ಮೈಸೂರು: ಸಾಮಾಜಿಕ ಜಾಲತಾಣದಲ್ಲಿ ಫೇಕ್ ಅಕೌಂಟ್ ಹಾವಳಿ ಹೆಚ್ಚಾಗುತ್ತಿದೆ. ಪ್ರತಿಷ್ಠಿತರ ಹೆಸರಿನಲ್ಲಿ ಕಿಡಿಗೇಡಿಗಳು ನಕಲಿ ಅಕೌಂಟ್ ತೆಗೆಯುವುದು ನಿಮಗೆ ಗೊತ್ತೆ ಇದೆ.
ಈ ನಕಲಿ ಅಕೌಂಟ್ ನ ಬಿಸಿ ಮೈಸೂರಿನ ಯದುವಂಶದ ಮಹಾರಾಣಿಗೂ ತಟ್ಟಿದೆ. ಯದುವಂಶದ ಮಹಾರಾಜ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಪತ್ನಿ ತ್ರಿಷಿಕಾದೇವಿ ಒಡೆಯರ್ ಹೆಸರಲ್ಲಿ ಫೇಕ್ ಇನ್ ಸ್ಟಾಗ್ರಾಮ್ ಖಾತೆಯನ್ನು ಕಿಡಿಗೇಡಿಗಳು ಓಪನ್ ಮಾಡಿದ್ದಾರೆ.
Advertisement
ಈ ನಕಲಿ ಖಾತೆಯಿಂದ ಯದುವೀರ್ ಅವರಿಗೆ ಫ್ರೆಂಡ್ ರಿಕ್ವೆಸ್ಟ್ ಬಂದಿವೆ. ಆಗ ತಕ್ಷಣ ಇದು ಫೇಕ್ ಅಕೌಂಟ್ ಎಂದು ಯದುವೀರ್ ಹೇಳಿದ್ದಾರೆ. ಇದೊಂದು ಫೇಕ್ ಅಕೌಂಟ್ ಯಾರು ಫಾಲೋ ಮಾಡಬೇಡಿ ಎಂದು ಮನವಿ ಮಾಡಿದ್ದಾರೆ.
Advertisement
ತ್ರಿಷಿಕಾದೇವಿ ಒಡೆಯರ್ ಹೆಸರಲ್ಲಿ ಫೇಕ್ ಅಕೌಂಟ್ ಸೃಷ್ಟಿಯಾಗಿರೋದು ಇದೇ ಮೊದಲಲ್ಲ. ಈ ಹಿಂದೆಯೂ ಸಾಮಾಜಿಕ ಜಾಲತಾಣದಲ್ಲಿ ಇಂತಹ ಫೇಕ್ ಅಕೌಂಟ್ ಕ್ರಿಯೇಟ್ ಆಗಿದ್ದವು. ಇದು ಹೆಚ್ಚಾಗುತ್ತಿರುವುದಕ್ಕೆ ಯದುವೀರ್ ಬೇಸರ ಕೂಡ ವ್ಯಕ್ತಪಡಿಸಿದ್ದಾರೆ.