ಕಾಶಿ ವಿಶ್ವನಾಥನನ್ನ ಬಿಜೆಪಿ ವಿಶ್ವನಾಥ ಎನ್ನಬೇಡಿ: ಕೆ.ಎಸ್ ಈಶ್ವರಪ್ಪ

Public TV
2 Min Read
KS ESHWARAPPA

ರಾಯಚೂರು: ಕಾಶಿ ವಿಶ್ವನಾಥ ದೇವಸ್ಥಾನದಲ್ಲಿ (Kashi Vishwanath Temple) ಮಂದಿರ ಒಡೆದು ಮಸೀದಿ ಕಟ್ಟಿದ್ದರು ವಾರಣಾಸಿ ನ್ಯಾಯಾಲಯದ ತೀರ್ಪು ಸಂತೋಷ ತಂದಿದೆ. ಬಿಜೆಪಿ ರಾಮ ಅಂತ ಕೆಲ ಕಾಂಗ್ರೆಸ್ ನವರು ಕರೆಯುತ್ತಿದ್ದರು. ಈ ತೀರ್ಪಿನ ಮೂಲಕ ಬಿಜೆಪಿ ಕಾಶಿ ವಿಶ್ವನಾಥ ಎಂದು ಕರೆಯಬೇಡಿ. ಇಲ್ಲಿನ ಮುಸ್ಲಿಮರು ನಾವು ಅಣ್ಣ-ತಮ್ಮಂದಿರು. ಕಾಂಗ್ರೆಸ್‌ನವರು ಒಡೆದಾಳುವ ನೀತಿ ಮಾಡುತ್ತಿದ್ದಾರೆ, ನಮ್ಮನ್ನ ಒಡೆಯಬೇಡಿ ಅಂತ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದರು.

Kashi Vishwanath Temple Varanasi 2

ರಾಯಚೂರಿನಲ್ಲಿ (Raichur) ಮಾತನಾಡಿದ ಅವರು, ಔರಂಗಜೇಬನ ಕಾಲದಲ್ಲಿ ದೇವಾಲಯ ಒಡೆದು ಮಸೀದಿ ಕಟ್ಟಿದ್ದರು. ನೆಲಮಾಳಿಗೆಯಲ್ಲಿ ಹಿಂದೂಗಳ 10 ಮೂರ್ತಿ ಸಿಕ್ಕಿದೆ. 7 ದಿನ ಹಿಂದೂಗಳು ಪೂಜಿಸಲು ನ್ಯಾಯಾಲಯ ಅವಕಾಶ ಕೊಟ್ಟಿರುವುದು ಸಂತೋಷದ ವಿಷಯ. ಜೈಶ್ರೀರಾಮ ಅಂತ ಕರೆಯುತ್ತಿದ್ದೆವು ತೀರ್ಪಿನಿಂದ ಈಗ ಹರಹರ ಮಹಾದೇವ ಅಂತ ಕೆರೆಯುತ್ತೇವೆ. ವಾರಣಾಸಿ ನ್ಯಾಯಾಲಯ ತೀರ್ಪು ಎಲ್ಲರಿಗೂ ಸಂತೋಷ ತಂದಿದೆ. ಅಲ್ಲಿನ ಮುಸ್ಲಿಮರು ಹೈಕೋರ್ಟ್‌ಗೆ ಹೋಗ್ತೀವಿ ಅಂತಿದ್ದಾರೆ. ಅವರು ಎಲ್ಲಿಗಾದ್ರೂ ಹೋಗಲಿ ಅಭ್ಯಂತರವಿಲ್ಲ ಎಲ್ಲಾ ದಾಖಲೆಗಳು ನಮ್ಮ ಪರ ಇವೆ. ಮುಸ್ಲಿಂ ಪರ ವಕೀಲರಿಗೆ ಹೇಳುತ್ತೇನೆ ದಾಖಲೆಗಳು ನಮ್ಮ ಪರ ಇರುವುದರಿಂದ ತೀರ್ಪು ಒಪ್ಪಿಕೊಳ್ಳಬೇಕು ಅಂತ ಹೇಳಿದರು.

ಕಾಶಿ ವಿಶ್ವನಾಥ ದೇವಾಲಯದ ಪುನರ್ ನಿರ್ಮಾಣ ಆಗಬೇಕು. ಇನ್ನೂ ಕೆಳಗಡೆ ಅರ್ಧ ಮಂದಿರವಿದೆ. ನೀವು ನಮ್ಮ ಗುಲಾಮರು ಅಂತ ತೋರಿಸಲು ಮಂದಿರದ ಮೇಲೆ ಮಸೀದಿ ಕಟ್ಟಿದ್ದಾರೆ. ಕಾಶಿ ವಿಶ್ವನಾಥ ಟ್ರಸ್ಟ್ ನವರು ಮಂದಿರ ಪುನರ್ ನಿರ್ಮಾಣ ಮಾಡಲು ಮುಂದಾಗಬೇಕು ಅನ್ನೋದು ನಮ್ಮ ಅಪೇಕ್ಷೆ.ಇದನ್ನ ಯಾವುದೇ ಕಾರಣಕ್ಕೂ ರಾಜಕಾರಣಕ್ಕೆ ಎಳೆಯಬೆಡಿ ಎಂದರು. ಇದನ್ನೂ ಓದಿ: ಮೈಸೂರಿಗೂ ಕಾಲಿಟ್ಟ ಧ್ವಜ ದಂಗಲ್- ಪ್ರತಾಪ್ ಸಿಂಹ ವಿರೋಧದ ಬೆನ್ನಲ್ಲೇ ಟಿಪ್ಪು ಬಾವುಟ ತೆರವು

K.S Eshwarappa

ಯಾವ ಕಾರಣಕ್ಕೂ ಹಿಂದೂ ಸಮಾಜ ಒಡೆಯಬೇಡಿ. ಬಿಜೆಪಿಯ ಕಾಶಿ ವಿಶ್ವನಾಥ ಅನ್ನಬೇಡಿ. ಮುಸ್ಲಿಮರಿಗೆ ಏನ್ ಅವಕಾಶ ಸಿಗಬೇಕು ಅದನ್ನ ಕೋರ್ಟ್ ತೀರ್ಮಾನ ಮಾಡುತ್ತೆ. ಮಂದಿರ ಧ್ವಂಸ ಮಾಡಿದರೂ ನೆಲಮಾಳಿಗೆಯನ್ನ ಧ್ವಂಸ ಮಾಡಲು ಆಗಿಲ್ಲ. ದೇವನಾಗರಿ ಲಿಪಿ ಇರೋದು ಅಲ್ಲಿ ಗೊತ್ತಾಗಿದೆ. ಕಾಶಿಯಲ್ಲಿ ಮೂಲ ಮಂದಿರವನ್ನ ಪುನರ್ ಪ್ರತಿಷ್ಠಾಪನೆ ಮಾಡಬೇಕು.ಇಡೀ ಹಿಂದೂ ಸಮಾಜ ತೀರ್ಪನ್ನ ಸ್ವಾಗತ ಮಾಡುತ್ತದೆ.ಎಲ್ಲರೂ ಒಟ್ಟಾಗಿ ಭವ್ಯ ಮಂದಿರ ನಿರ್ಮಾಣ ಮಾಡೋಣ ಎಂದು ಈಶ್ವರಪ್ಪ ಹೇಳಿದರು.

Share This Article