ಬೆಂಗಳೂರು: ಕಾಂಗ್ರೆಸ್‍ನಲ್ಲಿ (Congress) ನಡೆಯುತ್ತಿರುವ ಸಿಂಹಾಸನ ಸಮರಕ್ಕೆ ಕದನ ವಿರಾಮ ಘೋಷಣೆ ಆಯ್ತಾ..?, ಡೆಲ್ಲಿಯ ಆ ಸಂದೇಶಕ್ಕೆ ಕಾಂಗ್ರೆಸ್‍ನ ಇಬ್ಬರು ನಾಯಕರು ಒಪ್ಪಿದ್ರಾ ಅನ್ನೋ ಕುತೂಹಲ ಮೂಡಿದೆ.
ಅಧಿಕಾರ ಹಂಚಿಕೆ ಬಗ್ಗೆ ಮಾತನಾಡುವರ ಬಾಯಿ ಮುಚ್ಚಿಸಿ ಅಂತ ಸಿದ್ದರಾಮಯ್ಯ (Siddaramaiah) ಹಾಗೂ ಡಿಕೆ ಶಿವಕುಮಾರ್ ಗೆ (DK Shivakumar) ಹೈಕಮಾಂಡ್ ಸಂದೇಶ ರವಾನಿಸಿದೆ ಎನ್ನಲಾಗಿದೆ. ವಿಧಾನಸಭೆ ಚುನಾವಣೆಯಲ್ಲೂ (Vidhanasabha Election) ಕುರ್ಚಿ ಕದನ ಜೋರಾಗಿಯೇ ಇತ್ತು. ಸಿದ್ದರಾಮಯ್ಯ, ಡಿಕೆಶಿ ಬಣಗಳ ನಡುವೆ ಕಾದಾಟ ಬೂದಿ ಮುಚ್ಚಿದ ಕೆಂಡದಂತಿತ್ತು. ಪರಿಸ್ಥಿತಿ ವಿಕೋಪಕ್ಕೆ ಹೋಗ್ತಿದೆ ಅಂದಾಗ ಡೆಲ್ಲಿಗೆ ಕರೆಸಿ ರಾಹುಲ್ ಗಾಂಧಿ ಸಂಧಾನ ಮಾಡಿದ್ದರು.
Advertisement
Advertisement
ಸಿದ್ದರಾಮಯ್ಯ, ಡಿಕೆಶಿ ಇಬ್ಬರನ್ನೂ ಕರೆಸಿ ಒಟ್ಟಾಗಿ ಹೋಗುವಂತೆ ಸಂದೇಶ ರವಾನಿಸಿದ್ರು. ಆ ಬಳಿಕ ಇಬ್ಬರು ಬಹಿರಂಗ ಗುದ್ದಾಟ ಮಾಡದೇ ಚುನಾವಣೆ ಅಖಾಡಕ್ಕಿಳಿದು ಸಕ್ಸಸ್ ಆಗಿದ್ರು. ಈಗಲೂ ಕಾಂಗ್ರೆಸ್ ಹೈಕಮಾಂಡ್ ಅದೇ ತಂತ್ರ, ಅದೇ ಸಂದೇಶದ ಮೊರೆ ಹೋಗಿದೆ. ಇಬ್ಬರು ನಾಯಕರಿಗೆ ವೇಣುಗೋಪಾಲ್ ಮೂಲಕ ಸಂದೇಶ ರವಾನಿಸಿದೆ.
Advertisement
ಎಚ್ಚರಿಕೆಯ ನಡುವೆಯೂ ಹೇಳಿಕೆ: ಸಿಎಂ ಹುದ್ದೆ ಮತ್ತು ಅಧಿಕಾರ ಹಂಚಿಕೆ ಸಂಬಂಧ ರಾಜ್ಯ ಕಾಂಗ್ರೆಸ್ ನಾಯಕರು ತಮಗೆ ತೋಚಿದ ರೀತಿಯಲ್ಲಿ ಹೇಳಿಕೆ ನೀಡುತ್ತಾ ಪಕ್ಷದ ಆಂತರಿಕ ಸಂಘರ್ಷವನ್ನು ಅನಾವರಣ ಮಾಡ್ತಿದ್ದಾರೆ. ಶಿಸ್ತು ಪಾಲನಾ ಸಮಿತಿ ಸಭೆ ನಡೆಸಿ, ಸಿಎಂ ಆಗಲಿ, ಡಿಸಿಎಂ ಆಗ್ಲಿ ಯಾರು ಕೂಡ ಪಕ್ಷಕ್ಕೆ ಹಾನಿಯಾಗುವ ರೀತಿಯ ಹೇಳಿಕೆ ಕೊಡಬಾರದು ಎಂದು ಎಚ್ಚರಿಕೆ ನೀಡಿತ್ತು.
Advertisement
ಇದನ್ನು ಯಾರು ಕೂಡ ಸೀರಿಯಸ್ಸಾಗಿ ಪರಿಗಣಿಸಿದಂತೆ ಕಂಡುಬರುತ್ತಿಲ್ಲ. ಮತ್ತೆ ಸಿಎಂ ಹುದ್ದೆ, ಅಧಿಕಾರ ಹಂಚಿಕೆ ಕುರಿತಾಗಿ ಸಿಎಂ-ಡಿಸಿಎಂ ಬಣದ ನಾಯಕರು ಮತ್ತೆ ಮಾತಾಡಿದ್ದಾರೆ. ಐದು ವರ್ಷವೂ ಸಿದ್ದರಾಮಯ್ಯನವ್ರೇ ಸಿಎಂ ಎಂದು ಸಚಿವ ಜಮೀರ್ ಪ್ರತಿಪಾದಿಸಿದ್ದಾರೆ. ಆದರೆ ಅಧಿಕಾರ ನಿಂತ ನೀರಾಗಬಾರದು, ಡಿಕೆಶಿ ಸಿಎಂ ಆಗ್ತಾರೆ ಎಂದು ಶಾಸಕ ಶಿವಗಂಗಾ ಬಸವರಾಜು ಹೇಳಿಕೆ ನೀಡಿದ್ದಾರೆ.
Web Stories