ಷ ತನಿಖೆ ಮಾಡಿಸಿ ಅದರಲ್ಲಿ ತಾವು ತಪ್ಪಿತಸ್ಥರಲ್ಲ ಅಂತ ಹೊರಗೆ ಬರಬೇಕು, ಅದು ಪದ್ಧತಿ. ತಪ್ಪಿತಸ್ಥರಾಗಿದ್ದರೆ ಅವರಿಗೆ ಏನು ಶಿಕ್ಷೆಯಾಗಬೇಕೊ ಅದು ಆಗುತ್ತದೆ. ಆದರೆ ಈಗ ಆಡಳಿತ ಪಕ್ಷ ಬಂದು ಒಂದೂವರೆ ವರ್ಷದ ನಂತರ ಸಿದ್ದರಾಮಯ್ಯ ಬಗ್ಗೆ ಇತರರ ಬಗ್ಗೆ ಆರೋಪವನ್ನು ವಿಪಕ್ಷದವರು ಮಾಡುತ್ತಿದ್ದಾರೆ. ಆಪಾದನೆ ಮಾಡುವ ಈ ಸಂದರ್ಭದಲ್ಲಿ ಒಂದೊಂದು ರೂಪದ ಹೋರಾಟ ನಡೆಯುತ್ತಿವೆ. ಭ್ರಷ್ಟಾಚಾರದ ತನಿಖೆಯ ಈ ಸಂದರ್ಭದಲ್ಲಿ ವೈಯಕ್ತಿಕ ಟೀಕೆ ಎಷ್ಟು ಕೀಳುಮಟ್ಟಕ್ಕೆ ಇಳಿದಿದೆ ಅಂದರೆ ಟಿವಿ ನೋಡುವುದಕ್ಕೆ ಬೇಸರ ಆಗುತ್ತಿದೆ. ಹೊಸದಾಗಿ ರಾಜಕಾರಣಕ್ಕೆ ಬರುವ ರಾಜಕಾರಣಿಗಳು ಮಹಿಳಾ ರಾಜಕಾರಣಿಗಳು ಎಂದರು. ಇದನ್ನೂ ಓದಿ: ಬೆಂಗಳೂರಿನಲ್ಲಿ ಸಂಚಾರ ದಟ್ಟಣೆ – ಟ್ರಾಫಿಕ್ ಸಿಗ್ನಲ್‌ಗಳ ಸಂಖ್ಯೆಯಲ್ಲಿ ಏರಿಕೆ
Advertisement
ಈ ಸ್ಥಿತಿ ನೋಡಿದರೆ ನಾವು ಯಾವುದೇ ಕಾರಣಕ್ಕೂ ರಾಜಕಾರಣಕ್ಕೆ ಬರಬಾರದು ಅಂತ ತೀರ್ಮಾನ ಮಾಡುವ ಸ್ಥಿತಿ ರಾಜಕಾರಣದಲ್ಲಿ ಬೆಳೆಯುತ್ತಿದೆ. ಈ ಕೀಳುಮಟ್ಟದ ವೈಯಕ್ತಿಕ ಟೀಕೆಗಳನ್ನು ಎಂದು ನಾವು ಕಂಡಿರಲಿಲ್ಲ. ನನ್ನ ರಾಜಕೀಯ ಇತಿಹಾಸದಲ್ಲಿ ಕೇಳಿರಲಿಲ್ಲ. ನಾನು ಎಲ್ಲ ರಾಜಕಾರಣಿಗಳಿಗೂ ಮನವಿ ಮಾಡುತ್ತೇನೆ. ಇದುವರೆಗೂ ಆಗಿದ್ದು ಆಯಿತು. ಇನ್ಮುಂದೆ ವೈಯಕ್ತಿಕ ಟೀಕೆ ಬಿಟ್ಟು ರಾಜಕಾರಣ ಮಾಡಿ ಎಂದು ಹೇಳಿದರು.
