ಚಿಕ್ಕಬಳ್ಳಾಪುರ: ಐಸ್‌ಕ್ರೀಂ ತಿನ್ನಬೇಡಿ, ಕೂಲ್ ಡ್ರಿಂಕ್ಸ್, ಫ್ರಿಡ್ಜ್ ವಾಟರ್ ಕುಡಿಯಬೇಡಿ ಎಂದು ವಿದ್ಯಾರ್ಥಿಗಳು ಹಾಗೂ ಪೋಷಕರಿಗೆ ಕಾನೂನು ಕಾಲೇಜು ಕಟ್ಟಪ್ಪಣೆ ಹೊರಡಿಸಿದ ಸೂಚನಾ ಪತ್ರ ಸಾಮಾಜಿಕ ಜಾಲತಾಣದಲ್ಲಿ (Social Media) ವೈರಲ್ ಆಗಿದೆ.
ಚಿಕ್ಕಬಳ್ಳಾಪುರ (Chikkaballaoura) ನಗರದ ವಾಪಸಂದ್ರ ಬಡವಾವಣೆಯಲ್ಲಿರುವ ಶ್ರೀ ನಿಡುಮಾಮಿಡಿ ಶಾಖಾ ಮಠದ ಉಸ್ತುವಾರಿಯ ಶ್ರೀ ಸಿದ್ದರಾಮಯ್ಯ ಕಾನೂನು ಮಹಾವಿದ್ಯಾಲಯ (Sri Siddaramaiah Law College) ಇಂತಹದೊದು ಎಡವಟ್ಟು ಮಾಡಿದೆ.
Advertisement
ಮೇ 2 ರಂದು ಸಂಸ್ಥೆಯ ಆಡಳಿತಾಧಿಕಾರಿ ಶಿವಜ್ಯೋತಿ ನಿರ್ದೇಶನದ ಮೇರೆಗೆ ಕಾನೂನು ಕಾಲೇಜಿನ ಪ್ರಭಾರ ಪ್ರಾಂಶುಪಾಲರಾರ ಉದಯ್ ಶಂಕರ್ ಈ ಮುಖ್ಯ ಸೂಚನಾ ಪತ್ರ ಹೊರಡಿಸಿದ್ದು ಈಗ ಇಡೀ ರಾಜ್ಯಾದ್ಯಾಂತ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗಿದೆ.
Advertisement
ಕೋವಿಡ್ (Covid) ಸಮಯದಲ್ಲಿ ಪಡೆದ ಕೋವಿಶೀಲ್ಡ್ ವ್ಯಾಕ್ಸಿನ್ (Covishield Vaccine) ಪಡೆದವರು ತಂಪು ಪಾನೀಯಗಳು, ಫ್ರಿಡ್ಜ್ ನೀರು, ಐಸ್ ಕ್ರೀಂ ತಿನ್ನುವುದರಿಂದ ಹೃದಯಾಘಾತವಾಗುವ ಸಾಧ್ಯತೆಯಿದೆ. ಹೀಗಾಗಿ ಕಡ್ಡಾಯವಾಗಿ ಕೂಲ್ ಡ್ರಿಂಕ್ಸ್ ಐಸ್ ಕ್ರೀಂ ಫ್ರಿಡ್ಜ್ ವಾಟರ್ ಕುಡಿಯದಂತೆ ತಿಳಿಸಲಾಗಿದೆ.
Advertisement
ಸೂಚನಾ ಪತ್ರದಲ್ಲಿ ಆರೋಗ್ಯ ಇಲಾಖೆಯ (Health Department) ಮಾಹಿತಿ ತಿಳುವಳಿಕೆ ಪ್ರಕಾರ ಎಂದು ಉಲ್ಲೇಖಿಸಲಾಗಿದ್ದು ಇದು ಬಹುತೇಕ ಸತ್ಯ ಎಂದು ನಂಬಿ ಜನ ಮತ್ತಷ್ಟು ಮಂದಿ ಕಳುಹಿಸುತ್ತಿದ್ದಾರೆ. ವೈರಲ್ ಆದ ಬೆನ್ನಲ್ಲೇ ರಾಜ್ಯದ ಆರೋಗ್ಯ ಇಲಾಖೆಯ ಗಮನಕ್ಕೂ ಬಂದು ಈ ಬಗ್ಗೆ ಸ್ಪಷ್ಟನೆ ನೀಡುವಂತೆ ಸಿದ್ದರಾಮಯ್ಯ ಕಾನೂನು ಕಾಲೇಜಿಗೆ ಭೇಟಿ ನೀಡಿ ಆರೋಗ್ಯ ಇಲಾಖೆಯ ಸಿಬ್ಬಂದಿಯ ನೋಟಿಸ್ ನೀಡಿದ್ದಾರೆ.
Advertisement
ನೋಟಿಸ್‌ಗೆ ಸಮರ್ಪಕ ಉತ್ತರ ನೀಡದ ಆಡಳಿತಾಧಿಕಾರಿ ಶಿವಜ್ಯೋತಿ ಮತ್ತೆ ಅದೇ ಆದೇಶದ ಆರಂಭದಲ್ಲಿ ಆರೋಗ್ಯ ಇಲಾಖೆ ಎಂಬುದುನ್ನು ತೆಗೆದು ಹಾಕಿ ಟಿವಿ ಮಾಧ್ಯಮ ಹಾಗೂ ಜಾಹೀರಾತು ಮಾಹಿತಿ ಪ್ರಕಾರ ಎಂದು ಬರೆದು ಅದನ್ನೇ ಮರು ಆದೇಶ ಹೊರಡಿಸಿದ್ದಾರೆ.
ಈಗಲಾದರೂ ಸಂಬಂಧಪಟ್ಟ ಹಿರಿಯ ಅಧಿಕಾರಿಗಳು ಗಮನ ಹರಿಸಿ ಈ ಸೂಚನಾ ಪತ್ರದ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಬೇಕಿದೆ.