ಚಿಕ್ಕಮಗಳೂರು: ಮಲೆನಾಡಿನ ಮನೆಗಳ ಮುಂದೆ ಕಾಂಗ್ರೆಸ್ಸಿಗರು ಮತ (Vote) ಕೇಳಲು ಬಂದ್ರೆ ಅವರ ಮೇಲೆ ನಾಯಿ ಬಿಡಲಾಗುವುದು ಎಂದು ಎಚ್ಚರಿಕೆಯ ಬೋರ್ಡ್ ಹಾಕಿ ಕಾಂಗ್ರೆಸ್ಸಿನ (Congress) ಪ್ರಣಾಳಿಕೆಗೆ ಹಿಂದೂ ಸಂಘಟನೆಗಳ ಕಾರ್ಯಕರ್ತರು ಆಕ್ರೋಶ ಹೊರಹಾಕಿದ್ದಾರೆ.
ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ರಾಜ್ಯದಲ್ಲಿ ಹಿಂದೂ ಸಂಘಟನೆ ಭಜರಂಗದಳ (Bajrang Dal) ನಿಷೇಧ ಮಾಡುತ್ತೇವೆ ಎಂದಿರುವ ಕಾಂಗ್ರೆಸ್ ಪ್ರಣಾಳಿಕೆ ವಿರುದ್ಧ ಹಿಂದೂ ಸಂಘಟನೆ ಕಾರ್ಯಕರ್ತರು ಕೆಂಡವಾಗಿದ್ದಾರೆ. ಇದನ್ನೂ ಓದಿ: ನಾನು ಮಂಡ್ಯದವಳೇ, ಗೌಡ್ತಿ, ನಾನು ಗೌಡ್ತಿ ಎನ್ನುವುದನ್ನು ಯಾರೂ ಕಿತ್ತುಕೊಳ್ಳಲು ಆಗಲ್ಲ: ರಮ್ಯಾ
Advertisement
Advertisement
ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಬಣಕಲ್ ಹೋಬಳಿಯ ಗುಡ್ಡಟ್ಟಿ ಎಂಬ ಗ್ರಾಮದಲ್ಲಿ ಅರುಣ್ ಎಂಬ ಭಜರಂಗದಳದ ಕಾರ್ಯಕರ್ತ ತಮ್ಮ ಮನೆ ಮುಂದೆ ಬೋರ್ಡ್ ಹಾಕಿ ಮತ ಕೇಳಲು ಬರುವ ಕಾಂಗ್ರೆಸ್ಸಿಗರಿಗೆ ಎಚ್ಚರಿಕೆ ನೀಡಿದ್ದಾರೆ. ʻʻಇದು ಬಜರಂಗದಳದವರ ಮನೆ. ಕಾಂಗ್ರೆಸ್ಸಿಗರು ಮತ ಕೇಳಲು ಅವಕಾಶವಿಲ್ಲ. ಕಾಂಗ್ರೆಸ್ಸಿಗರು ಮತ ಕೇಳಲು ಬಂದ್ರೆ ನಾಯಿಯನ್ನು ಬಿಡಲಾಗುವುದುʼʼಎಂಬ ಎಚ್ಚರಿಕೆ ಬೋರ್ಡ್ ಹಾಕಿದ್ದಾರೆ. ಇದನ್ನೂ ಓದಿ: ನಾನು ಮಂಡ್ಯದವಳೇ, ಗೌಡ್ತಿ, ನಾನು ಗೌಡ್ತಿ ಎನ್ನುವುದನ್ನು ಯಾರೂ ಕಿತ್ತುಕೊಳ್ಳಲು ಆಗಲ್ಲ: ರಮ್ಯಾ
Advertisement
Advertisement
ಕಾಫಿನಾಡು ಚಿಕ್ಕಮಗಳೂರು ಜಿಲ್ಲೆಯಲ್ಲಿ ಹಿಂದೂ ಸಂಘಟನೆ ಬಲಿಷ್ಠವಾಗಿದೆ. ದತ್ತಪೀಠದ ಹೋರಾಟ ಆರಂಭಗೊಂಡ ಮೇಲೆ ಮಲೆನಾಡು ಭಾಗದಲ್ಲಿ ಹಿಂದೂ ಸಂಘಟನೆ ಮತ್ತಷ್ಟು ಗಟ್ಟಿಯಾಗಿತ್ತು. ಇದೀಗ ಕಾಂಗ್ರೆಸ್ ಪ್ರಣಾಳಿಕೆ ವಿರುದ್ಧ ಕೆಂಡವಾಗಿರೋ ಬಜರಂಗದಳ ನಾನಾ ರೀತಿ ಕಾಂಗ್ರೆಸ್ ವಿರುದ್ಧ ಕಿಡಿಕಾರುತ್ತಿದೆ.