ಬೆಂಗಳೂರು: ಬಾಗಲಕೋಟೆ (Bagalkote) ತೋಟಗಾರಿಕೆ ವಿಶ್ವವಿದ್ಯಾಲಯ ಕಾಲೇಜುಗಳನ್ನ ಮಂಡ್ಯ (Mandya) ತೋಟಗಾರಿಕೆ ವಿಶ್ವವಿದ್ಯಾಲಯಕ್ಕೆ ಹಂಚಿಕೆ ಮಾಡಬಾರದು ಎಂದು ಬಿಜೆಪಿ (BJP) ಸದಸ್ಯರು ಸರ್ಕಾರಕ್ಕೆ ಆಗ್ರಹಿಸಿದರು.
ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಬಿಜೆಪಿ ಸದಸ್ಯರಾದ ತಳವಾರು ಸಾಬಣ್ಣ, ಪಿ.ಹೆಚ್.ಪೂಜಾರ್ ಈ ಬಗ್ಗೆ ಪ್ರಶ್ನೆ ಮಾಡಿದರು. ಬಾಗಲಕೋಟೆ ತೋಟಗಾರಿಕೆ ವಿವಿಯನ್ನ ಮುಚ್ಚುವ ಹುನ್ನಾರವನ್ನು ಸರ್ಕಾರ ಮಾಡುತ್ತಿದೆ. ಯಾವುದೇ ಕಾರಣಕ್ಕೂ ಬಾಗಲಕೋಟೆ ತೋಟಗಾರಿಕೆ ವಿವಿ ಮುಚ್ಚಬಾರದು. ರಾಜ್ಯದ ಅತಿ ದೊಡ್ಡ ತೋಟಗಾರಿಕೆ ವಿವಿ ಇದು. 18 ವರ್ಷಗಳಿಂದ ವಿವಿ ಉತ್ತಮ ಕೆಲಸ ಮಾಡುತ್ತಿದೆ. ಈ ವಿಶ್ವವಿದ್ಯಾಲಯವನ್ನ ಮುಚ್ಚಬಾರದು ಎಂದರು. ಇದನ್ನೂ ಓದಿ: ಕಾಮಗಾರಿ ಬಿಲ್ ಮಂಜೂರಾಗದಿದ್ದಕ್ಕೆ ಪೆಟ್ರೋಲ್ ಕ್ಯಾನ್ ಹಿಡಿದು ಗ್ರಾಪಂ ಸದಸ್ಯೆ ಹೈಡ್ರಾಮಾ
ಬಾಗಲಕೋಟೆ ವಿವಿಯಲ್ಲಿ ಈಗ ಇರುವ ತೋಟಗಾರಿಕೆ ಕಾಲೇಜುಗಳನ್ನು ಮಂಡ್ಯ ವಿವಿಗೆ ಸೇರ್ಪಡೆ ಮಾಡಲಾಗುತ್ತಿದೆ. ಸರ್ಕಾರದ ಈ ವ್ಯವಸ್ಥೆ ಸರಿಯಲ್ಲ. ಬಾಗಲಕೋಟೆ ತೋಟಗಾರಿಕೆ ವಿವಿ ಕಾಲೇಜುಗಳನ್ನ ಬೇರೆ ವಿವಿಗೆ(ಮಂಡ್ಯ ವಿವಿ) ಹಂಚಿಕೆ ಮಾಡಬಾರದು. ತೋಟಗಾರಿಕೆ ವಿವಿಯನ್ನು ವಿಭಾಗ ಮಾಡುವುದು ರೈತರಿಗೆ ಬರೆಯುವ ಮರಣ ಶಾಸನ ಆಗಿದೆ. ತೋಟಗಾರಿಕೆ ವಿವಿ ಕಾಲೇಜನ್ನು ಮಂಡ್ಯ ವಿವಿಗೆ ಸೇರ್ಪಡೆ ಮಾಡುವುದಕ್ಕೆ ನಮ್ಮ ವಿರೋಧ ಇದೆ ಎಂದು ತಿಳಿಸಿದರು. ಇದನ್ನೂ ಓದಿ: ನಾಯಿಗಳಂತೆ ಅತ್ಯಾಚಾರಿಗಳನ್ನೂ ಸಂತಾನಹರಣಗೊಳಿಸಬೇಕು: ರಾಜಸ್ಥಾನ ರಾಜ್ಯಪಾಲ
ಇದಕ್ಕೆ ಸಚಿವ ಎಸ್.ಎಸ್.ಮಲ್ಲಿಕಾರ್ಜುನ ಉತ್ತರಿಸಿ, ಮಂಡ್ಯದಲ್ಲಿ ತೋಟಗಾರಿಕೆ ವಿವಿ ಮಾಡಲು ಜನಪ್ರತಿನಿಧಿಗಳ ಒತ್ತಡಕ್ಕೆ ಮಣಿದು ಪ್ರಾರಂಭ ಮಾಡಲಾಗುತ್ತಿದೆ. ಜನಪ್ರತಿನಿಧಿಗಳ ಬೆಡಿಕೆ ಜಾಸ್ತಿ ಇತ್ತು. ಬಾಗಲಕೋಟೆ ದೂರ ಆಗುತ್ತದೆ. ಮಂಡ್ಯದಲ್ಲಿ ವಿವಿ ಮಾಡಿ ಎಂದು ಸಿಎಂಗೆ ಮನವಿ ಮಾಡಿದ್ದರು. ಅದರಂತೆ ಬಾಗಲಕೋಟೆ ವಿವಿಯ ಕೆಲವು ಕಾಲೇಜುಗಳನ್ನ ಮಂಡ್ಯ ವಿವಿಗೆ ಸೇರ್ಪಡೆ ಮಾಡುವ ತೀರ್ಮಾನ ಮಾಡಿ ಕ್ಯಾಬಿನೆಟ್‌ನಲ್ಲಿ ಒಪ್ಪಿಗೆ ಕೊಡಲಾಗಿದೆ ಎಂದು ಹೇಳಿದರು. ಸಚಿವ ಉತ್ತರಕ್ಕೆ ಬಿಜೆಪಿ ಸದಸ್ಯರು ವ್ಯಾಪಕವಾಗಿ ವಿರೋಧ ವ್ಯಕ್ತಪಡಿಸಿದರು.