– ಯಾವ ಜನ್ಮದಲ್ಲೂ ಕಾಂಗ್ರೆಸ್‌ಗೆ ಹೋಗಲ್ಲ, ಅದು ಮುಸ್ಲಿಮರ ಪಕ್ಷ: ಯತ್ನಾಳ್
ಕೊಪ್ಪಳ: ಯಾವ ಜನ್ಮದಲ್ಲಿಯೂ ಕಾಂಗ್ರೆಸ್‌ಗೆ (Congress) ಹೋಗಲ್ಲ, ಅದು ಮುಸ್ಲಿಮರ ಪಕ್ಷ ಎಂದು ವಿಜಯಪುರ (Vijayapura) ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (Basanagouda Patil Yatnal) ಹೇಳಿದರು.
ಗೋಶಾಲೆ ಉದ್ಘಾಟನಾ ಕಾರ್ಯಕ್ರಮಕ್ಕೆ ಆಹ್ವಾನಿಸಲು ಕೊಪ್ಪಳದ (Koppal) ಗವಿಮಠಕ್ಕೆ (Gavi Mutt)ಭೇಟಿ ನೀಡಿದ ಅವರು ಮಾಧ್ಯಮದವರೊಂದಿಗೆ ಮಾತನಾಡಿ, ಕಾಂಗ್ರೆಸ್ ಪಕ್ಷಕ್ಕೆ ಯಾವ ಜನ್ಮದಲ್ಲಿಯೂ ಹೋಗಲ್ಲ, ಅದು ಮುಸ್ಲಿಮರ ಪಕ್ಷ. ವಿಜಯೇಂದ್ರನ ಟೀಂನವರದ್ದು ನಕಲಿ ಸಾಮಾಜಿಕ ಜಾಲತಾಣವಿದೆ. ಅದರಲ್ಲಿ ಈ ರೀತಿ ಅಪಪ್ರಚಾರ ಮಾಡ್ತಾ ಇದ್ದಾರೆ. ಬಿಜೆಪಿಯಲ್ಲಿ ಸಾವಿರಾರು ಕೋಟಿ ಲೂಟಿ ಮಾಡಿದವರಿದ್ದಾರೆ. ಕೊರೊನಾ ಸಮಯದಲ್ಲಿ ಎಷ್ಟೆಷ್ಟೋ ಬಿಲ್ ಹಾಕಿದ್ದರು ಎಂದರು.ಇದನ್ನೂ ಓದಿ:ಟಾಲಿವುಡ್ ನೆಪೋಟಿಸಂ ಬಗ್ಗೆ ಮಾತನಾಡಿದ ‘ಲಕ್ಕಿ ಭಾಸ್ಕರ್’ ನಿರ್ಮಾಪಕ ನಾಗ ವಂಶಿ
ರಮೇಶ್ ಜಾರಕಿಹೊಳಿ, ಕುಮಾರ ಬಂಗಾರಪ್ಪ ನಿಮ್ಮ ಜೊತೆ ಇರುತ್ತಾರಾ ಎಂಬ ಪ್ರಶ್ನೆಗೆ ಸಿಡಿಮಿಡಿಗೊಂಡ ಅವರು, ನಿಮಗೆ ವಿಜಯೇಂದ್ರ ಏನಾದರೂ ಈ ರೀತಿ ಪ್ರಶ್ನೆ ಕೇಳುವಂತೆ ಕಳಿಸಿದ್ದಾನಾ? ಪದೇ ಪದೇ ಅದೇ ಕೇಳುತ್ತೀರಾ? ಮಾಧ್ಯಮದವರು ಪಾರದರ್ಶಕರಾಗೀರಿ, ವಿಜಯೇಂದ್ರ ವಾಟಾಪ್ಸ್ನಲ್ಲಿ ಕಳುಹಿಸಿದ್ದನ್ನು ನನಗೆ ಕೇಳಬೇಡಿ. ವಿಜಯೇಂದ್ರನ ಚಮಚಾಗಳಿದ್ದರೆ ನನಗೆ ಪ್ರಶ್ನೆ ಕೇಳಬೇಡಿ ಗೆಟ್ ಔಟ್, ಸುಮ್ಮನೇ ಸರಳ ಪ್ರಶ್ನೆ ಕೇಳಿ, ವಿಜಯೇಂದ್ರ ಕಡೆ ದುಡ್ಡು ತೆಗೆದುಕೊಂಡು ನನಗೆ ಪ್ರಶ್ನೆ ಕೇಳುವ ಹಾಗಿದ್ರೆ, ನನ್ನ ಪ್ರೆಸ್ ಮೀಟ್‌ಗಳಿಗೆ ಬರಬೇಡಿ ಎಂದು ಗರಂ ಆದರು.
ಯಡಿಯೂರಪ್ಪ ಹಾಗೂ ಅವನ ಮಗನದ್ದು ಸಾಕಷ್ಟು ಹಗರಣ ಇದೆ, ಅವರು ಹಣ ಕೊಟ್ಟು ಕೆಲವರನ್ನ ಖರೀದಿ ಮಾಡಿರಬಹುದು. ನಾನು ಇಡಿ ರಾಜ್ಯ ಸುತ್ತಾಡಿ ಜನರ ಅಭಿಪ್ರಾಯ ಸಂಗ್ರಹ ಮಾಡುತ್ತೇನೆ. ಯಡಿಯೂರಪ್ಪ ಮತ್ತು ವಿಜಯೇಂದ್ರ ವೀರಶೈವ ಲಿಂಗಾಯತರಿಗೆ ಮೀಸಲಾತಿ ತಪ್ಪಿಸಿದರು. ಇನ್ನೂ ಕಾಂಗ್ರೆಸ್ ಮಹಾನಾಯಕ ಮತ್ತು ಬಿಜೆಪಿಯ ಮಹಾಕಳ್ಳರು ಸೇರಿ ರಾಜಣ್ಣನ ಹನಿಟ್ರ‍್ಯಾಪ್ ಮಾಡಿದ್ದಾರೆ ಎಂದು ಆರೋಪಿಸಿದರು.ಇದನ್ನೂ ಓದಿ:ಐಪಿಎಲ್‌ನಿಂದ ಬ್ಯಾನ್ ಮಾಡಿ – ರಿಯಾನ್ ಪರಾಗ್ ವಿರುದ್ಧ ರೊಚ್ಚಿಗೆದ್ದ ಫ್ಯಾನ್ಸ್