ಬಾಗಲಕೋಟೆ: ನಮ್ಮ ಮಠ ಮಾನ್ಯಗಳ ಜೀರ್ಣೋದ್ಧಾರಕ್ಕೆ ಆ ಮುಲ್ಲಾಗಳಿಂದ ಹಣ ತೆಗೆದುಕೊಳ್ಳಬೇಡಿ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (Basanagouda Patil Yatnal) ಜನರಿಗೆ ಕರೆ ನೀಡಿದರು.
ಬನಹಟ್ಟಿ ಪಟ್ಟಣದಲ್ಲಿ ವಕ್ಫ್ ಹಠಾವೋ, ದೇಶ ಬಚಾವೋ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಅವರು, ನಮ್ಮ ಪಾರ್ಲಿಮೆಂಟ್ ಹಾಗೂ ವಿಧಾನಸೌಧ ಬಗ್ಗೆ ಮಾತಾಡ್ತಾರೆ. ನಿಮ್ಮನ್ನ ಹೊರಗೆ ಬರೋಕೆ ಬಿಡಲ್ಲ ಅಂತಾ ಮೌಲ್ವಿ ಹೇಳಿದ್ದಾರೆ. ವಕ್ಫ್ ವಿರುದ್ಧ ನಮ್ಮ ಹೋರಾಟ ನಿರಂತರ. ನಮ್ಮ ಮನೆ, ಮಠ ಹಾಗೂ ಭೂಮಿ ಹೋದ್ರೆ ನಾವೇ ಸಾಬೀತುಪಡಿಸಿಕೊಳ್ಳಬೇಕು. ಇಂತಹ ಪರಿಸ್ಥಿತಿ ನಮಗೆ ಬಂದಿದೆ ಎಂದು ಬೇಸರ ವ್ಯಕ್ತಪಡಿಸಿದರು. ಇದನ್ನೂ ಓದಿ: ಲ್ಯಾಂಡ್ ಜಿಹಾದ್‍ನ್ನು ಬಿಜೆಪಿ ಗಂಭೀರವಾಗಿ ಪರಿಗಣಿಸಿದೆ: ಪಿ.ರಾಜೀವ್
Advertisement
Advertisement
ನಮ್ಮ ಮಠ ಮಾನ್ಯಗಳ ಜೀರ್ಣೋದ್ಧಾರಕ್ಕೆ ಆ ಮುಲ್ಲಾಗಳ ಕಡೆ ಹಣ ತೆಗೆದುಕೊಳ್ಳಬೇಡಿ. ಸಿಎಂ ಇಬ್ರಾಹಿಂ ಹೇಳ್ತಾನೆ, ಮಂತ್ರಾಲಯ ದೇವಸ್ಥಾನ ನಿಜಾಮೋ, ಹಜಾಮೋ ದಾನ ಕೊಟ್ಟಾನಂತೆ ಹೇಳ್ತಾನೆ. ಆದ್ರೆ ಮಾನಪ್ಪಾಡಿ ವರದಿಯಲ್ಲಿ ಸಿಎಂ ಇಬ್ರಾಹಿಂ ಎಷ್ಟು ಆಸ್ತಿ ಹೊಡೆದಾರ ಗೊತ್ತಾ? ಆ ಜಮೀರ್, ಇದು ಅಲ್ಲಾ ಕೇ ಆಸ್ತಿ ಹೈ ಅಂದಾ ಬೀದರ್‌ನಲ್ಲಿ. ನಿಮ್ಮಪ್ಪಂದಾ ಈ ಆಸ್ತಿ ಎಂದು ಏಕವಚನದಲ್ಲಿ ವಾಗ್ದಾಳಿ ನಡೆಸಿದರು.
