LatestLeading NewsMain PostNational

ತಮಿಳುನಾಡಿಗೆ ಸಂಪೂರ್ಣ ಸ್ವಾಯತ್ತತೆ ನೀಡಿ – CM ನೇತೃತ್ವದಲ್ಲೇ ಕೇಂದ್ರಕ್ಕೆ ಸಂಸದ ಎ.ರಾಜಾ ಒತ್ತಾಯ

ಚೆನ್ನೈ: ಪ್ರತ್ಯೇಕ ತಮಿಳುನಾಡು ರಾಜ್ಯಕ್ಕೆ ಸ್ವಾಯತ್ತತೆ ನೀಡುವಂತೆ ಡಿಎಂಕೆ ಸಂಸದ ಎ.ರಾಜಾ ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.

DMK ಸಂಸದ ಎ.ರಾಜಾ ಅವರು ಇಲ್ಲಿನ ನಾಮಕ್ಕಲ್‌ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಅವರ ಉಪಸ್ಥಿತಿಯಲ್ಲೇ ಈ ಬೇಡಿಕೆ ಇಟ್ಟಿದ್ದಾರೆ. ಇದನ್ನೂ ಓದಿ: ಶಿಂಧೆ ಸರ್ಕಾರ 6 ತಿಂಗಳಲ್ಲಿ ಪತನವಾಗುತ್ತೆ: ಶರದ್ ಪವಾರ್ ಭವಿಷ್ಯ

ಸಂಸದ ಎ.ರಾಜಾ ಅವರು `ಒಕ್ಕೂಟ ವ್ಯವಸ್ಥೆಯಲ್ಲಿ ರಾಜ್ಯಗಳಿಗೆ ಸ್ವಾಯತ್ತತೆ’ ವಿಷಯ ಕುರಿತು ಮಾತನಾಡಿದ ಅವರು, ನಮಗೆ ಪ್ರತ್ಯೇಕ ರಾಜ್ಯ ಸ್ವಾಯತ್ತತೆ ಸಿಗುವವರೆಗೆ ಹೋರಾಟ ನಿಲ್ಲಿಸುವುದಿಲ್ಲ ಎಂದು ಎಚ್ಚರಿಸಿದ್ದಾರೆ. ಸದ್ಯ ಎ.ರಾಜಾ ಅವರ ಭಾಷಣದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಪರ ವಿರೋಧದ ಚರ್ಚೆ ಆರಂಭವಾಗಿದೆ. ಇದನ್ನೂ ಓದಿ: ಬಾಲಿವುಡ್ ನಿರ್ದೇಶಕರಲ್ಲಿ ಸ್ವಂತ ಯೋಚನೆ ಇಲ್ಲ: ನೀಲ್ ನಿತಿನ್ ಮುಖೇಶ್ 

MK Stalin (1)

ನಾವು ಪೆರಿಯಾರ್ ಅವರ ಮಾರ್ಗವನ್ನು ಅನುಸರಿಸುತ್ತಿದ್ದು, ರಾಷ್ಟ್ರೀಯ ಸಮಗ್ರತೆ ಹಾಗೂ ಪ್ರಜಾಪ್ರಭುತ್ವಕ್ಕಾಗಿ ಪ್ರತ್ಯೇಕ ತಮಿಳುನಾಡು ಕೂಗನ್ನು ಬದಿಗಿಟ್ಟಿದೆವು. ಆದರೆ ತಮಿಳುನಾಡಿನಲ್ಲಿ ಅಸ್ತಿತ್ವಕ್ಕೆ ಡಿಎಂಕೆ ಸರ್ಕಾರ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಬಿಜೆಪಿ ಸರ್ಕಾರದ ನಡುವಿನ ತಿಕ್ಕಾಟವೇ ಪ್ರತ್ಯೇಕ ರಾಜ್ಯದ ಕೂಗಿಗೆ ಕಾರಣವಾಗಿದೆ. ಹಾಗಾಗಿ ನಮ್ಮ ಬೇಡಿಕೆಯನ್ನು ಪರಿಗಣಿಸಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಗೃಹಸಚಿವ ಅಮಿತ್ ಶಾ ಅವರನ್ನು ಒತ್ತಾಯಿಸಿದ್ದಾರೆ. ಇದನ್ನೂ ಓದಿ: ಬೊಗಳಿದ್ದಕ್ಕೆ ನಾಯಿಗೆ ಕಬ್ಬಿಣದ ರಾಡ್‍ನಿಂದ ಹೊಡೆದ – ಬಿಡಿಸಿಕೊಳ್ಳೋಕೆ ಬಂದವರ ಮೇಲೂ ಹಲ್ಲೆ

ಕೇಂದ್ರವು ಹೆಚ್ಚಿನ ಅಧಿಕಾರ ಅನುಭವಿಸುವುದನ್ನು ಮುಂದುವರಿಸಿದೆ. ತಮಿಳುನಾಡಿನ ಶೇ.6.5ರಷ್ಟು ಜಿಎಸ್‌ಟಿ ಪಾಲಿನಲ್ಲಿ ಕೇವಲ ಶೇ.2.2 ರಷ್ಟನ್ನು ಪಡೆಯುತ್ತಿದೆ. ಸಣ್ಣ-ಸಣ್ಣ ಸಮಸ್ಯೆಗಳಿಗೂ ರಾಜ್ಯಗಳು ಕೇಂದ್ರವನ್ನು ಅವಲಂಬಿಸಬೇಕಾದ ಪರಿಸ್ಥಿತಿ ಎದುರಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

2013 ರಲ್ಲೂ ಪ್ರತ್ಯೇಕತೆಯ ಕೂಗು ಕೇಳಿಬಂದಿತ್ತು. 2021 ಮೇ ತಿಂಗಳಿನಲ್ಲಿ ಎಂ.ಕೆ.ಸ್ಟಾಲಿನ್ ನೇತೃತ್ವದ ಡಿಎಂಕೆ ತಮಿಳು ನಾಡಿನಲ್ಲಿ ಅಧಿಕಾರವನ್ನು ಹಿಡಿಯುತ್ತಿದ್ದಂತೆ ಈ ಪ್ರತ್ಯೇಕತೆಯ ಕೂಗು ತೀವ್ರಗೊಂಡಿತ್ತು. ಸ್ಟಾಲಿನ್ ಕೇಂದ್ರ ಸರ್ಕಾರವನ್ನು ಒಕ್ಕೂಟ ಸರ್ಕಾರ ಎಂದು ಕರೆಯುವ ನಿರ್ಣಯ ಕೈಗೊಂಡಿದ್ದು, ಸ್ಟಾಲಿನ್ ತಂತ್ರಕ್ಕೆ ಬಿಜೆಪಿ ಪ್ರತಿ ತಂತ್ರವಾಗಿ ಪ್ರತ್ಯೇಕ ಕೊಂಗುನಾಡು ಬೇಡಿಕೆಯನ್ನು ಹುಟ್ಟುಹಾಕಿತ್ತು ಎಂದು ವರದಿಯಾಗಿತ್ತು.

Live Tv

Leave a Reply

Your email address will not be published.

Back to top button