– ತೇಜಸ್ವಿ ಸೂರ್ಯ ಬುದ್ಧಿವಂತ ಅಂದುಕೊಂಡಿದ್ದೆ
ಬೆಂಗಳೂರು: ಅನೇಕ ದಿನಗಳಿಂದ ವಕ್ಫ್ ಅದಾಲತ್ (Waqf Adalat) ಮಾಡಿದ್ದೆ. ಸರ್ಕಾರದ ಒಂದು ಇಂಚು ಜಾಗವನ್ನ ನಾವು ಪಡೆದಿಲ್ಲ. ದಾನಿಗಳು 1.12 ಲಕ್ಷ ಎಕರೆ ವಕ್ಫ್‌ಗೆ ದಾನ ಮಾಡಿದ್ದಾರೆ. ಇದರಲ್ಲಿ ಉಳಿದಿರೋದು ಕೇವಲ 23 ಸಾವಿರ ಎಕರೆ. ಹೀಗಾಗಿ ಈ ಜಾಗ ಉಳಿದುಕೊಳ್ಳಲು ವಕ್ಫ್ ಅದಾಲತ್ ಮಾಡಿದ್ದೇನೆ ಎಂದು ಸಚಿವ ಜಮೀರ್ ಅಹ್ಮದ್ (Zameer Ahmed Khan) ಹೇಳಿದ್ದಾರೆ.
Advertisement
ವಿಜಯಪುರ (Vijayapura) ರೈತರಿಗೆ ವಕ್ಫ್ ಬೋರ್ಡ್ ನೋಟಿಸ್ ವಿಚಾರ ವಿವಾದ ದೊಡ್ಡದಾಗುತ್ತಲೇ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ನಾನು ತೇಜಸ್ವಿಸೂರ್ಯ ಅವರನ್ನು ಬುದ್ಧಿವಂತ ಅಂದುಕೊಂಡಿದ್ದೆ. ನಾನು ರೈತರ ಮಗ. ಅವರಿಗೆ ಎಷ್ಟು ಕಾಳಜಿ ಇದೆಯೋ ನಮಗೂ ಹೆಚ್ಚು ಕಾಳಜಿ ಇದೆ. ನಾವು ರೈತರ ಮಕ್ಕಳು. ನಾವು ರೈತರ ಒಂದು ಇಂಚು ಜಾಗ ಪಡೆಯಲ್ಲ ಎಂದರು. ಇದನ್ನೂ ಓದಿ: ಭರ್ತಿಯಾದ ಕೆರೆಕಟ್ಟೆಗಳಿಂದ ಅವಾಂತರ – ಕೈಗೆಬಂದ ತುತ್ತು ಬಾಯಿಗೆ ಬಾರದ ಸ್ಥಿತಿಯಲ್ಲಿ ಚಿತ್ರದುರ್ಗ ರೈತರು
Advertisement
Advertisement
ವಿಜಯಪುರದಲ್ಲಿ ನಡೆದ ಮೀಟಿಂಗ್‌ಗೆ ಯತ್ನಾಳ್ ಅವರನ್ನು ಕರೆದಿದ್ದೆ. ಯತ್ನಾಳ್ ಅವರು ಬಂದಿಲ್ಲ. ಅನ್ಯಾಯ ಆಗಿದ್ದರೆ ಅವರು ಸಭೆಗೆ ಬರಬೇಕಿತ್ತು. ಆದರೆ ಬಂದಿರಲಿಲ್ಲ. ವಿಜಯಪುರದಲ್ಲಿ ಅದಾಲತ್ ಮಾಡಿದ್ದು ವಕ್ಫ್ನ ಆಸ್ತಿ ದಾಖಲಾತಿ ಮಾಡಬೇಕು ಅಂತ. 1,200 ಎಕರೆ ರೈತರ ಜಮೀನು ತೆಗೆದುಕೊಳ್ಳುತ್ತಿದ್ದಾರೆ ಎಂದು ಆರೋಪ ಮಾಡುತ್ತಾರೆ. ತೇಜಸ್ವಿಸೂರ್ಯ ಮಾಹಿತಿ ತೆಗೆದುಕೊಂಡು ಆರೋಪ ಮಾಡಬೇಕು ಎಂದು ಕಿಡಿಕಾರಿದರು. ಇದನ್ನೂ ಓದಿ: ದರ್ಶನ್‌ಗೆ ಇವತ್ತೂ ಸಿಗಲಿಲ್ಲ ಜಾಮೀನು – ಮಂಗಳವಾರಕ್ಕೆ ವಿಚಾರಣೆ ಮುಂದೂಡಿಕೆ
Advertisement
ಯತ್ನಾಳ್ ಮತ್ತು ತೇಜಸ್ವಿಸೂರ್ಯ ವಕ್ಫ್ ಆಸ್ತಿ ಬಗ್ಗೆ ಮಾತಾಡೋದು ಬಿಡಲಿ. ಮುಜರಾಯಿಯಲ್ಲಿ ಒಟ್ಟು 36 ಸಾವಿರ ಎಕರೆ ಇದೆ. ಇದರಲ್ಲಿ ಸುಮಾರು 740 ಎಕರೆ ಒತ್ತುವರಿ ಆಗಿದೆ. ಇದರ ಬಗ್ಗೆ ಯತ್ನಾಳ್, ತೇಜಸ್ವಿಸೂರ್ಯ ಮಾತನಾಡಲಿ ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಸಿದ್ದರಾಮಯ್ಯ ಕಟ್ಟಾ ಬೆಂಬಲಿಗ, ಮುಡಾ ಮಾಜಿ ಆಯುಕ್ತ ಡಿ.ಬಿ ನಟೇಶ್ ಮನೆ ಮೇಲೂ ಇಡಿ ದಾಳಿ!