Advertisement
ಬೀದರ್‌ನಲ್ಲಿ ಬಸವಣ್ಣನವ್ರ ಮಂಟಪ ವಕ್ಫ್ಗೆ ಸೇರಿಸಿದ್ದಾರೆ. ಆದ್ರೆ ಈ ಬಗ್ಗೆ ಒಬ್ಬನಾದ್ರೂ ಬಸವ ಅನುಯಾಯಿ ಬಾಯಿ ಬಿಡ್ತಾರಾ? ನೀಮ್… ಭೀಮ್ ಭಾಯಿ ಭಾಯಿ ಅಲ್ಲ. ನಮ್ಮ ಕಣ್ಣೇರಿಮಠದ ಸ್ವಾಮೀಜಿ ಹೇಳಿದ್ದಾರೆ. ಬಾಬಾ ಸಾಹೇಬ್ ಅಂಬೇಡ್ಕರ್, ‘ಪಾರ್ಟಿಷನ್ ಆಫ್ ಇಂಡಿಯಾ ಆ್ಯಂಡ್ ಪಾಕಿಸ್ತಾನ’ ಅಂತಾ ಪುಸ್ತಕ ಬರೆದಿದ್ದಾರೆ. ಮುಸ್ಲಿಮರು ನಮ್ಮನ್ನ ಎಂದೂ ಭಾಯಿ ಭಾಯಿ ಅನ್ನಲ್ಲ, ಕಾಪೀರ್ ಅಂತಾರೆ. ಈ ದೇಶದಲ್ಲಿ ಹಿಂದೂಗಳಿದ್ರೆ ಅಷ್ಟೇ ಶಾಂತಿ, ನೆಮ್ಮದಿ ಇರುತ್ತೆ ಎಂದು ಅಂಬೇಡ್ಕರ್ ಅವ್ರು ಈ ಮೊದಲೇ ಹೇಳಿದ್ದಾರೆ. ಜೋಗಿನಾಥ್ ಮಂಡಲ್ ಮಹಮ್ಮದ್ ಅಲಿ ಜಿನ್ನಾನ ಜೊತೆ ಸೇರಿ ಪಾಕಿಸ್ತಾನಕ್ಕೆ ಹೋದ್ರು. ಪಾಕಿಸ್ತಾನದ ಮೊದಲ ಕಾನೂನು ಮಂತ್ರಿ ಜೋಗಿನಾಥ್ ಮಂಡಲ್. ಅವರಿಗೆ ಮಾತನಾಡಲು ಅವಕಾಶ ಕೊಡದೇ, ಅವ್ರನ್ನ ಮರ್ಡರ್ ಮಾಡಲು ಹೋಗಿದ್ರು. ಕೊನೆಗೆ ಅವ್ರು ಭಾರತಕ್ಕೆ ಬಂದು ಕೊನೆಯುಸಿರೆಳೆದ್ರು. ಹಿಂದೂ ಮುಸ್ಲಿಂ ಎಂದೂ ಭಾಯಿ ಭಾಯಿ ಆಗಲ್ಲ ಎಂದರು. ಇದನ್ನೂ ಓದಿ: ಉಳುವವನೇ ಭೂಮಿಯ ಒಡೆಯ ಕಾಯ್ದೆ ಈ ವಕ್ಫ್ ವಿಚಾರದಲ್ಲಿ ಯಾಕೆ ಆಗಲಿಲ್ಲ: ಪ್ರತಾಪ್ ಸಿಂಹ ಪ್ರಶ್ನೆ
Advertisement
ತೇರದಾಳದಲ್ಲಿ 450 ಎಕರೆ, ಬೀಳಗಿ ತಾಲೂಕಿನ ಅನಗವಾಡಿಯಲ್ಲಿ 220 ಎಕರೆ ವಕ್ಫ್ ಆಗಿದೆ. ಬಾಗಲಕೋಟೆ ಜಿಲ್ಲೆಯಲ್ಲಿ 6590 ಎಕರೆ ವಕ್ಫ್ ಆಗಿದೆ. ವಿಜಯಪುರದಲ್ಲಿ 16 ಸಾವಿರ ಎಕರೆ ವಕ್ಫ್ ಆಗಿದೆ. ಜಮೀರ್ ಅಲ್ಲಾಕೇ ಆಸ್ತಿ ಅಂತಾನೆ. ಆಗ ಅಲ್ಲಾ ಎಲ್ಲಿದ್ದ ಎಂದು ಪ್ರಶ್ನಿಸಿದರಲ್ಲದೇ, ನಾಳೆ ವಿಧಾನಸಭೆಯಲ್ಲಿ ಹೋರಾಟ ಮಾಡ್ತೇವೆ ಎಂದು ತಿಳಿಸಿದರು.