ಲಕ್ನೋ: ಬಿಜೆಪಿ ನೀಡುವ ಭರವಸೆಗಳಿಗೆ ಮರುಳಾಗದೇ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಸಮಾಜವಾದಿ ಪಕ್ಷವನ್ನು ಬೆಂಬಲಿಸುವಂತೆ ಉತ್ತರ ಪ್ರದೇಶದ ಜನತೆಗೆ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮತ್ತು ತೃಣಮೂಲ ಕಾಂಗ್ರೆಸ್ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಅವರು ಒತ್ತಾಯಿಸಿದ್ದಾರೆ.
Advertisement
ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ ಅವರೊಂದಿಗೆ ಜಂಟಿ ಪ್ರತಿಕಾಗೋಷ್ಟಿ ನಡೆಸಿ ಮಾತನಾಡಿದ ಅವರು, ಸಮಾಜವಾದಿ ಪಕ್ಷವನ್ನು ಬೆಂಬಲಿಸಿ ಮತ್ತು ಅವರನ್ನು ಗೆಲ್ಲಿಸಿ, ಬಿಜೆಪಿಯನ್ನು ಸೋಲಿಸುವಂತೆ ನಾನು ನಿಮ್ಮೆಲ್ಲರನ್ನು ಕೋರುತ್ತೇನೆ. ಬಿಜೆಪಿಯವರು ನೀಡುವ ಸುಳ್ಳು ಭರವಸೆಗಳಿಗೆ ಮರುಳಾಗಬೇಡಿ ಎಂದಿದ್ದಾರೆ. ಜೊತೆಗೆ ಮಾರ್ಚ್ 3 ರಂದು ಪ್ರಧಾನಿ ನರೇಂದ್ರ ಮೋದಿ ಅವರು ಸಂಸದೀಯ ಕ್ಷೇತ್ರವಾದ ವಾರಣಾಸಿಗೆ ಭೇಟಿ ನೀಡುವುದಾಗಿ ತಿಳಿಸಿದ್ದಾರೆ.
Advertisement
Advertisement
ಇದೇ ವೇಳೆ ಮಾತನಾಡಿದ ಅಖಿಲೇಶ್ ಯಾದವ್ ಅವರು, ಬಿಜೆಪಿ ತನ್ನ ಸಂಪೂರ್ಣ ಶಕ್ತಿಯನ್ನು ಉಪಯೋಗಿಸಿದರೂ ಪಶ್ಚಿಮ ಬಂಗಾಳದಲ್ಲಿ ದೀದಿಯನ್ನು ಸೋಲಿಸಲು ಸಾಧ್ಯವಾಗಲಿಲ್ಲ. ಅವರು ಕೋಲ್ಕತ್ತಾದಿಂದ ಲಕ್ನೋಗೆ ಬಂದಿದ್ದಾರೆ. ಆದರೆ ಬಿಜೆಪಿಯಲ್ಲಿ ಕೆಲವರಿಗೆ ಕೆಟ್ಟ ಹವಾಮಾನದ ಕಾರಣ ದೆಹಲಿಯಿಂದ ಉತ್ತರ ಪ್ರದೇಶಕ್ಕೆ ಆಗಮಿಸಲು ಸಾಧ್ಯವಾಗುತ್ತಿಲ್ಲ ಎಂದು ವ್ಯಂಗ್ಯವಾಡಿದ್ದಾರೆ. ಇದನ್ನೂ ಓದಿ: ಹಿಜಬ್-ಕೇಸರಿ ಅಂತಾ ಮಕ್ಕಳ ಭವಿಷ್ಯ ಹಾಳು ಮಾಡಬೇಡಿ: HDK ಕಿಡಿ
Advertisement
ರಾಜ್ಯದಲ್ಲಿ ಮುಂಬರುವ ಚುನಾವಣೆಯ ಕಾರಣ ಅಖಿಲೇಶ್ ಯಾದವ್ ಅವರಿಗೆ ಬೆಂಬಲ ನೀಡಲು ಬ್ಯಾನರ್ಜಿ ಅವರು ಸೋಮವಾರ ಕೋಲ್ಕತ್ತಾದಿಂದ ಲಕ್ನೋಗೆ ಆಗಮಿಸಿದ್ದರು. ಲಕ್ನೋಗೆ ತೆರಳುವ ಮುನ್ನ ಕೋಲ್ಕತ್ತಾದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಾವು (ಟಿಎಂಸಿ) ಬಿಜೆಪಿಯನ್ನು ಸೋಲಿಸಬೇಕು ಮತ್ತು ಅಖಿಲೇಶ್ ಯಾದವ್ ಅವರನ್ನು ಉತ್ತರ ಪ್ರದೇಶದಲ್ಲಿ ಗೆಲ್ಲಿಸಬೇಕೆಂದು ಬಯಸುತ್ತೇನೆ. ಬಿಜೆಪಿ ವಿರುದ್ಧದ ಹೋರಾಟದಲ್ಲಿ ನಾವೆಲ್ಲರೂ ಅವರನ್ನು ಬೆಂಬಲಿಸಬೇಕು ಎಂದು ಬ್ಯಾನರ್ಜಿ ತಿಳಿಸಿದ್ದಾರೆ.
I urge you all to support Samajwadi Party and make them win, defeat BJP. Don’t fall for false promises made by BJP… I will also visit Varanasi on 3rd March: West Bengal CM & TMC leader Mamata Banerjee, in Lucknow pic.twitter.com/KUWaCd01WP
— ANI UP/Uttarakhand (@ANINewsUP) February 8, 2022
ಈ ಕುರಿತಂತೆ ಟ್ವೀಟ್ ಮಾಡಿದ್ದ ಅಖಿಲೇಶ್ ಯಾದವ್ ಅವರು, ನಾವು ಬಂಗಾಳದಲ್ಲಿ ಬಿಜೆಪಿಯನ್ನು ಒಟ್ಟಿಗೆ ಸೋಲಿಸಿದ್ದೇವು. ಈಗ ಉತ್ತರಪ್ರದೇಶದಲ್ಲಿ ಬಿಜೆಪಿಯನ್ನು ಸೋಲಿಸುತ್ತೇವೆ. ನಾವು ಈ ಬಾರಿ ವಿಜೇತರಾಗಿ ಹೊರಹೊಮ್ಮುತ್ತೇವೆ ಎಂದು ದೀದಿಗೆ ಭರವಸೆ ನೀಡುತ್ತೇವೆ. ಉತ್ತರ ಪ್ರದೇಶಕ್ಕೆ ಮಮತಾ ಬ್ಯಾನರ್ಜಿ ಅವರಿಗೆ ಸ್ವಾಗತ ಎಂದು ತಿಳಿಸಿದ್ದರು. ಇದನ್ನೂ ಓದಿ: ರಾಜವಂಶದ ಆಚೆಗೆ ಕಾಂಗ್ರೆಸ್ ಯೋಚಿಸಲು ಸಾಧ್ಯವಿಲ್ಲ: ಮೋದಿ ವಾಗ್ದಾಳಿ