ಬಹಳ ಜನಕ್ಕೆ ಸಿಎಂ ಖುರ್ಚಿ ಮೇಲೆ ಕಣ್ಣಿದೆ:
ಕಾಂಗ್ರೆಸ್ ಪಕ್ಷದಲ್ಲಿ ಸಿಎಂ ಖುರ್ಚಿ ಮೇಲೆ ಬಹಳಷ್ಟು ಜನರ ಕಣ್ಣಿದೆ. ಆದರೆ ಸಿಎಂ ಖುರ್ಚಿ ಮೇಲೆ ಟವೆಲ್ ಹಾಸ್ತಾ ಇದಾರೆ ಎಂಬ ಪದ ನಾನು ಬಳಸುವುದಿಲ್ಲ. ಆದರೆ ಬಹಳ ಜನಕ್ಕೆ (ಸಿಎಂ) ಅದರ ಮೇಲೆ ಕಣ್ಣಿದೆ. ಒಂದು ಕಡೆ ಮುಖ್ಯಮಂತ್ರಿಗಳನ್ನು ಯಾವುದೇ ಕಾರಣಕ್ಕೂ ಬದಲಾಯಿಸೋದಿಲ್ಲ, ಬೆಂಬಲ ಕೊಡುತ್ತೇವೆ ಅಂತ ಹೇಳುತ್ತಿದ್ದಾರೆ. ಮುಖ್ಯಮಂತ್ರಿ ಖುರ್ಚಿ ಮೇಲೆ ಬೆಂಬಲ ಕೊಡುವವರದ್ದೆ ಹಂಬಲ ಇದೆ. ಹಂಬಲದ ಮುಖಾಂತರ ರಾಜಕಾರಣ ನಡೆಯುತ್ತಿದೆ. ಇದು ಸ್ವಾಭಾವಿಕ. ಈಗ ಏನು ತೀರ್ಪು ಬರುತ್ತದೆ ಎಂದು ಎಲ್ಲರೂ ಕಾಯುತ್ತಿದ್ದಾರೆ ಎಂದರು. ಇದನ್ನೂ ಓದಿ: ರೇಣುಕಾಸ್ವಾಮಿ ಕೊಲೆಯಾಗಿ ಇಂದಿಗೆ 3 ತಿಂಗಳು – ಪ್ರಕರಣ ಭೇದಿಸಿದ ಪೊಲೀಸರಿಗೆ ಹಿರಿಯ ಅಧಿಕಾರಿಗಳ ಮೆಚ್ಚುಗೆ
ಬಹಳ ಜನ ಕಾಂಗ್ರೆಸ್‌ನವರು ಸಿದ್ದರಾಮಯ್ಯ ಸಿಎಂ ಸ್ಥಾನದಲ್ಲಿ ಉಳಿಯಲಿಕ್ಕಿಲ್ಲ ಅಂದುಕೊಂಡಿದ್ದಾರೆ. ಹಾಗಾಗಿ ಸಿದ್ದರಾಮಯ್ಯ ಸಿಎಂ ಆಗಿ ಉಳಿಯುತ್ತಾರೋ ಇಲ್ವೋ ಗೊತ್ತಿಲ್ಲ. ಅಕಸ್ಮಾತ್ ತೀರ್ಪಿನಲ್ಲಿ ಸಿದ್ದರಾಮಯ್ಯನವರದ್ದೇ ತಪ್ಪಿದೆ ಎಂದು ಎಫ್‌ಐಆರ್ ದಾಖಲಾದರೆ ರಾಜೀನಾಮೆ ಕೊಡಬಹುದು, ಕೊಡಬೇಕಾಗಬಹುದು. ಆ ಸಂದರ್ಭದಲ್ಲಿ ಏನಾಗಬಹುದು. ಸಿದ್ದರಾಮಯ್ಯ ಅಪೇಕ್ಷೆ ಪಡುವಂತಹ ವ್ಯಕ್ತಿ ಸಿಎಂ ಆಗ್ತಾರಾ? ಸಿದ್ದರಾಮಯ್ಯ ಇಷ್ಟಪಡುವ ವ್ಯಕ್ತಿ ಸಿಎಂ ಆಗಲು ಬಿಡ್ತಾರಾ? ಕಾಂಗ್ರೆಸ್‌ನ ಡಿಕೆಶಿ, ಎಂಬಿ ಪಾಟಿಲ್ ಉಳಿದಂತೆ ಎಲ್ಲ ಪ್ರಮುಖರು ಅವರಿಗೆ ಅವಕಾಶ ಕೊಡಲಿಲ್ಲ ಅಂದರೆ ಸರ್ಕಾರ ಎಷ್ಟರಮಟ್ಟಿಗೆ ಇರುತ್ತೆ ಇರೋದಿಲ್ಲ, ಅದು ಜಡ್ಜ್ಮೆಂಟ್ ಮೇಲೆ ತೀರ್ಮಾನ ಆಗುತ್ತದೆ ಎಂದು ಹೇಳಿದರು.
