ಪರಿಸ್ಥಿತಿ ಕಾದು ನೋಡಬೇಕು, ಕರ್ಫ್ಯೂ, ಲಾಕ್‍ಡೌನ್ ಹೇರಬಾರದು: ಸಿ.ಟಿ ರವಿ

Public TV
2 Min Read
CT RAV1 1

ಬೆಳಗಾವಿ: ಪರಿಸ್ಥಿತಿ ಕಾದು ನೋಡಬೇಕು, ಕರ್ಫ್ಯೂ, ಲಾಕ್‍ಡೌನ್ ಹೇರಬಾರದು. ಇದು ನನ್ನ ಅಭಿಪ್ರಾಯ ಸಲಹೆ. ವೈದ್ಯರು ಅಭಿಪ್ರಾಯ ಇದೇ ರೀತಿಯಿದೆ. ವೇಗವಾಗಿ ಸ್ಪ್ರೆಡ್ ಆಗುತ್ತೆ ಆದ್ರೆ ಹಾನಿ ಹೆಚ್ಚು ಮಾಡಲ್ಲ ಅಂತಾ ತಜ್ಞರು ಹೇಳಿದ್ದಾರೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ಹೇಳಿದ್ದಾರೆ.

corona virus 4

ಗೋವಾದ ಪಣಜಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ವೀಕೆಂಡ್ ಕರ್ಫ್ಯೂ, ಲಾಕ್‍ಡೌನ್‍ಗೆ ವಿರೋಧ ವ್ಯಕ್ತಪಡಿಸಿದರು. ಕರ್ನಾಟಕ ಅಷ್ಟೇ ಅಲ್ಲ ಮಹಾರಾಷ್ಟ್ರ, ದೆಹಲಿಯಲ್ಲಿ ಹೆಚ್ಚಾಗುತ್ತಿದೆ. ಕರ್ನಾಟಕದಲ್ಲಿಯೂ ದಿನೇದಿನೇ ಕೋವಿಡ್ ಜಾಸ್ತಿಯಾಗ್ತಿದೆ. ಸುದೈವವಶಾತ್ ಮೂರನೇ ಅಲೆಯಲ್ಲಿ ಪ್ರಾಣಾಪಾಯ ಕಡಿಮೆ ಇದೆ. ಐಸಿಯು ವೆಂಟಿಲೇಟರ್ ಗೆ ಹೋಗುವ ರೋಗಿಗಳ ಸಂಖ್ಯೆ ಕಡಿಮೆ ಇದೆ. ವೇಗವಾಗಿ ಹಬ್ಬುತ್ತಿದೆ. ಆದರೆ ಯಾವುದೇ ಪ್ರಾಣಾಪಾಯ ಆಗಿಲ್ಲ ಎಂದರು.

CT RAV1 2

ಬಹಳ ಆತಂಕ ಪಡುವ ಅಗತ್ಯವಿಲ್ಲ ಎಚ್ಚರದಿಂದ ಇರಬೇಕು. ಲಾಕ್‍ಡೌನ್‍ನಂತ ನಿಯಮ ತಗೆದುಕೊಳ್ಳುವುದಕ್ಕಿಂತ ಕರ್ಫ್ಯೂ ಹೇರುವುದಕ್ಕಿಂತ ಕೆಲವು ನಿಯಮ ಹಾಕಬೇಕು. ಜನರನ್ನ ಎಚ್ಚರ ವಹಿಸುವಂತೆ ನೋಡಿಕೊಂಡು ಇದನ್ನು ನಿಯಂತ್ರಿಸಬಹುದು. ಮೂರನೇ ಅಲೆ ಹಾನಿ ಪ್ರಮಾಣ ಕಡಿಮೆ ಇರೋದ್ರಿಂದ ತುಂಬಾ ಆತಂಕ ಪಡುವ ಅಗತ್ಯವಿಲ್ಲ. ಕೋವಿಡ್ ಮೂರನೇ ಅಲೆ ಎಫೆಕ್ಟ್ ಬಹಳ ಕಡಿಮೆ ಇದೆ. ಲಾಕ್‍ಡೌನ್ ಮಾಡಿ ಜೀವನ ಏಕೆ ಸಂಕಷ್ಟಕ್ಕೆ ದೂಡಬೇಕು ಎಂದು ಪ್ರಶ್ನಿಸಿದರು. ಇದನ್ನೂ ಓದಿ: ಆಮ್ ಆದ್ಮಿ ಪಕ್ಷಕ್ಕೆ ರಾಜೀನಾಮೆ ಕೊಟ್ಟ ಮಹೇಶ್ ಸವಾನಿ

CORONA-VIRUS.

ಜೀವಕ್ಕೆ ಹಾನಿ ಆಗುತ್ತೆ ಅಂತಾ ಪ್ರಶ್ನೆ ಇದ್ರೆ ಮಾಡಬೇಕು, ಜೀವನಕ್ಕಿಂತ ಜೀವ ಮುಖ್ಯ. 3ನೇ ಅಲೆ ಕೇಸ್ ರೆಕಾರ್ಡ್ ತೆರೆದು ನೋಡಿದಾಗ ಜೀವಕ್ಕೆ ಹಾನಿ ಪರ್ಸೆಂಟೇಜ್ ಕಡಿಮೆಯಿದೆ. ಹೀಗಿರುವಾಗ ಆತಂಕ ಪಡುವುದು ಏಕೆ..? ಯಾರು ಎರಡು ಡೋಸ್ ಲಸಿಕೆ ಪಡೆದಿದ್ದಾರೆ ಅವರಿಗೆ ಕಡಿಮೆ ಹಾನಿ ಆಗಿದೆ. ಯಾರಿಗೂ ಜೀವಹಾನಿ ಏನೂ ಆಗಿಲ್ಲ. ಐಸಿಯುಗೆ ಹೋಗುವಂತಹ ಗಂಭೀರ ಸ್ಥಿತಿ ಬಂದಿಲ್ಲ. ಎರಡು ವರ್ಷ ಸಂಕಷ್ಟದಲ್ಲಿದ್ದು ಜೀವನ ಕಟ್ಟಿಕೊಂಡಿದ್ದಾರೆ. ಅವರನ್ನೇಕೆ ಸಂಕಷ್ಟಕ್ಕೆ ದೂಡಬೇಕು ಎಂದು ಹೇಳಿದರು.

CT RAV1 2

ಅನಗತ್ಯವಾಗಿ ಭಯಕ್ಕೆ ದೂಡುವ ಅವಶ್ಯಕತೆ ಇಲ್ಲ, ಆದರೆ ಎಚ್ಚರ ವಹಿಸಬೇಕು. ಕಠಿಣ ನಿಯಮ ಹೇರಬೇಕು. ಕರ್ಫ್ಯೂ, ಲಾಕ್‍ಡೌನ್ ನಿಂದ ಜೀವನ ಕಟ್ಟಿಕೊಂಡವರನ್ನು ಮತ್ತಷ್ಟು ದುಸ್ತರಗೊಳಿಸುತ್ತೆ. ಎಚ್ಚರ ವಹಿಸುವಂತೆ ನೋಡಿಕೊಳ್ಳಬೇಕು ಎಂದು ಸಲಹೆ ನೀಡಿದರು.

Share This Article
Leave a Comment

Leave a Reply

Your email address will not be published. Required fields are marked *