ಮಂಡ್ಯ: ಗಾಸಿಪ್‍ಗೆ ಆದ್ಯತೆ ಕೊಡಬೇಡಿ ಎಂದು ಮಂಡ್ಯದಲ್ಲಿ ಸಚಿವ ಸಿ.ಎಸ್ ಪುಟ್ಟರಾಜು ಅವರು ಹೇಳಿದ್ದಾರೆ.
ಮಂಡ್ಯ ಅಭಿವೃದ್ಧಿಗೆ ಮೀಸಲಿಟ್ಟ ಅನುದಾನ ಹಿಂಪಡೆಯುತ್ತಾರೆ ಎಂಬ ವಿಚಾರದ ಬಗ್ಗೆ ಮಾತನಾಡಿದ ಪುಟ್ಟರಾಜು, ಸಿಎಂ ಕುಮಾರಸ್ವಾಮಿ ಇದುವರೆಗೆ ಘೋಷಣೆ ಮಾಡಿದ್ದಕ್ಕಿಂತ ಹೆಚ್ಚು ಅನುದಾನ ಕೊಡುತ್ತಾರೆ. ಕೆಲವರಿಗೆ ಗಾಸಿಪ್ ಹಬ್ಬಿಸೋದೇ ಕೆಲಸ ಆಗಿದೆ. ಈಗಾಗಲೇ ಸಿಎಂ ತಮ್ಮ ಕಾರ್ಯ ವೈಖರಿ ವೇಗ ಹೆಚ್ಚಿಸಿಕೊಂಡಿದ್ದಾರೆ ಎಂದರು. ಇದೇ ವೇಳೆ ಸಿಎಂ ಚಿಕ್ಕಬಳ್ಳಾಪುರದಂತೆ ಮಂಡ್ಯ ಮರೀತಾರಾ ಎನ್ನುವ ವಿಚಾರಕ್ಕೆ ಸಿಎಂ ಯಾವ ಕಾರಣಕ್ಕೂ ಮಂಡ್ಯ ಮರೆಯಲ್ಲ ಎಂದು ಪ್ರತಿಕ್ರಿಯಿಸಿದರು.
Advertisement
Advertisement
ಶೋಭಾಗೆ ಸವಾಲು:
ದೇವೇಗೌಡರ ಕುಟುಂಬ ರಾಜಕೀಯ ನಿವೃತ್ತಿ ಪಡೆಯಬೇಕು ಎಂದು ಸಂಸದೆ ಶೋಭಾ ಕರಂದ್ಲಾಜೆ ಅವರು ಹೇಳಿದ್ದರು. ಶಿಕಾರಿಪುರದ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಬಿಜೆಪಿಗೆ ಸೋಲಾಗಿದೆ. ಹೀಗಾಗಿ ಮೊದಲು ಯಡಿಯೂರಪ್ಪ ಅವರನ್ನು ರಾಜೀನಾಮೆ ಕೊಡಿಸಲಿ ಎಂದು ಪುಟ್ಟರಾಜು ಅವರು ಶೋಭಾ ಅವರಿಗೆ ತಿರುಗೇಟು ನೀಡುವ ಮೂಲಕ ಸವಾಲು ಹಾಕಿದ್ದಾರೆ.
Advertisement
Advertisement
ನಿಖಿಲ್ ಮಂಡ್ಯಕ್ಕೆ ಬರುತ್ತಾರೆ. ಮಂಡ್ಯಕ್ಕೆ ಬಂದು ಮಂಡ್ಯ ಜನರ ಜೊತೆಯಲ್ಲಿಯೇ ಇರುತ್ತಾರೆ. ಸದ್ಯ ನಿಖಿಲ್ ಅಮಾವಾಸ್ಯೆ ಮುಗಿಸಿ ಬರಲು ಕಾಯುತ್ತಿದ್ದರು. ಈಗ ಅಮಾವಾಸ್ಯೆ ಮುಗಿದಿದೆ. ಇನ್ನು ಮುಂದೆ ಮಂಡ್ಯಕ್ಕೆ ಬಂದು, ನಿಮ್ಮ ಜೊತೆಯಲ್ಲೇ ಇರುತ್ತಾರೆ. ಅಲ್ಲದೆ ತೋಟ ಖರೀದಿ, ಮನೆ ನಿರ್ಮಾಣ ಕಾರ್ಯ ಶೀಘ್ರದಲ್ಲೇ ಆರಂಭವಾಗಲಿದೆ ಎಂದು ಹೇಳಿದರು.
ಬಳಿಕ ವಿಶ್ವನಾಥ್ ರಾಜೀನಾಮೆ ವಿಚಾರದ ಬಗ್ಗೆ ಮಾತನಾಡಿ, ಚುನಾವಣೆಗೂ ಮುನ್ನ ರಾಜೀನಾಮೆಗೆ ನಿರ್ಧರಿಸಿದ್ದರು. ಆಗ ನಾವೆಲ್ಲ ಚುನಾವಣೆ ಮುಗಿಯೋವರೆಗೂ ಕಾಯಿರಿ ಎಂದು ಹೇಳಿದ್ದೆವು. ಇಂದು ನಡೆಯುವ ಶಾಸಕಾಂಗ ಸಭೆಯಲ್ಲಿ ಚರ್ಚೆ ಮಾಡಿ ಬಳಿಕ ತೀರ್ಮಾನ ಮಾಡುತ್ತಾರೆ ಎಂದರು. ಅಲ್ಲದೆ ವಿಶ್ವನಾಥ್ ಅವರು ತಮ್ಮ ಅಭಿಪ್ರಾಯ ಹಂಚಿಕೊಳ್ಳಲು ಸುದ್ದಿಗೋಷ್ಠಿ ಕರೆದಿದ್ದಾರೆ ಅಷ್ಟೇ. ಅದನ್ನು ನಾವು ಬೇಡ ಎಂದು ಹೇಳುವುದಕ್ಕೆ ಆಗುತ್ತಾ ಎಂದು ಪ್ರತಿಕ್ರಿಯಿಸಿದರು.