ಸಿದ್ದರಾಮಯ್ಯ ಟೆಂಪಲ್ ರನ್ ವಿಚಾರವಾಗಿ ಮಾತನಾಡಿ, ಸಿಎಂ ಸಿದ್ದರಾಮಯ್ಯ ಹಿಂದೆ ಅನೇಕ ದೇವಸ್ಥಾನಗಳಿಗೆ ಹೋಗುತ್ತಿರಲಿಲ್ಲ. ಈಗ ಅನೇಕ ದೇವಸ್ಥಾನಗಳಿಗೆ ಹೋಗುತ್ತಿದ್ದಾರೆ. ನಾನು ಅದನ್ನು ಸ್ವಾಗತ ಮಾಡುತ್ತೇನೆ. ಚಾಮುಂಡಿ ಬೆಟ್ಟಕ್ಕಂತೂ ಮೇಲಿಂದ ಮೇಲೆ ಹೋಗುತ್ತಿದ್ದಾರೆ. ಹಿಂದೂ ಸಂಸ್ಕೃತಿ ಬಗ್ಗೆ ಅವರಿಗೆ ಹೆಚ್ಚಿನ ಗೌರವ ಬಂದಿದೆಯಲ್ಲ. ಅದಕ್ಕೆ ತುಂಬಾ ಸಂತೋಷದಿಂದ ಸ್ವಾಗತ ಮಾಡುತ್ತೇನೆ. ಇಂತಹ ಸಂದರ್ಭದಲ್ಲೇ ಹಿಂದೂ ಸಮಾಜದ ಮೇಲೆ ಆಗುತ್ತಿರುವ ಆಘಾತ ತಡೆದುಕೊಳ್ಳಲಾಗುತ್ತಿಲ್ಲ ಎಂದರು. ಇದನ್ನೂ ಓದಿ: ಮುಂಬೈ ಪೊಲೀಸರ ಹೆಸರಲ್ಲಿ ಚಿತ್ರದುರ್ಗದ ವೈದ್ಯನಿಗೆ ಕೋಟ್ಯಂತರ ರೂಪಾಯಿ ವಂಚನೆ: ಇಬ್ಬರ ಬಂಧನ
ಹಿಜಬ್ ನಿಷೇಧ ಮಾಡಿದ ವಿಚಾರವಾಗಿ ಕುಂದಾಪುರ ಕಾಲೇಜಿನ ಪ್ರಿನ್ಸಿಪಾಲ್, ಹಿಜಾಬ್ ಹಾಕಿಕೊಂಡು ಕಾಲೇಜ್ ಗೇಟ್ ಒಳಗೆ ಬರಬೇಡಿ ಅಂದಿದ್ದರು. ಅವರನ್ನ ಈ ಬಾರಿ ರಾಜ್ಯಪ್ರಶಸ್ತಿಗೆ ಆಯ್ಕೆ ಮಾಡಿದ್ದರು. ಈಗ ಅದನ್ನು ತಡೆ ಹಿಡಿತಾರೆ ಅಂದರೆ ಇದು ಹಿಂದೂ ಧರ್ಮಕ್ಕೂ ಅಪಮಾನ. ಪ್ರಿನ್ಸಿಪಾಲ್‌ಗೂ ಅಪಮಾನ. ಇದು ಮುಸಲ್ಮಾನರಿಗೆ ಸಂತೃಪ್ತಪಡಿಸುವ ವ್ಯವಸ್ಥೆ. ಇದು ಒಳ್ಳೆಯದಲ್ಲ ಸಿದ್ದರಾಮಯ್ಯನವರೇ. ದೇವಸ್ಥಾನಗಳಿಗೆ ಹೋಗಿದಿರಾ. ಹಿಂದೂ ಧರ್ಮದ ಮೇಲೆ ನಿಮಗೆ ಆಸಕ್ತಿ ಇದೆ. ಆ ಪ್ರಿನ್ಸಿಪಾಲ್‌ಗೆ ತಕ್ಷಣ ಪ್ರಶಸ್ತಿ ಕೊಡಿ. ಒಳ್ಳೆ ಪ್ರಿನ್ಸಿಪಾಲ್ ಎಂದು ಘೋಷಣೆ ಮಾಡಿದ್ದನ್ನು ತಡೆ ಹಿಡಿಯಬೇಕಾದರೆ ಕಾನೂನಿಗೆ ಮಾಡಿದ ಅಪಮಾನ. ಹಿಂದೂಗಳಿಗೆ ಮಾಡಿದ ಅಪಮಾನ ಎಂದು ಹರಿಹಾಯ್ದರು. ಇದನ್ನೂ ಓದಿ: ಮಂಡ್ಯದಲ್ಲಿ ಹೆಣ್ಣು ಭ್ರೂಣ ಹತ್ಯೆ – ಮತ್ತೆ ಮೂವರು ಆರೋಪಿಗಳು ಅರೆಸ್ಟ್
ಕೇಂದ್ರದಲ್ಲಿ ಹೆಚ್‌ಡಿಕೆ ಪ್ರಾಬಲ್ಯ, ಬಿಜೆಪಿ ಜೆಡಿಎಸ್‌ನಲ್ಲಿ ಮರ್ಜ್ ಆಗುತ್ತಾ ಎಂಬ ಪ್ರಶ್ನೆಗೆ, ಬಿಜೆಪಿ (BJP) ಯಾವುದೇ ಪಕ್ಷದ ಜೊತೆ ಮರ್ಜ್ ಆಗಲ್ಲ. ಹಿಂದೂ ಸಂಸ್ಕೃತಿಯನ್ನು ಉಳಿಸುವ ಪಕ್ಷ ಬಿಜೆಪಿ ಒಂದೇ. ಹಾಗಾಗಿ ಯಾವುದೇ ಪಕ್ಷದ ಜೊತೆಗೆ ಬಿಜೆಪಿ ಮರ್ಜ್ ಮಾಡೋಕೆ ಸಾಧ್ಯ ಆಗಲ್ಲ. ದೇಶದ ಪ್ರಧಾನಿ, ಅನೇಕ ರಾಜ್ಯಗಳಲ್ಲಿ ಸಿಎಂಗಳು, ಶಾಸಕರು, ಅನೇಕ ಬಿಜೆಪಿ ಸಂಸದರು ಇರಲು ಕಾರಣ ಹಿಂದೂ ಸಂಸ್ಕೃತಿ. ಇವತ್ತು, ನಿನ್ನೆ ಯಾರೋ ಮಾಡುತ್ತಿರುವ ಪ್ರಯತ್ನದಿಂದ ಅಧಿಕಾರಕ್ಕೆ ಬಂದಿಲ್ಲ. ಅನೇಕ ವರ್ಷಗಳಿಂದ ರಕ್ತ ಬೆವರು ರೂಪದಲ್ಲಿ ಸುರಿಸಿದ ರಾಷ್ಟ್ರ ಭಕ್ತರು ಧರ್ಮ ನಿಷ್ಠರು ಈ ಪಕ್ಷವನ್ನ ಕಟ್ಟಿರೋದು. ಹಾಗಾಗಿ ಈ ಪಕ್ಷ ತಾತ್ಕಾಲಿಕವಾಗಿ ಕೆಲವರ ಕುಟುಂಬದ ಕೈಗೆ ಸಿಕ್ಕಿದೆ. ಇದನ್ನ ಸರಿ ಮಾಡೋದಕ್ಕೆ ಖಂಡಿತಾ ಆಗುತ್ತೆ, ಸರಿ ಆಗೇ ಆಗುತ್ತೆ ಅನುಮಾನವಿಲ್ಲ ಎಂದರು.
ಈ ದೇಶಕ್ಕೆ ಒಂದೇ ಆಶಾ ಕಿರಣ ಬಿಜೆಪಿ, ಯಾವುದೇ ಪಕ್ಷದ ಜೊತೆ ಮರ್ಜ್ ಆಗಲ್ಲ. ಪರೋಕ್ಷವಾಗಿ ಬಿಎಸ್‌ವೈ ಕುಟುಂಬದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು. ಇದನ್ನೂ ಓದಿ: ರಾಹುಲ್ ಗಾಂಧಿ ಅಮೆರಿಕ ಪ್ರವಾಸ – ಏರ್‌ಪೋರ್ಟ್‌ನಲ್ಲಿ ಸ್ವಾಗತಿಸಿದ ಸ್ಯಾಮ್ ಪಿತ್ರೋಡಾ